ಓಷಿಯನ್ ಎಂಪೈರ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಓಣಂ ಹಬ್ಬವನ್ನು ಸಂಭ್ರಮಿಸಿ

ಓಣಂ ಹಬ್ಬ ಕೇರಳದ ಜನರ ಪ್ರೀತಿಯ ಹಬ್ಬ,ಎಲ್ಲೆಡೆಯು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದ್ದು, ಮಂಜೇಶ್ವರದಲ್ಲಿರುವ ಓಷಿಯನ್ ಎಂಪೈರ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ಸಂಸ್ಕೃತಿ, ಸಂಪ್ರದಾಯದ ಪ್ರತಿರೂಪವೇ ಓಣಂ ಹಬ್ಬ. ಕೇರಳದ ಜನತೆ ಬಹಳ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಓಣಂ ಅನೇಕ ಆಸಕ್ತಿದಾಯಕ ಆಚರಣೆಗಳನ್ನು ಹೊಂದಿದೆ.
ಅತ್ಯಂತ ವರ್ಣರಂಜಿತ ಓಣಂ ಆಚರಣೆಗಳಲ್ಲಿ ಒಂದು ಹೂವಿನ ರಂಗೋಲಿಗಳು ಅಥವಾ ಪೂಕಳಂಗಳನ್ನು ರಚಿಸುವುದು ಹಬ್ಬದ ವಾತಾವರಣವನ್ನು ಇಮ್ಮಡಿಗೊಳಿಸುತ್ತದೆ. ಅಂತೆಯೇ ಮಂಜೇಶ್ವರದಲ್ಲಿರುವ ಹೆಸರಾಂತ ರೆಸ್ಟೋರೆಂಟ್ ಗಳಲ್ಲಿ ಒಂದಾದ ಓಷಿಯನ್ ಎಂಪೈರ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಹಬ್ಬದ ಸಂಭ್ರಮ. ವಿವಿಧ ವಿನ್ಯಾಸದ ಪುಷ್ಪ ಚಿತ್ತಾರಗಳು, ಬಗೆ ಬಗೆಯ ಭಕ್ಷ್ಯಗಳು ಗ್ರಾಹಕರಿಗಾಗಿ ಉಣಬಡಿಸುತ್ತಾರೆ. ಗ್ರಾಹಕರಿಗಾಗಿ ವೆಜ್ ಕ್ಯಾಟರಿಂಗ್ ಸೇವೆಯನ್ನು ಕೂಡ ಒದಗಿಸುತ್ತಿದ್ದಾರೆ.