ಉಡುಪಿ : ಫೆ.04ರಂದು ಮಹತಿ ಎಂಟರ್‌ಪ್ರೈಸಸ್ ಪವರ್ ಟ್ರೋನಿಕ್ ಸಿಸ್ಟಮ್ ಸೊಲಾರ್ & ಯುಪಿಎಸ್ ಸೊಲ್ಯೂಷನ್ಸ್‌ನ ಉದ್ಘಾಟನೆ

ಉಡುಪಿ : ಉಡುಪಿ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಎದುರು ಶ್ರೀ ವಾಸುದೇವ ಬಿಲ್ಡಿಂಗ್‌ನ ನೆಲ ಮಹಡಿಯಲ್ಲಿ ಮಹತಿ ಎಂಟರ್‌ಪ್ರೈಸಸ್ ಪವರ್ ಟ್ರೋನಿಕ್ ಸಿಸ್ಟಮ್ ಸೊಲಾರ್ & ಯುಪಿಎಸ್ ಸೊಲ್ಯೂಷನ್ಸ್‌ನ ಉದ್ಘಾಟನಾ ಸಮಾರಂಭವು ಫೆ.04ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.


ರಜತಪೀಠಪುರ ಪೇಜಾವರ ಅಧೋಕ್ಷಜ ಮಠದ ಪರಮ ಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್‌ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಹುಬ್ಬಳ್ಳಿಯ ಪವರ್‌ಟ್ರಾನಿಕ್ ಸಿಸ್ಟಮ್‌ನ ಸ್ಥಾಪಕರು & ಮಾಲೀಕರಾದ ಅನಂತರಾಜ್ ಭಟ್ ಸಹಿತ ಹಲವು ಗಣ್ಯರು ಹಾಗೂ ಮಹತಿ ಎಂಟರ್‌ಪ್ರೈಸಸ್ ಮಾಲಕರಾದ ಕಾವ್ಯಶ್ರೀ ಎನ್.ರಾವ್ ಹಾಗೂ ಕುಟುಂಬಸ್ಥರು ಉಪಸ್ಥಿತರಿರುವರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7019351344
