ಮಂಗಳೂರಿನ ಈಜುಪಟುವಿನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್

ಮಂಗಳೂರಿನ ಈಜುಪಟುವೊಬ್ಬರು ಇದೀಗ ತನ್ನ ಹೆಸರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲಿಸುವ ಮೂಲಕ ಹೆಗ್ಗಳಿಕೆ ಮೂಡಿಸಿದ್ದಾರೆ. ಇವರೇ ಕೆ. ಚಂದ್ರಶೇಖರ ರೈ ಸೂರಿಕುಮೇರು. ತನ್ನ 49ರ ಹರೆಯದಲ್ಲಿ ಸೆಪ್ಟೆಂಬರ್ 15ರಂದು ತನ್ನ ಕೌಶಲ್ಯ ತೋರಿದ್ದಾರೆ. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಮುಂಭಾಗಕ್ಕೆ ಒಂದೇ ಉಸಿರಿನಲ್ಲಿ 29 ಮುಂಭಾಗದ ತಿರುವು ಮಾಡಿದ್ದೇನೆ. ಇದನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್‍ಗೆ ಅಪ್ಲೈ ಮಾಡಿದ್ದು, ಇದೀಗ ನನಗೆ ಪ್ರಶಸ್ತಿ ಬಂದಿದೆ ಎಂದವರು ಹೇಳಿದ್ದಾರೆ. ನನಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಿಂದ ಪ್ರಮಾಣ ಪತ್ರ ಮತ್ತು ಪದಕ ಲಭಸಿದೆ ಎಂದು ಹೇಳಿದರು. ಕೆ. ಚಂದ್ರಶೇಖರ್ ರೈ ಸೂರಿಕುಮೇರು ಅವರು, ರಾಷ್ಟ್ರೀಯ ಮಟ್ಟದ ಈಜುಪಟು ಹಾಗು ರಾಷ್ಟ್ರೀಯ ಮಟ್ಟದ ಪೋಲ್ ವಾಲ್ಟ್ ಆಟಗಾರ. ಪ್ರಸ್ತುತ ಇವರು ಮಂಗಳೂರು ಮಹಾನಗರ ಪಾಲಿಕೆ ಈಜುಕೋಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಸಾರ್ವಜನಿಕರಿಗೆ ಈಜು ತರಬೇತಿ ಯ ಮಾರ್ಗದರ್ಶನ ನೀಡುತ್ತಿರುವರು. ಮಂಗಳೂರು ಮಹಾನಗರ ಪಾಲಿಕೆ ಮಹಾಪೌರವ ರು ಶ್ರೀ ಜಯಾನಂದ್ ಅಂಚನ್ ಹಾಗು ಸಚೇತಕರು ಶ್ರೀ ಪ್ರೇಮಾನಂದ ಶೆಟ್ಟಿ ಯವರು ಇವರನ್ನು ಅಭಿನಂದಿಸಿದ್ದಾರೆ.

Related Posts

Leave a Reply

Your email address will not be published.