ಥಾಣೆ ಗುರುಭಕ್ತರಿಂದ ಒಡಿಯೂರು ಗುರುಗಳಿಗೆ ಗುರುವಂದನೆ

ಥಾಣೆ: ಮಾನವನಿಗೆ ಒಂದು ಧರ್ಮವಿದೆ, ಅದುವೇ ಮಾನವ ಧರ್ಮ. ಮಾನವ ಧರ್ಮ ವನ್ನು ಸಂಸ್ಕಾರದ ಮೂಲಕ ಅರಿಯಬೇಕು. ಅದರಿಂದ ಸಂಸ್ಕøತಿ ಉಳಿಯಲು ಸಾಧ್ಯವಿದೆ. ಸ್ವಾರ್ಥದ ಬದುಕು ಹೋಗಿ ನಿಸ್ವಾರ್ಥದ ಬದುಕು ನಮ್ಮದಾಗಬೇಕು. ಅಂತಹ ಗುಣ ನಮಗೆ ಬರಬೇಕು. ಕಡಲಿನಂತಹ ವಿಶಾಲವಾದ ಗುಣ ನಮ್ಮಲ್ಲಿರಲಿ. ನಮ್ಮನ್ನು ನಾವು ಅರಿಯಬೇಕು.ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥ ರಾದಾಗ ಮಾತ್ರ ಉತ್ತಮವಾದ ಜೀವನವನ್ನು ನಡೆಸಲು ಸಾಧ್ಯ ಎಂದು ಒಡಿಯೂರು ಒಡೆಯ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು

ಅವರು ಥಾಣೆ ಪಶ್ಚಿಮದ ವುಡ್‍ಲ್ಯಾಂಡ್ ರೀ ಟ್ರೇಟ್ ಹೊಟೇಲ್, ಎಲ್‍ಬಿಎಸ್ ಮಾರ್ಗ, ರಹಜ ಗಾರ್ಡನ್ ಎದುರುಗಡೆ, ಟಿಪ್‍ಟಾಪ್ ಹೊಟೇಲ್‍ನ ಹತ್ತಿರ ಇಲ್ಲಿ ಶ್ರೀ ಗುರುದೇವ ಸೇವಾ ಬಳಗ ದ ಥಾಣೆ ಗುರು ಭಕ್ತರು ಆಯೋಜಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನದ ಮಾತುಗಳನ್ನಾಡಿದರು. ಪ್ರಾರಂಭದಲ್ಲಿ ವುಡ್ ಲ್ಯಾಂಡ್ ಹೋಟೆಲ್ ನ ಮಾಲಕ ಉದಯ ಶೆಟ್ಟಿ , ಶುಭಲಕ್ಷ್ಮಿ ಉದಯ ಶೆಟ್ಟಿ ದಂಪತಿ ಹಾಗೂ ಪುತ್ರ ಕಾರ್ತಿಕ್ ಅವರು ಶ್ರೀಗಳ ಪಾದುಕಾ ಪೂಜೆ ನೆರವೇರಿಸಿದರು.

ನಂತರ ಒಡಿಯೂರು ಶ್ರೀಗಳು ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ವಾದಿ ಶ್ರೀ ಮಾತಾನಂದಮಯಿ ಹಾಗೂ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಬೊಳ್ನಾಡುಗುತ್ತು
ಚಂದ್ರಹಾಸ ರೈ, ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ ಕಾರ್ಯಧ್ಯಕ್ಷ ರೇವತಿ ವಾಮಯ್ಯ ಶೆಟ್ಟಿ, ಗುರುದೇವ ಸೇವಾ ಬಳಗದ ಗುರುದೇವನಂದ ಸ್ವಾಮೀಜಿ ಷಷ್ಟಾಬ್ದಿ ಕಾರ್ಯಕ್ರಮದ ಮುಂಬೈ ಸಮಿತಿ ಅಧ್ಯಕ್ಷ ವಾಮಯ್ಯ ಶೆಟ್ಟಿ, ಗುರುದೇವ ಸೇವಾ ಬಳಗದ ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ ಪಾಲ್ಗೊಂಡಿದ್ದರು.

ಗುರುದೇವ ಸೇವಾ ಬಳಗದ ಥಾಣೆ ಸದಸ್ಯರಾದ, ಮೋಹನ್ ಹೆಗ್ದೆ, ಶೇಖರ್ ಕೆ ಶೆಟ್ಟಿ, ದೇವದಾಸ್ ಉಚ್ಚಿಲ್, ಜಯರಾಮ್ ಶಾಂತ, ಮನೋಜ್ ಹೆಗ್ಡೆ. ಗುಣ ಪಾಲ್ ಶೆಟ್ಟಿ ಸುನಿಲ್ ಶೆಟ್ಟಿ, ಸುಧೀರ್ ಶೆಟ್ಟಿ, ಹರೀಶ್ ಉದ್ಯವರ್, ವಿದ್ಯಾ ಶೆಟ್ಟಿ, .ಶರ್ಮಿಳಾ ಶೆಟ್ಟಿ .ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀಗಳು ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ವೇಟ್ ಲಿಫ್ಟಿಂಗ್ ಕ್ರೀಡಾಪಟು ವಿಶ್ವನಾಥ್ ಮೇಸ್ತ ಹೊನ್ನಾವರ ಮತ್ತು ಪುಷ್ಪ ಮೇಸ್ತ ಕುಂದಾಪುರ ದಂಪತ್ಯ ಪುತ್ರಿ ಕುಮಾರಿ ನಮೃತ ,ಮೇಸ್ತ ಅವರನ್ನು ಶಾಲು ಹೊದಿಸಿ ಗೌರವಿಸಿದರು. ಪುಟಾಣಿ ಗಳಾದ ದೀರ್ಘ ಹಾಗೂ ಮೇಘನಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಪರಿಸರದ ಗುರು ಭಕ್ತರಿಂದ ಪ್ರಾರಂಭದಲ್ಲಿ ಭಜನಾ ಕಾರ್ಯಕ್ರಮವು ಜರಗಿತು. ಪರಿಸರದ ತುಳು-ಕನ್ನಡಿಗರು ಗುರು ಭಕ್ತರು. ಸಂಘ ಸಂಸ್ಥೆಯ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.