ಕಾಪುವಿನಲ್ಲಿ ಜೆಡಿಎಸ್ ಚುನಾವಣಾ ಕಚೇರಿ ಉದ್ಘಾಟನೆ

ಕಾಪುವಿನ ಹೃದಯ ಭಾಗದಲ್ಲಿರುವ ಮಹಾಬಲ ಮಾರ್ಲ್ ಖಾಸಗಿ ಕಟ್ಟಡದಲ್ಲಿ ಜೆಡಿಯಸ್ ಪಕ್ಷದ ಚುನಾವಣಾ ಕಛೇರಿಯನ್ನು ಜಿಲ್ಲಾ ಅಧ್ಯಕ್ಷ ಯೋಗೀಶ್ ಶೆಟ್ಟಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ಪಕ್ಷ ಈ ಬಾರಿ ಒರ್ವ ಸಮಾಜಮುಖಿ ಕೆಲಸ ಕಾರ್ಯಗಳನ್ನು ನಡೆಸುತ್ತಿರುವ ಸಮರ್ಥ ಅಭ್ಯರ್ಥಿ ಸಬೀನ ಸಮದ್ ರವರನ್ನು ಕಣಕಿಳಿಸಿದ್ದು, ಅವರು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಇವರ ಗೆಲುವಿಗೆ ನಮ್ಮ ರಾಜ್ಯ ನಾಯಕ ಕುಮಾರಸ್ವಾಮಿಯವರ ಅಭಿವೃದ್ಧಿ ಕಾರ್ಯಗಳೇ ಶ್ರೀ ರಕ್ಷೆಯಾಗಲಿದೆ ಎಂದರು.ಈ ಸಂದರ್ಭ ಅಭ್ಯರ್ಥಿ ಸಬೀನ ಸಮದ್, ಸುಧಾಕರ್ ಶೆಟ್ಟಿ, ವಾಸುದೇವ ರಾವ್, ಅತ್ರಾಡಿ ಇಕ್ಬಾಲ್, ಭರತ್ ಶೆಟ್ಟಿ, ಇಲ್ಯಾಸ್ ಮಜೂರು, ಚಂದ್ರಹಾಸ್, ಅಶ್ರಪ್ ಪಡುಬಿದ್ರಿ, ರಜ್ಹಕ್ ಉಚ್ಚಿಲ , ಉದಯ ಹೆಗ್ಡೆ ಮಲ್ಲಾರು ಮುಂತಾದವರಿದ್ದರು.