ಸುಳ್ಯ: ಕೆಳ ಮತ್ತು ಮಧ್ಯಮ ವರ್ಗಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ – ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ ಸದಾಶಿವ

ಕೆಳ ಮತ್ತು ಮಧ್ಯಮ ವರ್ಗದ ಜನರ ಏಳಿಗೆಯ ದೃಷ್ಠಿಯಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ. ಅಟಲ್ ಟಿಂಕರ್ ಲ್ಯಾಬ್‌ಗಳನ್ನು ಶಾಲೆಗಳಿಗೆ ವಿಸ್ತರಿಸಿರುವುದು, ಆದಾಯ ತೆರಿಗೆ ಪಾವತಿಯ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಿರುವುದು, ಕಿಸಾನ್ ಕೆಡಿಟ್‌ನ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದು ಜೊತೆಗೆ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸೆಂಟರ್‌ಗಳನ್ನು ತೆರೆಯುವುದಲ್ಲದೆ ಜೀವರಕ್ಷಕ ಔಷಧಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ದೊರಕಿಸಿಕೊಟ್ಟಿರುವುದು ಬಡವರ ಪರ ಯೋಜನೆಗೆ ಕನ್ನಡಿಯಂತಿದೆ. ಮಕ್ಕಳಿಗೆ ಹಾಗೂ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶ ಆಹಾರ ನೀಡುವ ಗುರಿ ಹೊಂದಿದ ಯೋಜನೆ ಮುಂದಿನ ಜನಾಂಗದ ಏಳಿಗೆಗಾಗಿ ಉತ್ತಮ ಯೋಜನೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ ಸದಾಶಿವ ಹೇಳಿದರು.
