ಜೆಡಿಎಸ್‍ನ ಅಂದಿನ ಕಾಲದ ಗತ ವೈಭವವನ್ನು ಮತ್ತೆ ಮರಳಿ ತರುತ್ತೇನೆ : ಮೊಯ್ದಿನ್ ಬಾವಾ

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತವಾದ ಬಳಿಕ ತೀವ್ರ ಅಸಮಾಧಾನದಿಂದಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಜೆಡಿಎಸ್‍ಗೆ ಸೇರ್ಪಡೆಗೊಂಡಿದ್ದಾರೆ. ಇದೀಗ ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮೊಯ್ದಿನ್ ಬಾವಾ ಅವರು, ಅನ್ಯಾಯದ ಪರಮಾವಧಿ, ದುಡ್ಡಿನ ಮದ ಯಾರಿಗೂ ಇರಬಾರದು. ಇತಿಹಾಸವುಳ್ಳ ಕಾಂಗ್ರೆಸ್‍ಗೆ ಇಂತಹ ನಾಯಕರಿಂದಲೇ ಮುಳುವಾಗಲಿದೆ. ಮಂಗಳೂರು ಉತ್ತರ ಕ್ಷೇತ್ರ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದು,
ಜೆಡಿಎಸ್‍ನ ಪ್ರಮುಖ ನಾಯಕರ ಬೆಂಬಲದಿಂದ ಸ್ಪರ್ಧೆ ಮಾಡುತ್ತೇನೆ. ನೋವಿನಿಂದ ಕಾಂಗ್ರೆಸ್ ಪಕ್ಷ ತೊರೆದಿದ್ದೇನೆ. ಖುಷಿಯಿಂದಲೇ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಅಮರನಾಥ್ ಶೆಟ್ಟಿ, ವಸಂತ್ ಬಂಗೇರ ಶಾಸಕರಾಗಿದ್ದರು. ಅಂದಿನ ಕಾಲದ ಗತ ವೈಭವವನ್ನು ಮತ್ತೆ ತರುತ್ತೇನೆ ಎಂದುಜೆಡಿಎಸ್ ಸೇರ್ಪಡೆ ಬಳಿಕ ಮಾಜಿ ಶಾಸಕ ಮೊಯ್ದಿನ್ ಬಾವಾ ಹೇಳಿದರು.
ಈ ವೇಳೆಯಲ್ಲಿ ಜೆಡಿಎಸ್ ಮುಖಂಡರಾದ ಅಕ್ಷಿತ್ ಸುವರ್ಣ, ಜಾಕೆ ಮಾಧವ ಗೌಡ, ಡಾ. ಅಮರ ಶ್ರೀ ಅಮರನಾಥ್ ಶೆಟ್ಟಿ ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.