ಗಬ್ಬೆದ್ದ ಸ್ಮಾರ್ಟ್ ಸಿಟಿ ; ಡ್ರೈನೇಜ್ ರಾಡಿಯಲ್ಲಿ ಜನರನ್ನು ಮೀಯಿಸಿದ ಅಧಿಕಾರಸ್ಥರು !

ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ವೃತ್ತದಲ್ಲಿ ಒಂದು ವಾರದಿಂದ ಡ್ರೈನೇಜ್ ನೀರು ಮಳೆಗಾಲದ ರೀತಿ ಉಕ್ಕುತ್ತಾ ರಸ್ತೆಯಲ್ಲಿ ರಾಡಿಯೆಬ್ಬಿಸಿದೆ. ಜನರು ಅದೇ ಟಾಯ್ಲಟ್ ನೀರಿನಲ್ಲಿ ಕೈಕಾಲಿಗೆ ಅಭಿಷೇಕ ಮಾಡಿಕೊಂಡು ಮುಖ ಮುಚ್ಚಿಕೊಂಡು ನಡೆದುಕೊಂಡು ಹೋಗುತ್ತಿದ್ದಾರೆ.

ನಾಲ್ಕು ದಿನಗಳ ಹಿಂದೆ ಪಾಲಿಕೆಯ ಕಾರ್ಮಿಕರು ಬಂದು ಅಲ್ಲೇನೋ ಪೈಪ್ ಹಾಕಿ ಏನೋ ಕೆರೆಯುತ್ತಿದ್ದರು. ಡ್ರೈನೇಜ್ ನೀರು ಮಾತ್ರ ನಿಂತಿರಲಿಲ್ಲ. ಅಲ್ಲಿದ್ದ ಪಾಲಿಕೆಯ ಅಧಿಕಾರಿಗಳು ಪೈ ಸೇಲ್ಸ್ ಕಟ್ಟಡದ ಬಳಿಯ ಮರದ ಬಗ್ಗೆ ದೂರುತ್ತಿದ್ದರು. ಮರದ ಬೇರು ಬಂದು ಡ್ರೈನೇಜ್ ಪೈಪ್ ಒಡೆದಿದೆ ಅಂತ. ಆರು ತಿಂಗಳ ಹಿಂದಷ್ಟೇ ಬಂಟ್ಸ್ ಹಾಸ್ಟೆಲ್ ಕಾಂಕ್ರೀಟ್ ರಸ್ತೆಯನ್ನು ಅಗೆದು ಯುಜಿಡಿ ಕಾಮಗಾರಿ ನಡೆಸಲಾಗಿತ್ತು. ಈಗ ಅಲ್ಲಿಯೇ ಮೇಲ್ಭಾಗದಲ್ಲಿ ಡ್ರೈನೇಜ್ ನೀರು ಉಕ್ಕತೊಡಗಿದೆ. ಒಂದು ವಾರದಿಂದ ನೀರು ಉಕ್ಕುತ್ತಾ ರಸ್ತೆಯಲ್ಲೆಲ್ಲ ಹರಿಯುತ್ತಿದ್ದರೂ ಪಾಲಿಕೆಯ ಅಧಿಕಾರಿಗಳಿಗೆ, ಕಾಪೆರ್Çಟರ್ ಗಳಿಗೆ ಗಮನಿಸುತ್ತಿಲ್ಲ. ಒಂದು ತಿಂಗಳಿಂದ ಒಸರುತ್ತಿದ್ದು, ವಾರದಿಂದ ಉಕ್ಕತೊಡಗಿದೆ ಎನ್ನುತ್ತಾರೆ, ಸ್ಥಳೀಯರು.

ಏನೂ ತಪ್ಪು ಮಾಡದ ಮರಕ್ಕೆ ಈಗ ಕೊಡಲಿ ಹಾಕಿದ್ದಾರೆ. ಬೇರು ಬಂದಿದ್ದರೆ ಅದನ್ನು ತೆರವು ಮಾಡಿ, ತತ್ಕಾಲಕ್ಕೆ ನೀರು ಹರಿಯಲು ವ್ಯವಸ್ಥೆ ಮಾಡಬಹುದಿತ್ತು. ಆದರೆ ಯಾರದ್ದೋ ಹಿತಾಸಕ್ತಿಗಾಗಿ ಮರ ಕಡಿಯಬೇಕಿತ್ತು ಅದಕ್ಕಾಗಿ ವಾರ ಕಾಲ ನೀರು ಹರಿಸಿದ್ದಾರೆ. ಸ್ಮಾರ್ಟ್ ಸಿಟಿಯನ್ನು ಗಬ್ಬೆದ್ದ ಸಿಟಿಯಾಗಿ ಮಾಡಿದ್ದಾರೆ. ಡ್ರೈನೇಜ್ ಹರಿವು ನಿಲ್ಲಿಸಬೇಕು ಎನ್ನುವುದಿದ್ದರೆ, ಅಲ್ಲಿನ ಕಾಪೆರ್Çರೇಟರ್ ರಾತ್ರಿ- ಹಗಲು ಕೆಲಸ ಮಾಡಿಸುತ್ತಿದ್ದರು ಎನ್ನುತ್ತಾರೆ ಸ್ಥಳೀಯರು
