ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನವರಾತ್ರಿ ಸಂಭ್ರಮ
ಬೈಂದೂರು: ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ,ಮಹಾ ಮಂಗಳಾರತಿ, ಹಣ್ಣುಕಾಯಿ ಸೇವೆ, ಚಂಡಿಕಾ ಹೋಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಸೇವೆಯನ್ನು ನಾನಾ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಲ್ಲಿಸಲಾಯಿತು.
ಅಕ್ಟೋಬರ್ 3 ರಿಂದ ಆರಂಭಗೊಂಡಿರುವ ನವರಾತ್ರಿ ಉತ್ಸವ ಅಕ್ಟೋಬರ್ 12 ರ ತನಕ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ನವರಾತ್ರಿ ಉತ್ಸವದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಕೋರಿ ಕೊಂಡಿದೆ.
ಧಾರ್ಮಿಕ ವಿಧಿ ವಿಧಾನಗಳು ವೇದಮೂರ್ತಿ ಉಳ್ಳೂರು ವಾಸುದೇವ್ ಐತಾಳರು ಮತ್ತು ಪದ್ಮನಾಭ ಅಡಿಗ ಅರ್ಚಕರು ಇವರಿಂದ ವಿಧಿವತ್ತಾಗಿ ಪ್ರತಿ ದಿನ ಜರಗಿತು.
ದೇವಸ್ಥಾನದ ಆಡಳಿತ ಧರ್ಮದರ್ಶಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ದಶಮಿ ತನಕ ವಿಶೇಷವಾಗಿ ಸಾರ್ವಜನಿಕರು ಮತ್ತು ಲೋಕದ ಜನರಿಗೆ ಒಳಿತಾಗಲಿ ಎನ್ನುವ ದೃಷ್ಟಿಯಿಂದ ಚಂಡಿಕಾ ಹೋಮ,ದುರ್ಗಾ ಪಾರಾಯಣ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಶ್ರೀ ದೇವಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.
ಈ ದಿನ ಚಂಡಿಕಾ ಹೋಮ ಮತ್ತು ಅನ್ನ ಸಂತರ್ಪಣೆ ಮಾಡಿಸುವ ಸೇವಾರ್ಥಿಗಳು ದಿವಂಗತ ಗೋಪಾಲ್ ರಾವ್ ಮತ್ತು ವಸಂತಿ ಗಾಣಿಗ ಮತ್ತು ಮಕ್ಕಳು ನೂಜಾಡಿ ಬೆಂಗಳೂರು ಇವರ ಸೇವೆಯಾಗುತ್ತದೆ.
ಗುರುವಾರದ ಚಂಡಿಕಾಯಿ ಹೋಮ ಸೇವಾರ್ಥಿ ಉದಯ ಗಾಣಿಗ ಅವರು ಮಾತನಾಡಿ, ಈ ದೇವಿಯನ್ನು ನಾವು ಹಲವು ವರ್ಷಗಳಿಂದ ನಂಬಿಕೊಂಡು ಬಂದಿದ್ದೇವೆ ಇದರಿಂದ ನಮಗೆ ಒಳಿತಾಗಿದೆ ಎಂದರು.
ಪ್ರತಿದಿನ ಸಾಂಸ್ಕೃತಿ ಕಾರ್ಯಕ್ರಮ ಬಹಳ ಅದ್ದೂರಿಯಿಂದ ನಡೆಯಿತು
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸರ್ವ ಸದಸ್ಯರು ಅರ್ಚಕ ವೃಂದ ,ಸಮಸ್ತ ಊರಿನ ಗ್ರಾಮಸ್ಥರು ,ದಾನಿಗಳು ಉಪಸಿತರಿದ್ದರು.