ಮಸೂದ್ ಮತ್ತು ಫಾಸಿಲ್ ಪ್ರಕರಣವನ್ನು ಎನ್ಐಎ ಗೆ ಕೊಟ್ಟು ಮುಖ್ಯಮಂತ್ರಿ ರಾಜ ಧರ್ಮ ಪಾಲಿಸಲಿ:-ಎಸ್‌ಡಿಪಿಐ

ದ.ಕ ಜಿಲ್ಲೆಯ ಬೆಳ್ಳಾರೆ ಸಮೀಪದ ಕಳಂಜ ಮಸೂದ್ ಮತ್ತು ಸುರತ್ಕಲ್‌ನ ಫಾಝಿಲ್ ಕೊಲೆ ಪ್ರಕರಣವನ್ನು ಕೂಡ ಪ್ರವೀಣ್ ಪ್ರಕರಣದಂತೆ ಎನ್‌ಐಎ ಗೆ ವಹಿಸಿ ಮುಖ್ಯ ಮಂತ್ರಿ ರಾಜ ಧರ್ಮ ಪಾಲಿಸಲಿ ಎಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಆಗ್ರಹಿಸಿದ್ದಾರೆ.ಯಾವುದೇ ಕೊಲೆಯು ಸಮರ್ಥನೀಯವಲ್ಲ ಮೂರು ಕೊಲೆಯು ಖಂಡನೀಯವಾಗಿದೆ.ಶಾಂತಿಯಾಗಿದ್ದ ದ.ಕ ಜಿಲ್ಲೆಯನ್ನು RSS ನ ಅಂಗ ಸಂಸ್ಥೆ ಭಜರಂಗದಳದ ಕಾರ್ಯಕರ್ತರು ಕಳಂಜದ ಮಸೂದ್ ನನ್ನು ಕೊಲೆ ನಡೆಸಿ ಅಶಾಂತಿಗೆ ಅಶಾಂತಿ, ಕೋಮು ವೈಷಮ್ಯಕ್ಕೆ ನಾಂದಿ ಹಾಡಿ ಫಾಝಿಲ್ ಕೊಲೆಯ ತನಕ ತಂದು ನಿಲ್ಲಿಸಿದ್ದಾರೆ.

ಪ್ರವೀಣ್ ಹತ್ಯೆಯಲ್ಲಿ ಪೋಲಿಸರು ಒತ್ತಡಕ್ಕೆ ಮಣಿದು ಅಮಾಯಕರ ಬಂಧನ ನಡೆಸುತ್ತಿರುವುದು ಖಂಡನೀಯವಾಗಿದೆ.
ಈಗ ಆರೋಪಿಗಳೆಂದು ಬಂಧಿಸಿರುವ ನಾಲ್ವರು ಅಮಾಯಕರಾಗಿದ್ದಾರೆ ಪೋಲಿಸರು ಒತ್ತಡಕ್ಕೆ ಮಣಿದು ಇವರನ್ನು ಸಿಳುಕಿಸಿದ್ದಾರೆಂದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಘಟನೆ ನಡೆದ ದಿನ ಆರೋಪಿಗಳೆಂದು ಮೊದಲು ಬಂಧಿಸಿದ ಶಫೀಕ್ ತನ್ನ ಅಜ್ಜಿಯ ತಿಥಿ ಕಾರ್ಯಕ್ರಮದಲ್ಲಿದ್ದರೆ,ಝಾಕಿರ್ ಸವಣೂರಿನ ಸಹಲ್ ಕಾಂಪ್ಲೆಕ್ಸ್ ಬಳಿ ಇದ್ದ,ಒಂದು ವೇಳೆ ಈ ಕೃತ್ಯದಲ್ಲಿ ಅವರ ಪಾತ್ರ ಇರುತ್ತಿದ್ದರೆ ಇವರು ಊರಿನಲ್ಲಿ ಇರುತ್ತಿದ್ದರೆ ಎಂದು ಸಾಮಾನ್ಯ ಜ್ಞಾನ ಇರುವವರಿಗೂ ತಿಳಿಯುವ ವಿಚಾರವಾಗಿದೆ.ಅದೇ ರೀತಿ ಘಟನೆ ನಡೆಯುವಾಗ ಆ ಏರಿಯಾದ ಬೀದಿ ದೀಪಗಳನ್ನು ಶಫೀಕ್ ಮತ್ತು ಝಾಕಿರ್ ಆರಿಸಿದ್ದಾರೆ ಎಂಬುದಕ್ಕೆ ಯಾವ ಸಾಕ್ಷಿ ಇದೆ ಎಂಬುದನ್ನು ಪೋಲಿಸ್ ಇಲಾಖೆ ಬಹಿರಂಗ ಪಡಿಸಬೇಕು.ಹಾಗೂ ಪೋಲಿಸರು ಇವರನ್ನು ಮನೆಯಿಂದಲೇ ವಿಚಾರಣೆಗೆಂದು ವಶಕ್ಕೆ ಪಡೆದುಕೊಂಡಿದ್ದರು ಉನ್ನತ ಪೋಲಿಸ್ ಅಧಿಕಾರಿಗಳು ಇವರನ್ನು ಕೇರಳ ಗಡಿಯಿಂದ ಬಂದಿಸಲಾಗಿದೆ ಎಂದು ಸುಳ್ಳು ಹೇಳಿದ್ದು ಯಾಕೆ?ಹಾಗೂ ಪ್ರವೀಣ್ ಅಂಗಡಿ ಸುತ್ತ ಮುತ್ತ ಹಿಂದೂ ಸಮುದಾಯದ ಮಾಲಿಕತ್ವದ ಅಂಗಡಿಗಳು ಇವೆ,ಅವರ ಅಂಗಡಿಯ ಸಿಸಿ ಕೆಮರಾ ಗಳು ಆಫ್ ಮಾಡಲಾಗಿತ್ತೆ ಹಾಗೂ ಅವರ ಅಂಗಡಿಯ ವರಾಂಡದ ಲೈಟ್ ನ್ನು ಆಫ್ ಮಾಡಿದ್ದು ಯಾಕೆ? ಆ ಏರಿಯಾದ ಅಂಗಡಿಗವರೆಲ್ಲಾ ಬೇಗ ಬಂದ್ ಮಾಡಿ ಹೋಗಿದ್ದರೆ ಎಂಬ ಹಲವಾರು ಸಂಶಯಗಳು ಸಾರ್ವಜನಿಕ ವಾಗಿ ಚರ್ಚೆಯಾಗುತ್ತಿದೆ ಇದೆಲ್ಲದಕ್ಕೂ ಪೋಲಿಸ್ ಇಲಾಖೆ ಉತ್ತರಿಸಬೇಕು.

ಅದೇ ರೀತಿ ಇಂದು ಬಂಧನವಾಗಿರುವ ಸದ್ದಾಂ ಹಾಗೂ ಹಾರಿಸ್ ಎಂಬವರನ್ನು ಕೂಡ ಸಿಳುಕಿಸಲಾಗಿದೆ ಎಂಬ ಸಂಶಯ ಮೂಡಿದೆ.ಯಾಕೆಂದರೆ ಶನಿವಾರ ಬೆಳಿಗ್ಗೆ 10.30 ಕ್ಕೆ ಸದ್ದಾಂ ಎಂಬವರನ್ನು ಕಾಣಿಯೂರಿನಿಂದ ವಶಕ್ಕೆ ಪಡೆಯಲಾಗಿದೆ ಎಂಬ ವಾರ್ತೆಯು ಎಲ್ಲಾ ವಾರ್ತಾ ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿತ್ತು.ಆದರೆ ವಾಸ್ತವದಲ್ಲಿ ಆ ವೇಳೆಯಲ್ಲಿ ಆತ ತನ್ನ ‌ಮನೆಯಲ್ಲಿಯೇ ಇದ್ದ,ಆ ದಿನ ಸಂಜೆ 5.30 ಕ್ಕೆ ಪೋಲಿಸರು ಆತನನ್ನು ವಿಚಾರಣೆಗೆಂದು ವಶಕ್ಕೆ ಪಡೆದು ಇಂದು ಬಂಧನವನ್ನು ಖಚಿತಪಡಿಸಿರುವುದು.ಒಂದು ವೇಳೆ ಕೊಲೆಯಲ್ಲಿ ಇವರ ಪಾತ್ರ ಇದ್ದಿರುತ್ತಿದ್ದರೆ ಇವರೂ ಕೂಡ ತಪ್ಪಿಸಿಕೊಳ್ಳುತ್ತಿರಲಿಲ್ವಾ ಅದಲ್ಲದೇ ವಾರ್ತಾ ಮಾಧ್ಯಮಗಳಲ್ಲಿ ಬೆಳಿಗ್ಗೆಯೆ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹರಿದಾಡುತ್ತಿದ್ದರು ತಾನು ನಿರಪರಾಧಿ ಎಂದು ಅಷ್ಟು ಸ್ಪಷ್ಟತೆ ಇರುವುದರಿಂದಲೇ ತಪ್ಪಿಸಿಕೊಳ್ಳದೆ ಮನೆಯಲ್ಲಿ ಇದ್ದ ಎಂಬುದನ್ನು ಪೋಲಿಸರು ಹಾಗೂ ಜನತೆ ತಿಳಿದುಕೊಳ್ಳಬೇಕು

ಪ್ರವೀಣ್ ಹತ್ಯೆಯ ಹಿಂದಿರುವ ನೈಜ ಆರೋಪಿಗಳನ್ನು ಬಂಧಿಸಬೇಕು.ಹಾಗೂ ಪ್ರವೀಣ್ ತಂದೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಂತೆ ಪ್ರವೀಣ್ ನಿಗೆ ಆತನ ಅಂಗಡಿಯ ಅಕ್ಕಪಕ್ಕದ ನಾಲ್ವರು ಶತ್ರುಗಳಿದ್ದರು ಅವರ ಮೇಲೆಯೂ ಸಂಶಯವಿದೆ.ಮಗನ ಅಂತಿಮ ದರ್ಶನಕ್ಕೆ ಅವರು ನಾಲ್ವರು ಬಂದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ.ಇದನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಈ ಆಯಾಮದಲ್ಲೂ ತನಿಖೆ ನಡೆಸಬೇಕು. ಹಾಗೂ ಮುಖ್ಯಮಂತ್ರಿ ಹಾಗೂ ಸರ್ಕಾರದ ಸಚಿವರುಗಳು ಪ್ರವೀಣ್ ಮನೆಗೆ ಭೇಟಿ ನೀಡಿ ಪರಿಹಾರದ ಚೆಕ್ ವಿತರಣೆ ಮಾಡಿದ ಸಂದರ್ಭದಲ್ಲಿ RSS ನ ಸಹ ಸಂಘಟನೆ ಭಜರಂಗದಳದ ಗೂಂಡಗಳಿಂದ ಕೊಲೆಯಾದ ಮಸೂದ್ ನ ಮನೆಗೆ ಸೌಜನ್ಯಕ್ಕಾದರು ಬೇಟಿ ನೀಡದ ನಡೆಯು ರಾಜ್ಯವನ್ನೇ ತಲೆ ತಗ್ಗಿಸುವಂತೆ ಮಾಡಿದೆ ಹಾಗೂ ಬಿಜೆಪಿಯ ನೀಚ ಸಂಸೃತಿಯನ್ನು ಮತ್ತೊಮ್ಮೆ ನೆನಪಿಸಿದೆ.

ಹಾಗಾಗಿ ಸರ್ಕಾರ ಮಸೂದ್ ಮತ್ತು ಫಾಝಿಲ್ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ಮತ್ತು ಎನ್ಐಎ ಗೆ ವಹಿಸಿ ಪ್ರತ್ಯೇಕ ತನಿಖೆ ನಡೆಸಿ ಈ ಪ್ರಕರಣದ ಹಿಂದಿರುವ ಷಡ್ಯಂತರವನ್ನು ಬಹಿರಂಗ ಪಡಿಸಲಿ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published.