ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ರೋಡ್ ಶೋ

ಆಲೂರು : ಕಳೆದ 40 ವರ್ಷಗಳಿಂದಲೂ ಸಹ ಬಿಜೆಪಿಯ ಕಾರ್ಯಕರ್ತನಾಗಿ ತಳಮಟ್ಟದಿಂದ ತಾಲೂಕಿನಲ್ಲಿ ಪಕ್ಷಕಟ್ಟಲು ಸಮವಹಿಸುತ್ತಿದ್ದ ಹಿರಿಯ ಮುಖಂಡರಾದ ಧರ್ಮರಾಜ್ ಬಿಜೆಪಿ ತೊರೆದು ಭವಾನಿ ರೇವಣ್ಣ ರವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಆಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಶಾಸಕರು ನಡೆಸಿದ ರೋಡ್ ಶೋನಲ್ಲಿ ಭಾಗವಹಿಸಿದ ಭವಾನಿ ರೇವಣ್ಣ ರವರ ಸಮ್ಮುಖದಲ್ಲಿ ಹಲವಾರು ಜೆಡಿಎಸ್ ಕಾರ್ಯಕರ್ತರ ಎದುರು ಧರ್ಮರಾಜ್ ರವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು ಸಂದರ್ಭದಲ್ಲಿ ಮಾತನಾಡಿದ ಅವರು ಪಕ್ಷಕ್ಕಾಗಿ ನಾನು ಕಳೆದ 40 ವರ್ಷಗಳಿಂದ ದುಡಿದಿದ್ದು ಆದರೆ ಇಂದು ಯಾವುದೇ ಸ್ಥಾನಮಾನವನ್ನು ನೀಡದೆ ಮೂಲೆಗುಂಪು ಮಾಡಿದ್ದಾರೆ ಅಲ್ಲದೆ ಯಾವುದೇ ತಿಳುವಳಿಕೆ ಹಾಗೂ ಪಕ್ಷದ ಬಗ್ಗೆ ತಿಳಿಯದ ಕೆಲವೊಬ್ಬ ವ್ಯಕ್ತಿಗಳನ್ನು ಇಟ್ಟುಕೊಂಡು ಪಕ್ಷವನ್ನು ಗಳಿಸುವ ಆತುರದಲ್ಲಿ ನಿಂತಿದ್ದಾರೆ ಜೆಡಿಎಸ್ ಪಕ್ಷ ರೈತರ ಪರ ಪಕ್ಷವಾಗಿದ್ದು ಈ ಬಾರಿ ಹೆಚ್‍ಡಿ ಕುಮಾರಸ್ವಾಮಿ ಅವರು ಹೆಚ್ಚು ಅಂತರಗಳಿಂದ ಜಯಗೊಳಿಸಿ ಮುಖ್ಯಮಂತ್ರಿಯಾದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಕಲೇಶಪುರ ಆಲೂರು ಕ್ಷೇತ್ರದ ಶಾಸಕರಾದ ಹೆಚ್ ಕೆ ಕುಮಾರಸ್ವಾಮಿ, ಭವಾನಿ ರೇವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಣದಳ್ಳಿ ಮಂಜೇಗೌಡ ಹಲವಾರು ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.

Related Posts

Leave a Reply

Your email address will not be published.