ಕೇರಳದ ಆರ್.ಎಸ್.ಎಸ್ ಕಾರ್ಯಕರ್ತ ರಮೇಶ್ ನಿವಾಸಕ್ಕೆ ಸಚಿವ ಎಸ್.ಅಂಗಾರ ಭೇಟಿ

ಕೇರಳದ ಕಾಸರಗೋಡು ಜಿಲ್ಲೆಯ ತಾಳಿಪಡ್ಪುವಿನ ಆರ್.ಎಸ್.ಎಸ್ ಕಾರ್ಯಕರ್ತ ರಮೇಶ್ ನಿವಾಸಕ್ಕೆ ಸಚಿವ ಎಸ್.ಅಂಗಾರ ಭೇಟಿ, ಮಾತುಕತೆ ನೀಡಿದರು.ಇನ್ನು ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಮೆರವಣಿಗೆ ವೇಳೆ ಪೊಲೀಸರು ಲಾಠಿ ಜಾರ್ಚ್ ನಡೆಸಿದ್ರು. ಈ ವೇಳೆ ಆರ್.ಎಸ್.ಎಸ್ ಕಾರ್ಯಕರ್ತ ರಮೇಶ್ ಪೊಲೀಸರ ನಡುವೆ ವಾಗ್ವಾದ ನಡೆಸಿದರು. ರಾಜ್ಯ ಸರ್ಕಾರ ತೀವ್ರ ಮುಖಭಂಗದ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದು, ರಮೇಶ್ ಮೇಲೆ ಲಾಠಿ ಚಾರ್ಜ್ ಬಗ್ಗೆ ಭಾರೀ ವಿವಾದ ಏರ್ಪಟ್ಟಿತ್ತು. ಈ ವಿಡಿಯೋ ವೈರಲ್ ಆಗಿ ಆರ್ ಎಸ್ ಎಸ್ ನಾಯಕರಿಂದಲೂ ಬಿಜೆಪಿ ಮುಖಂಡರ ವಿರುದ್ದ ಅಸಮಾಧಾನ ವ್ಯಕ್ತವಾಗಿತ್ತು. ವಿಡಿಯೋ ವೀಕ್ಷಿಸಿ ರಮೇಶ್ ಬಳಿ ಸಚಿವ ಅಂಗಾರ ಬೇಸರ ವ್ಯಕ್ತಪಡಿಸಿದರು. ಸುಳ್ಯ ಮತ್ತು ಪುತ್ತೂರಿನ ಬಿಜೆಪಿ ನಾಯಕರ ಪಾಲ್ಗೊಂಡಿದರು. ಇನ್ನು ಸಚಿವರ ಅಂಗಾರ ಭೇಟಿ ಹಿನ್ನೆಲೆ 100ಕ್ಕೂ ಅಧಿಕ ಕೇರಳ ಪೆÇಲೀಸರಿಂದ ಬಿಗು ಭದ್ರತೆ ವಹಿಸಲಾಗಿತ್ತು.
