ಉಳ್ಳಾಲ: ಕೋಟೆಕಾರು ಬೀರಿ ಗೋಡಾನ್‌ನಲ್ಲಿ ಕಾರ್ಮಿಕರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಗಾಯಗೊಂಡ ಕಾರ್ಮಿಕರು ಖಾಸಗಿ ಆಸ್ಪತ್ರೆಗೆ ದಾಖಲು
ಕೋಟೆಕಾರು ಬೀರಿ ಗೋಡಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ಲವರ್ ಡೆಕರೇಷನ್ ಕಾರ್ಮಿಕರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲದ ಕೋಟೆಕಾರು ಬೀರಿ ಸಮೀಪದ ಪ್ಲವರ್ ಡೆಕರೇಟರ್ ಗೋಡಾನ್‌ನಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಉತ್ತರ ಭಾರತದ ಕಾರ್ಮಿಕರ ಮೇಲೆ ರಾತ್ರಿ ಸುಮಾರು ೮.೩೦ರ ವೇಳೆಯಲ್ಲಿ ಇನೋವಾ ಕಾರಿನಲ್ಲಿ ಬಂದಂತಹ ೫ರಿಂದ ೬ ದುಷ್ಕರ್ಮಿಗಳು ಏಕಾಏಕಿ ಗೋಡಾನ್‌ಗೆ ನುಗ್ಗಿ ಕಾರ್ಮಿಕರ ಮೇಲೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಗಾಯಗೊಂಡ 7 ಮಂದಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೆ ಕಾರಣ ಏನೆಂಬುವುದರ ಬಗ್ಗೆ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.