ಸುಬ್ರಹ್ಮಣ್ಯ: ಕುಲ್ಕುಂದಲ್ಲಿ ರಸ್ತೆ ಕಾಮಗಾರಿಗೆ ಸಚಿವ ಅಂಗಾರರಿಂದ ಗುದ್ದಲಿ ಪೂಜೆ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಎಸ್ ಅಂಗಾರ ಅವರು ಕುಲ್ಕುಂದದಲ್ಲಿ ಇಂದು 22 ಕೋಟಿಯ ರಾಜ್ಯ ಹೆದ್ದಾರಿ ಅಭಿವೃದ್ಧಿಯ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ನಾಲ್ಕನೇ ಹಂತದ ಎರಡನೇ ಘಟ್ಟದ ಯೋಜನೆ ಅಡಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಸುಬ್ರಹ್ಮಣ್ಯ ಉಡುಪಿ ರಾಜ್ಯ ಹೆದ್ದಾರಿ 37ರ ಕುಲ್ಕುಂದದಿಂದ ವೆಂಕಟಪುರ ಮತ್ತು ಕೈಕಂಬದಿಂದ ನೆಟ್ಟಣ ಒಟ್ಟಾಗಿ 7.08 ಕಿ.ಮೀ 5.5 ಮೀ ನಿಂದ 7 ಮೀಟರ್ ಅಗಲವಾಗಲಿದೆ, ಹಾಗೂ ಬೆಂಗಳೂರು ಜಾಲ್ಸೂರು ರಾಜ್ಯ ಹೆದ್ದಾರಿ 85ರ ಬಿಸ್ಲೆ ಘಾಟ್ 4.5 ಕಿ.ಮೀ ಹಾಗೂ ನಾರ್ಣಕಜೆಯಿಂದ ಸೋಣಂಗೇರಿಯವರೆಗೆ 4.5 ಕಿ.ಮೀ. ರಸ್ತೆ 3.75 ರಿಂದ 5.5 ಮೀಟರ್ ಅಗಲೀಕರಣ ಕಾಮಗಾರಿ ನಡೆಯಲಿದೆ.

ರೂ.22 ಕೋಟಿ ಅನುದಾನದಲ್ಲಿ ಈ ಕಾಮಗಾರಿಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಸಹಾಯಕ ಅಭಿಯಂತರ ಲೊಕೇಶ್ ಎ ಪಿ, ಜೂನಿಯರ್ ಇಂಜಿನಿಯರ್ ಪರಮೇಶ್ವರ, ಪುತ್ತೂರು ಉಪ ವಿಭಾಗದ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು

Related Posts

Leave a Reply

Your email address will not be published.