ಸುಳ್ಯ. ಅರೆಭಾಷೆ ಕಾಮಿಡಿ ರಿಯಾಲಿಟಿ ಶೋದ ಮೊದಲ ಆಡಿಷನ್ ನ ಉದ್ಘಾಟನಾ ಕಾರ್ಯಕ್ರಮ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, v4 ನ್ಯೂಸ್ ಹಾಗೂ ಎಂ.ಬಿ. ಫೌಂಡೇಶನ್ ಸಹಯೋಗದಲ್ಲಿ ಅರೆಭಾಷೆ ಕಾಮಿಡಿ ಇದರ ಮೊದಲ ಆಡಿಷನ್ ನ ಉದ್ಘಾಟನಾ ಕಾರ್ಯಕ್ರಮವು ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅರೆಭಾಷೆಯ ಸಂಸ್ಕೃತಿ ಆಚಾರ ವಿಚಾರವನ್ನು ಇಡೀ ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಅರೆಭಾಷೆ ಕಾಮಿಡಿ ರಿಯಾಲಿಟಿ ಶೋ ಆಯೋಜನೆ ಮಾಡಿದ್ದೇವೆ. ಈ ಹೊಸ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿದ್ದ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ಒಳಲಂಬೆ, ದಕ್ಷಿಣ ಜಿಲ್ಲಾ ಜೇನು ಅಭಿವೃದ್ದಿ ಇಲಾಖೆಯ ಅಧ್ಯಕ್ಷ ಚಂದ್ರ ಕೋಲ್ಚಾರು, ವೆಂಕಟ್ರಮಣ ಕ್ರೆಡಿಟ್ ಕೊ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಸಿ. ಸದಾನಂದ, ಉಪಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಎ.ವಿ ತೀರ್ಥರಾಮ, ಕೆ.ಟಿ. ವಿಶ್ವನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷರಾದ ಭರತ್ ಮುಂಡೋಡಿ, , ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು, ಅರೆಭಾಷೆ ಅಕಾಡೆಮಿ ಸದಸ್ಯರಾದ ಡಾ. ಜ್ಞಾನೇಶ್, ಲತಾ ಕುದ್ಪಾಜೆ, ಚಂದ್ರಾವತಿ ಬಡ್ಡಡ್ಕ, ಅರೆಭಾಷೆ ಕಲಾವಿದರ ಒಕ್ಕೂಟದ ಅಧ್ಯಕ್ಷ ಭವಾನಿ ಶಂಕರ ಅಡ್ತಲೆ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ವಿ4 ನ್ಯೂಸ್ ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್, ಎಂ.ಬಿ. ಫೌಂಡೇಶನ ಅಧ್ಯಕ್ಷರಾದ ಎಂ.ಬಿ.ಸದಾಶಿವ, ವಿ4 ನ್ಯೂಸ್ ನ ಪ್ರಾದೇಶಿಕ ಸುದ್ದಿ ಸಂಪಾದಕರಾದ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.