ಕರಾವಳಿಯ ಕುವರ ರೂಪೇಶ್ ಶೆಟ್ಟಿಗೆ ಬಿಗ್ ಬಾಸ್ ಕಿರೀಟ
ಕರಾವಳಿಯ ಕುವರ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಇದೀಗ ಬಿಗ ಬಾಸ್ ಸೀಸನ್ 9 ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ತುಳು ಚಿತ್ರಗಳ ಮೂಲಕ ಹಾಗೂ ಹಲವಾರು ಸಮಾಜ ಸೇವೆಗಳ ಮುಖಾಂತರ ಕರಾವಳಿಯ ಜನರ ಮನಸನ್ನು ಗೆದ್ದಿರುವ ರೂಪೇಶದ ಶೇಟ್ಟಿ, ಬಿಗ್ ಬಾಸ್ ಶೋ ನಲ್ಲಿ ವಿಜೇತರಾಗಿರುವುದು ಹೆಮ್ಮೆಯ ಸಂಗತಿ.
ಸೆ.24ರಂದು ಶುರುವಾದ ಬಿಗ್ ಬಾಸ್ ಶೋ 100 ದಿನಗಳ ಕಾಲ ನಡೆದು, ಡಿ.31ಕ್ಕೆ ಮುಕ್ತಾಯಗೊಂಡಿದೆ. ಈ ಬಾರಿ ಒಟ್ಟು 18 ಮಂದಿ ಮನೆಯೊಳಗೆ ಎಂಟ್ರಿ ನೀಡಿದ್ದರು. ಅದರಲ್ಲಿ ಅಂತಿಮವಾಗಿ ಕರಾವಳಿಯ ಹುಡುಗ ರೂಪೇಶ್ ಶೆಟ್ಟಿ ವಿನ್ನರ್ ಪಟ್ಟ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲೂ ಕಮಾಲ್ ಮಾಡಿದ್ದ ಅವರು, ಎರಡೂ ಸೀಸನ್‍ಗಳಿಂದ 145 ದಿನಗಳವರೆಗೆ ಶೋನಲ್ಲಿ ಇದ್ದರು. ಇದೀಗ ಅವರು ಗೆದ್ದು ಬೀಗಿದ್ದಾರೆ. ಗೆದ್ದ ನಂತರ ಮೊದಲ ಪ್ರತಿಕ್ರಿಯೆ ನೀಡಿರುವ ಅವರು, ‘ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ. ನಾನು ಗೆದ್ದಿಲ್ಲ, ನೀವು ನನ್ನನ್ನು ಗೆಲ್ಲಿಸಿದ್ದೀರಿ..’ ಎಂದಿದ್ದಾರೆ.