ಕಂಚಿನಡ್ಕದಲ್ಲಿ ಪ್ರಪ್ರಥಮ ಬಾರಿಗೆ ಸಾಮೂಹಿಕ ಗೋಪೂಜೆ, ಗೌರವಾರ್ಪಣೆ
ದೀಪಾವಳಿಯ ಪ್ರಯುಕ್ತ ಕಂಚಿನಡ್ಕದ ಹಿಂದೂ ಬಾಂಧವರ ನೇತೃತ್ವದಲ್ಲಿ ಸಾಮೂಹಿಕ ಗೋಪೂಜೆ,ಗೋಸಾಕುವ ಕುಟುಂಬಕ್ಕೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಭಾಜಪ ಉಪಾಧ್ಯಕ್ಷ ಶ್ರೀಪ್ರಕಾಶ್ ಶೆಟ್ಟಿಯವರು ಭಾರತಮಾತೆ ಪೂಜೆ ನಡೆಸಿ ಚಾಲನೆ ನೀಡಿದರು. ಮಾತೆಯರಿಂದ ಗೋಪೂಜೆ ನಡೆಸಿ ಪ್ರತಿ ಗೋಸಾಕುವ ಕುಟುಂಬಕ್ಕೆ ಗೌರವಪೂರ್ವಕವಾಗಿ ಸನ್ಮಾನಿಸಿ, ಗೋಆಹಾರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಾಪು ಮಂಡಲ ಭಾಜಪ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್,ಉಡುಪಿ ಜಿಲ್ಲಾ ಭಾಜಪ ಉಪಾಧ್ಯಕ್ಷೆ ಶ್ರೀಮತಿ ಗೀತಾಂಜಲಿ ಸುವರ್ಣ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಶ್ರೀಮಿಥುನ್.ಆರ್.ಹೆಗ್ಡೆ,ಕಾಪು ಮಂಡಲ ವಿಹಿಂಪ ಮುಖಂಡರಾದ ಶ್ರೀರಾಜೇಂದ್ರ ಶೆಣೈ, ಹಿಂದು ಜಾಗರಣಾ ವೇದಿಕೆ ಮುಖಂಡ ಶ್ರೀಪ್ರತೀಕ್ ಕೋಟ್ಯಾನ್,ಹಿಂದೂ ಮುಖಂಡರಾದ ಶ್ರೀಸಂದೇಶ್ ಶೆಟ್ಟಿ, ಶ್ರೀಸುಹಾಸ್ ಶೆಟ್ಟಿ, ಶ್ರೀಲೊಕೇಶ್ ಪಲಿಮಾರು, ಶ್ರೀಮೋಹನ್ ಪಣಿಯೂರು, ಶ್ರೀಸುಬ್ಬ ಕಂಚಿನಡ್ಕ, ಶ್ರೀಮೊನಪ್ಪ, ಶ್ರೀಸುಂದರ್,ಶ್ರೀಮತಿ ಸುಗುಣಾ, ಶ್ರೀಮತಿ ಶಾಂತ, ಶ್ರೀಚಿಕ್ಕ್ಯಕ್ಕ ಮೊದಲಾದವರು ಉಪಸ್ಥಿತರಿದ್ದರು.