Home Posts tagged V4News (Page 7)

ಪ್ರಣಾಳಿಕೆ ಆಶ್ವಾಸನೆಯೊಳಗೊ, ಆಶ್ವಾಸನೆಯೊಳಗೆ ಪ್ರಣಾಳಿಕೆಯೊ

ಕಾಂಗ್ರೆಸ್ ಪಕ್ಷವು 18ನೇ ಲೋಕ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಎಲ್ಲ ರಾಜಕೀಯ ಪಕ್ಷಗಳೂ ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ಇವೆಲ್ಲ ವಿದೇಶಗಳಿಂದಲೇ ಬಂದ ಪದ್ಧತಿಗಳು. ಆದರೆ ಆಶ್ವಾಸನೆಗಳನ್ನು ನೀಡುವುದು ಮಾನವ ಸ್ವಭಾವದಲ್ಲೇ ಇದ್ದು, ಅದು ಆದಿ ಮಾನವನಿಂದಲೇ ಆರಂಭವಾಗಿದೆ.

ಬಿಜೆಪಿಗೆ ನನ್ನನ್ನು ಕೊಳ್ಳುವ ತಾಕತ್ತು ಇಲ್ಲ : ಪ್ರಕಾಶ್ ರಾಜ್

ಜಾಲ ತಾಣಗಳಲ್ಲಿ ಕೆಲವು ಬಿಜೆಪಿಗರು ನಟ ಪ್ರಕಾಶ್‌ರಾಜ್ ಬಿಜೆಪಿ ಸೇರುವುದಾಗಿ ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಉತ್ತರಿಸಿರುವ ಪ್ರಕಾಶ್ ರಾಜ್ ಅವರು ನನ್ನನ್ನು ಖರೀದಿಸುವಷ್ಟು ಸೈದ್ಧಾಂತಿಕ ಸಿರಿವಂತಿಕೆ ಹೊಂದಿಲ್ಲ ಎಂದು ಉತ್ತರಿಸಿದ್ದಾರೆ. ಬಿಜೆಪಿಯ ಖರೀದಿ ರಾಜಕಾರಣ ನಡೆಯಬಹುದು. ನನ್ನನ್ನು ಕೊಂಡುಕೊಳ್ಳುವ ಯೋಗ್ಯತೆ ಆ ಕಡೆ ಇಲ್ಲ ಎಂದೂ ಪ್ರಕಾಶ್ ರಾಜ್ ಹೇಳಿದ್ದಾರೆ. ನಟ ರಾಜಕಾರಣಿ ಪ್ರಕಾಶ್ ರಾಜ್ ಸದ್ಯ ತೆಲುಗಿನ ಪಾರ್ಟ್ ಒನ್, ಪುಷ್ಪ ಪಾರ್ಟ್ ಟು, ಓಜಿ

ಸೋನು ಗೌಡಗೆ ಸಿಜೆಎಂ ಶರತ್ತುಬದ್ಧ ಜಾಮೀನು

ಕಾನೂನು ತಪ್ಪಿ ಮಗು ದತ್ತು ಪಡೆದಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದ ರೀಲ್ಸ್ ನಟಿ ಸೋನು ಗೌಡ ಅವರಿಗೆ ಬೆಂಗಳೂರು ಗ್ರಾಮಾಂತರ ಸಿಜೆಎಂ ಅವರು ಜಾಮೀನು ಮಂಜೂರು ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಹೆಣ್ಣು ಮಗುವನ್ನು ದತ್ತು ಪಡೆಯುವಾಗ ಸೋನುಗೌಡ ಅವರು ಕಾನೂನು ನಿಯಮ ಪಾಲಿಸಿಲ್ಲ ಎಂದು ಅವರನ್ನು ಬಂಧಿಸಲಾಗಿತ್ತು. ವಾರದಲ್ಲಿ ವಿಚಾರಣೆ ಮುಗಿಯದೆ ಮೂರು ವಾರ ಎಳೆದಿತ್ತು. ಈಗ ಮ್ಯಾಜಿಸ್ಟ್ರೇಟ್ ಅವರು ಶರತ್ತುಬದ್ಧ ಜಾಮೀನು ನೀಡಿದ್ದಾರೆ.

ಸುರತ್ಕಲ್: ಲೋಕಸಭಾ ಚುನಾವಣೆ ಹಿನ್ನೆಲೆ ಪಥಸಂಚಲನ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುರತ್ಕಲ್ ಪ್ಯಾರಡೈಸ್ ಮೈದಾನದಿಂದ ಕಾಟಿಪಳ್ಳವರೆಗೆ ಬೃಹತ್ ಪೊಲೀಸ್ ಪಥಸಂಚಲನ ನಡೆಯಿತು. ಪಥಸಂಚಲನದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಭಾಗವಹಿಸಿದ್ದರು. ಪೊಲೀಸ್ ಪಥಸಂಚಲನದಲ್ಲಿ ಪೊಲೀಸ್, ಸಿಆರ್ ಪಿಎಫ್ ಸಹಿತ ವಿವಿಧ ಘಟಕಗಳ ಸಿಬ್ಬಂದಿ ಸುಮಾರು 500ಕ್ಕೂ ಹೆಚ್ಚಿನ ಸಿಬ್ಬಂದಿ ಭಾಗವಹಿಸಿದ್ದರು.

ಮತ ಗರ್ಜನೆಯ ಗೃಹಿಣಿ

ಹದಿನೆಂಟನೆಯ ಲೋಕ ಸಭೆಗೆ ಚುನಾವಣೆ ಪ್ರಕ್ರಿಯೆ ಮುಂದುವರಿದಿದೆ. ಭಾರತದಲ್ಲಿ ಚುನಾವ್ ಎಂದರೆ ಆಯ್ಕೆ ಎಂಬ ಶಬ್ದದಿಂದ ಈ ಚುನಾವಣೆ ಎಂಬ ಶಬ್ದವನ್ನು ಕನ್ನಡದವರು ಎರವಲು ಪಡೆದುಕೊಂಡಿದ್ದಾರೆ. ಆಯ್ಕೆ, ಅಜಪು, ತೇರ್ವು, ತೇರ್ಗಡೆ ಮೊದಲಾದ ದ್ರಾವಿಡ ನುಡಿಗಳಿದ್ದು ಅವುಗಳಿಂದಲೇ ತಮ್ಮ ನುಡಿ ಟಂಕಿಸಿಕೊಳ್ಳಲಾಗದ ಶಬ್ದ ಬ್ರಹ್ಮರೆಲ್ಲ ಕನ್ನಡದಲ್ಲಿ ಬಂದು ಹೋಗಿದ್ದಾರೆ. ಅದು ಅಲ್ಲೇ ಇರಲಿ ಈ ಚುನಾವಣೆ ಎಲ್ಲಿ, ಯಾವಾಗ ಆರಂಭವಾಯಿತು; ಏಕೆ ಆರಂಭವಾಯಿತು ಎಂದು ತಿಳಿಯುವುದು

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಹೊರೆಕಾಣಿಕೆ ಕಚೇರಿ ಉದ್ಘಾಟನೆ

ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಹೊರೆಕಾಣಿಕೆಯ ಕಚೇರಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಪ್ರಧಾನ ಅರ್ಚಕರಾದ ವಿ.ಎಸ್ ಭಟ್ ದೀಪ ಬೆಳಗಿಸುವ ಮೂಲಕ ಹೊರೆ ಕಾಣಿಕೆ ಕಚೇರಿಯನ್ನು ಉದ್ಘಾಟಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕರಾದ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಕಚೇರಿ ಪ್ರಾರಂಭಗೊಂಡಿತು.  ಈ ಸಂದರ್ಭದಲ್ಲಿ

ಎಸ್‌ಸಿಡಿಸಿಸಿ ಬ್ಯಾಂಕ್ 79.09 ಕೋಟಿ ರೂ. ಸಾರ್ವಕಾಲಿಕ ದಾಖಲೆ ಲಾಭ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ 113 ಶಾಖೆಗಳ ಮೂಲಕ ಉತ್ಕೃಷ್ಟ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತಿದ್ದು, ವರದಿ ವರ್ಷದಲ್ಲಿ ಅಮೋಘ ಸಾಧನೆಯನ್ನು ಮಾಡಿದೆ. ಆರ್ಥಿಕ ವರ್ಷದಲ್ಲಿ ಬ್ಯಾಂಕ್ 79.09 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಅವರು ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಬ್ಯಾಂಕ್‌ನ

ಮೇ.24ರಂದು ಗಾಯತ್ರಿ ಫಿಲ್ಮ್ ಮೇಕರ್ಸ್‌ನ ಬಲಿಪೆ ತುಳುಚಿತ್ರ ಬಿಡುಗಡೆ

ಗಾಯತ್ರಿ ಫಿಲ್ಮ್ ಮೇಕರ್ಸ್ ಬ್ಯಾನರ್‌ನಡಿಯಲ್ಲಿ ತಯಾರಾದ ಎಂಡೋ ಸಂತ್ರಸ್ತರ ನೋವು ಹಾಗೂ ತುಳುನಾಡಿನ ದೈವ ದೇವರ ಕಥೆಯನ್ನೊಳಗೊಂಡು ಸಿದ್ಧಗೊಂಡಿರುವ ಬಲಿಪೆ ತುಳುಚಿತ್ರವು ಮೇ.24ರಂದು ಬಿಡುಗಡೆಗೊಳ್ಳಲಿದೆ. ಬಲಿಪೆ ಎಂದರೆ ದೈವದ ವಾಹನವಾಗಿದ್ದು, ನೂರು ಹುಲಿಯ ಶಕ್ತಿಯನ್ನು ಹೊಂದಿರುವ ಒಂದು ಹುಲಿ ಎಂದರ್ಥ. ಬಲಿಪ ಚಿತ್ರದಲ್ಲಿ ತುಳುವ ಮಾಣಿಕ್ಯ ಅರವಿಂದ್ ಬೋಳಾರ್, ರಂಜನ್ ಬೋಳಾರ್ ಹಾಗೂ ನಾಯಕ ನಟನಾಗಿ ಹರ್ಷಿತ್ ಬಂಗೇರ, ನಾಯಕ ನಟಿಯಾಗಿ ಅಂಕಿತಾ ಪಟ್ಲ ನಟಿಸಿದ್ದು,

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ 55ನೇ ಸಂಸ್ಥಾಪನಾ ದಿನ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ 55ನೇ ಸಂಸ್ಥಾಪನ ದಿನವನ್ನು ರೋಟರಿ ಕ್ಲಬ್ ಬಂಟ್ವಾಳದ ಸಭಾಂಗಣದಲ್ಲಿ ಆಚರಿಸಲಾಯಿತು. ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಕಾಶ್ ಬಾಳಿಗ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್, ಕ್ಲಬ್‌ನ ಪೂರ್ವಾಧ್ಯಕ್ಷ ಎನ್.ಪ್ರಕಾಶ್ ಕಾರಂತ್ ಅನಿಸಿಕೆ ವ್ಯಕ್ತಪಡಿಸಿ 55 ವರ್ಷಗಳಲ್ಲಿ ರೋಟರಿ ಕ್ಲಬ್ ಬಂಟ್ವಾಳ ನಡೆದು ಬಂದ ಹಾದಿಯ್ನು ಅವಲೋಕನ ಮಾಡುವುದರ ಜೊತೆಗೆ ಕ್ಲಬ್‌ನ ಬೆಳವಣಿಗೆಗೆ ಸಹಕರಿಸಿದವರನ್ನು

ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಅವರು ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಅವರು ಪೂಜೆ ಸಲ್ಲಿಸಿದರು. ಬಳಿಕ ಬಂಟ್ಸ್ ಹಾಸ್ಟೆಲ್ ನ ಬಿಜೆಪಿ ಚುನಾವಣಾ ಕಚೇರಿಯಿಂದ ಮಂಗಳೂರು ಪುರಭವನವರೆಗೆ ಮೆರವಣಿಗೆ ಸಾಗಿಬಂತು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪುರಭವನದ ಹೊರಭಾಗದಲ್ಲಿ ಬಿಜೆಪಿ ಪ್ರಚಾರ