HomeFresh Newsಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವಾರ್ಷಿಕ ಮಹಾಸಭೆ

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವಾರ್ಷಿಕ ಮಹಾಸಭೆ

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 30ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 24, 2022 ರ ಶನಿವಾರದಂದು ಸಂಘದ ಕೋಟೇಶ್ವರ ಗೋವಿಂದ್ರಾಯ ವಿಠ್ಠಲ ಕಾಮತ್ ಸಭಾಂಗಣದಲ್ಲಿ ಜರುಗಿತ್ತು. ಶ್ರೀ ಕೆ ಪ್ರಶಾಂತ್ ಬಾಳಿಗಾ, ಕೆ.ಕೆ. ಫಿಶ್ ನೆಟ್ ಕೋ, ನೇಜಾರ್ ಇವರು 2022-23 ನೇ ಸಾಲಿನ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ, ಶ್ರೀ ಹರೀಶ್ ಕುಂದರ್, ಶ್ರೀ ಯು ಅಜಿತ್ ಕುಮಾರ್ ಶೆಣೈ, ಶ್ರೀ ಎಂ ವಸಂತ ಕಿಣಿ, ಕಾರ್ಯದರ್ಶಿಯಾಗಿ ಶ್ರೀ ಎಂ ವಲ್ಲಭ್ ಭಟ್, ಕೋಶಾಧಿಕಾರಿಯಾಗಿ ಶ್ರೀ ಕೃಷ್ಣ ಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಶ್ರೀ ಕೆ. ಸುರೇಶ್ ಶೆಣೈ, ಶ್ರೀ ಶ್ರೀನಿವಾಸ್ ಶೆಟ್ಟಿಗಾರ್, ಶ್ರೀ ಕೆ ರಂಜನ್ ಕಲ್ಕೂರ, ಅವರು ಅವಿರೋಧವಾಗಿ ಆಯ್ಕೆಯಾದರು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಐ ಆರ್ ಫೆರ್ನಾಂಡಿಸ್ ಮತ್ತು ಎಲ್ಲ ಪೂರ್ವ ಅಧ್ಯಕ್ಷರು ಸೇರಿ ಶ್ರೀ ಎಂ ವಿಶ್ವೇಶ್ವರಯ್ಯ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆಗೈದು ಗೌರವ ಸೂಚಿಸಿದರು. ಸಂಘದ ಹಿರಿಯ ಮಾಜಿ ಅಧ್ಯಕ್ಷರುಗಳಾದ ಶ್ರೀ ಎಂ. ವಿಶ್ವನಾಥ ಭಟ್, ಶ್ರೀ ವಿನ್ಸೆಂಟ್ ಪಿಂಟೋ ಶುಭಾಂಶನೆಗೈದರು. ಸಂಘದ ಸದಸ್ಯರಾದ ಶ್ರೀ ವೆಂಕಟೇಶ್ ಆರ್ ಪೈ ಹಾಗೂ ಶ್ರೀ ಎಂ ವಾಮನ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

DAS PROMOTIONS
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments