ನೊಂದವರ ಪಾಲಿನ ಆಶಾ ಕಿರಣ ಶಾರದಾ ಹುಲಿವೇಷ ತಂಡ

ಬದುಕಿನಲ್ಲಿ ನೋವುನ್ನುತ್ತಿರುವ ಅದೇಷ್ಟೋ ಕುಟುಂಬಗಳ ನೋವಿಗೆ ಹೆಗಲು ನೀಡಿದ… ಸುರತ್ಕಲ್ ಗೆಳೆಯರ ಬಳಗ ತಂಡದ ಹನ್ನೇಡನೇ ವರ್ಷದ ಶ್ರೀ ಶಾರದಾ ಹುಲಿವೇಷ ಅಬ್ಬರದಿಂದಲೇ ರಥಬೀದಿಯ ಶಾರದಾ ಮಾತೆಯ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದೆ.

ಮಾತೃ ಸಂಸ್ಥೆಯ ಸಕ್ರಿಯ ಸದಸ್ಯ ದಿವಂಗತ ಮಂಜುನಾಥ್ ಮಂಗಳೂರು ಇವರ ಸವಿ ನೆನಪಲ್ಲಿ ಈ ಬಾರಿ ಈ ಹುಲಿವೇಷ ತಂಡ… ಬಹಳಷ್ಟು ಉತ್ಸಾಹಿ ಯುವಕರು ಹಾಗೂ ಪುಟಾಣಿ ಮಕ್ಕಳು ಹುಲಿವೇಷ ಧರಿಸುವ ಮೂಲಕ ಈ ಬಾರಿಯ ಸಮಾಜ ಸೇವೆಗೆ ಸಿದ್ಧರಾಗಿದ್ದಾರೆ. ಕುಳಾಯಿ ಕೋಡಿಕೆರೆಯ ಪೆರ್ಮುದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಹಮ್ಮಿಕೊಂಡ ಹುಲಿ ಕುಣಿತ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದು,

ಹುಲಿವೇಷ ಧಾರಿಗಳ ಸಾಹಸಮಯ ಪ್ರದರ್ಶನಗಳನ್ನು ಕಂಡು ಕಣ್ ತುಂಬಿಸಿಕೊಂಡಿದ್ದಾರೆ. ತಂಡದ ಸಮಜೋಮುಖಿ ಕಾರ್ಯಗಳ ಬಗ್ಗೆ ಮೆಚ್ಚಿ ಅದೆಷ್ಟೋ ಮಂದಿ ದಾನಿಗಳು ತಮ್ಮ ಕೈಯಲಾದ ಸಹಾಯವನ್ನು ತಂಡಕ್ಕೆ ನೀಡಿ ಅವರ ಸಮಾಜ ಸೇವೆಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಸಂಸ್ಥೆಯ ಸಕ್ರಿಯ ಸದಸ್ಯ ವಸಂತ್ ಎಂಬವರು ಸಂಸ್ಥೆಯ ಸಮಜೋಮುಖಿ ಕಾರ್ಯಗಳ ಬಗ್ಗೆ ವಿ 4 ನ್ಯೂಸ್ ಕರ್ನಾಟಕ ದೊಂದಿಗೆ ಹಂಚಿಕೊಂಡಿದ್ದಾರೆ.

Related Posts

Leave a Reply

Your email address will not be published.