ಅವ್ಯವಸ್ಥೆಯ ಆಗರದಲ್ಲಿ ಸುರತ್ಕಲ್ ಮೀನು ಮಾರುಕಟ್ಟೆ, ತೆರೆದ ಚರಂಡಿ, ಅಪಾಯಕ್ಕೆ ಆಹ್ವಾನ

ಮೂಲಭೂತ ಸೌಕರ್ಯ ವಂಚಿತ ಮೀನು ಮಾರುಕಟ್ಟೆ, ತಾತ್ಕಾಲಿಕ ಮಾರುಕಟ್ಟೆಯೊಳಗಡೆ ತೆರೆದ ಚರಂಡಿ, ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮಾರುಕಟ್ಟೆ, ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಮಾರುಕಟ್ಟೆ, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮೀನು ವ್ಯಾಪಾರ ಮಹಿಳೆಯರ ಅಳಲು
ಇದು ಸುರತ್ಕಲ್ ಮೀನು ವ್ಯಾಪಾರ ಮಾರುಕಟ್ಟೆಯ ದುಸ್ಥಿತಿ. ಕಳೆದ ನಾಲ್ಕು ವರ್ಷದಿಂದ ಅಲ್ಲಿನ ಮೀನುಗಾರಿಗೆ ತಾತ್ಕಾಲಿಕ ಮಾರುಕಟ್ಟೆಯ ವ್ಯವಸ್ಥೆಯನ್ನು ರೂಪಿಸಿದ್ದರು. ಆದರೆ ವರ್ಷ ನಾಲ್ಕು ಕಳೆದರೂ, ಸೂಕ್ತ ವ್ಯವಸ್ಥೆ ಕಲ್ಪಿಸದೆ ಮೀನು ವ್ಯಾಪಾರಸ್ಥ ಮಹಿಳೆಯರು ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ. ಸುರತ್ಕಲ್‍ನಲ್ಲಿ ಹೊಸ ಮಾರುಕಟ್ಟೆ ನಿರ್ಮಾಣ ಮಾಡಲೆಂದು ಕಳೆದ ನಾಲ್ಕು ವರ್ಷದ ಹಿಂದೆ ಮೀನು ವ್ಯಾಪಾರಸ್ಥರಿಗೆ ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಆದರೆ ಹೊಸ ಮಾರುಕಟ್ಟೆ ಇನ್ನೂ ಕೂಡ ಆಗದಿರುವುದು ಮೀನು ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈಗಿರುವ ಮಾರುಕಟ್ಟೆಯಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ. ಜನರಂತೂ ಈ ಮಾರುಕಟ್ಟೆ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ರಸ್ತೆಯ ಬದಿಯಲ್ಲಿ ಕುಳಿತು ಮೀನು ಮಾರಾಟ ಮಾಡುವ ದುಸ್ಥಿತಿ ಬಂದೊದಗಿದೆ ಎಂದು ಮೀನು ವ್ಯಾಪಾರಸ್ಥ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
