ಬೈಂದೂರು : ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಲಕ್ಷ್ಮೀ ನಾರಾಯಣ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾದರು. ಅವರು ಬೈಂದೂರು ಕ್ಷೇತ್ರದ ಮಾಜಿ ಶಾಸಕರಾಗಿದ್ದು ನೇರ ನುಡಿಯ ಜೊತೆಗೆ ಕ್ಷೇತ್ರದ ಅಭೀವ್ರದ್ದಿಗೆ ವಿಶೇಷ ಆದ್ಯತೆ ನೀಡಿದ್ದರು. ರಾಮಕ್ಷತ್ರತ್ರಿಯ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.
“ನಮ್ಮ ಹಿರಿಯರ ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ನಮ್ಮ ಸುತ್ತಮುತ್ತಲ ಬೆಳೆಯುವ ಸೊಪ್ಪು ತರಕಾರಿಗಳು ಪೋಷಕಾಂಶಗಳ ಆಗರವಾಗಿದೆ. ದಿನನಿತ್ಯದ ಆಹಾರದಲ್ಲಿ ಇದನ್ನ ಉಪಯೋಗಿಸುವುದರಿಂದ ನಮಗೆ ಪೌಷ್ಟಿಕಾಂಶಗಳ ಕೊರತೆ ಉಂಟಾಗದು ಈ ನಿಟ್ಟಿನಲ್ಲಿ ವಿವಿಧ ಆಹಾರ ಪದಾರ್ಥಗಳು ಆಹಾರಗಳನ್ನ ಪ್ರದರ್ಶನಕ್ಕೆ ಇಟ್ಟು ಆಯೋಜಿಸಲಾದ ಈ ಪೌಷ್ಧಿಕ ಮಾಸ ಆಚರಣೆ ಅರ್ಥ ಪೂರ್ಣವಾದದ್ದು ಎಂದು ಜಿಲ್ಲಾ ಪಂಚಾಯತ್ ಉಡುಪಿ ಆಯುಷ್ ಇಲಾಖೆ ಉಡುಪಿ ಗ್ರಾಮ ಪಂಚಾಯತ್ ಕಾಲ್ತೋಡು ಆಯುಷ್ಮಾನ್ ಆರೋಗ್ಯ
ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನದಿಂದ . ಈ ಭಾರಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕೆಸರುಗದ್ದೆ ಕ್ರೀಡಾಕೂಟ “ಕೆಸರಲ್ಲೊಂದು ದಿನ -ಗಮ್ಮತ್ತ ಕಾರ್ಯಕ್ರಮ ಅಗಸ್ಟ್ 25ರ ಭಾನುವಾರ ಬೆಳಿಗ್ಗೆ 9 ರಿಂದ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಹಾಗೂ ಅದರ ಪಕ್ಕದ ಜೆ.ಎನ್.ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ
ಬೈಂದೂರು: ಶಾಸಕರು ಅಧಿಕಾರಿಗಳ ಸಭೆ ಕರೆಯುವ ಅಧಿಕಾರಕ್ಕೆ ಚ್ಯುತಿ ಬಂದಿರುವ ಹಿನ್ನೆಲೆಯಲ್ಲಿ ದಿಢೀರ್ ಧರಣಿ ಕೂರಲು ಮುಂದಾದ ಶಾಸಕ ಗುರುರಾಜ್ ಗಂಟಿಹೊಳೆ. ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾರ್ಯಕರ್ತದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಿಗದಿಯಾಗಿತ್ತು. ಈ ಸಭೆಗೆ ಅಧಿಕಾರಿಗಳು ಹೋಗದಂತೆ ಮೇಲಾಧಿಕಾರಿಗಳಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಾರದೆ ಇರುವುದನ್ನು ಖಂಡಿಸಿ ಮತ್ತು ಶಾಸಕರು ಸಭೆ ಕರೆಯುವ ಅಧಿಕಾರವನ್ನು ಮಟಕುಗೊಳಿಸುತ್ತಿರುವ ಹಾಗೂ
ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೈಂದೂರು ಹಾಗೂ ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರಇವರ ಜಂಟಿ ಆಶ್ರಯದಲ್ಲಿ ಬೈಂದೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರಚೆಸ್ ಪಂದ್ಯಾಟ ಶ್ರೀ ನರಸಿಂಹ ದೇವಾಡಿಗ ಮತ್ತು ಶ್ರೀ ಶೇಖರ್ ಖಾರ್ವಿ ಚೆಸ್ ಆಟ ಆಡುದರ ಮೂಲಕ ಚಾಲನೆ ನೀಡಲಾಯಿತು. ಶ್ರೀ ಶೇಖರ್ ಖಾರ್ವಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಿರಿಮಂಜೇಶ್ವರ ಮತ್ತು ಶ್ರೀ ನರಸಿಂಹ ದೇವಾಡಿಗ ಗ್ರಾಮ ಪಂಚಾಯತ್ ಅಧ್ಯಕ್ಷರು
ನಿಖಿಲ್ ಪೂಜಾರಿ ಮತ್ತು ಹೇಮಂತ್ ದೇವಾಡಿಗ ಇವರ ಮಾಲಿಕತ್ವದ ಎ-ವನ್ ಸರ್ವಿಸ್ ಸ್ಟೇಷನ್ ಇಂದು ಧಾರ್ಮಿಕ ವಿಧಿ ವಿಧಾನದ ಮೂಲಕ ಶುಭಾರಂಭಗೊಂಡಿದೆ ವೆಲ್ ವಾಟರ್ ಪಾಲಿಶ್, ಕಸ್ಟಮ್ ಪಾಲಿಶ್ ಹಾಗೂ ಎಲ್ಲಾ ರೀತಿಯ ವಾಹನಗಳ ಸರ್ವಿಸ್ ಗಳು ಇಲ್ಲಿ ಲಭ್ಯವಿದ್ದು, ಯಾವುದೇ ವಾಹನಗಳಾದರೂ ಅದನ್ನು ಪಳಪಳ ಹೊಳೆಯುವಂತೆ ಮಾಡುವ ಮೂಲಕ ಮತ್ತೆ ತಮ್ಮ ವಾಹನಗಳ ಮೇಲೆ ಒಲವು ಹೆಚ್ಚುವಂತೆ ಸಿದ್ಧಗೊಳಿಸಲಾಗುತ್ತದೆ. ಗ್ರಾಹಕರದ ಸುಂದರ್ ಕೊಠಾರಿ ಮಾತನಾಡಿ ಈ ಸಂಸ್ಥೆಯು ಈ ಹಿಂದೆ ಹಲವಾರು
ಬೈಂದೂರು: ರಾಜ್ಯ ಸರ್ಕಾರ ವಿವಿಧ ಜಿಲ್ಲೆಗಳಿಗೆ ಪಶು ವೈದ್ಯರನ್ನು ನೇಮಕ ಮಾಡುತ್ತಿದ್ದು, ಬೈಂದೂರು ತಾಲೂಕಿಗೆ ಇನ್ನೂ ಪಶುವೈದ್ಯರ ನೇಮಕ ಮಾಡದೆ ಇರುವ ರಾಜ್ಯ ಸರ್ಕಾರದ ಕ್ರಮವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ತೀವ್ರವಾಗಿ ಖಂಡಿಸಿದ್ದಾರೆ.ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಪಶುವೈದ್ಯರ ಕೊರತೆಯಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಈಗಾಗಲೇ ವಿಧಾನ ಮಂಡಲ ಅಧಿವೇಶನದಲ್ಲಿ ಸಂಬಂಧಪಟ್ಟ ಸಚಿವರ ಗಮನಕ್ಕೂ ತರಲಾಗಿತ್ತು. ನೇಮಿಸುವ ಭರವಸೆಯನ್ನು ನೀಡಿದ್ದರು.
ಬೈಂದೂರು: ವೈಶಾಖದಲ್ಲಿ ನದಿಯಾಚೆಗಿನ ಮನೆಗೆ ತೆರಳಲು ದೋಣಿಯಲ್ಲಾದರೂ ಪ್ರಯಾಣಿಸ ಬಹುದಿತ್ತು. ಆದರೆ ಈಗ ಮಳೆಯಬ್ಬರ ಜೋರಿದೆ ಸೌಪರ್ಣಿಕ ನದಿಯಲ್ಲಿ ನೀರಿನ ಮಟ್ಟವು ಹೆಚ್ಚಿದೆ. ಕುದ್ರುವಿನಿಂದ ನಾವುಂದಕ್ಕೆ ಅಥವಾ ನಾವುಂದದಿಂದ ಕುದ್ರುವಿಗೆ ಹೋಗುವುದಾದರೂ ಹೇಗೆ ಎಂಬುದೇ ಯಕ್ಷಪ್ರಶ್ನೆ. ಬೇಸಗೆಯಿರಲಿ ಅಥವಾ ಮಳೆಗಾಲವಿರಲಿ ಅನೇಕ ವರ್ಷಗಳಿಂದ ಈ ಕುದ್ರುವಿನ ನಿವಾಸಿಗಳಿಗೆ ದೋಣಿಯೊಂದೇ ಆಧಾರ. ನಾವುಂದ ಕುದ್ರುವಿನಲ್ಲಿ 7 ಮನೆಗಳಿದ್ದು, ಒಟ್ಟು ಸುಮಾರು 20 ಮಂದಿ
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಳಿಮಳೆ, ಕಡಲ್ಕೊರೆತ ಮತ್ತು ನೆರೆಯಿಂದ ಆಗಿರುವ ಹಾನಿಗಳಿಗೆ ಶೀಘ್ರವೇ ಪರಿಹಾರ ಒದಗಿಸಬೇಕು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಪೂರೈಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ನಡೆಸಿದ ಅವರು ನಿರಂತರ ಮಳೆಯಿಂದ ನೆರೆ, ಪ್ರವಾಹದಿಂದ ಅನೇಕರ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿವೆ. ಕೆಲವು ಕಡೆಗಳಲ್ಲಿ ರಸ್ತೆ
ಬೈಂದೂರು: ಬೈಂದೂರಿನ ಪಡುವರಿಯ ಸೋಮೇಶ್ವರ ಬೀಚ್ ಗೆ ತೆರಳುವ ರಸ್ತೆಯಲ್ಲಿ ಗುಡ್ಡ ಕುಸಿಯುವ ಆತಂಕ ಎದುರಾಗಿದ್ದು, ಈ ಸಂಬಂಧ ಅಗತ್ಯ ಕಾಮಗಾರಿ ವ್ಯವಸ್ಥಿತ ರೀತಿಯಲ್ಲಿ ನಡೆಸುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಮಳೆಗೆ ಗುಡ್ಡ ಕುಸಿದರೆ ಅಧಿಕಾರಿಗಳೇ ಅದಕ್ಕೆ ಜವಾಬ್ದಾರರು. ತಕ್ಷಣವೇ ತುರ್ತು ಕಾಮಗಾರಿ ನಡೆಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸೂಚಿಸಿದ್ದಾರೆ. ಈ