ಚುನಾವಣೆ ಅಕ್ರಮ ತಡೆಗೆ 17 ಕಡೆ ಚೆಕ್ ಪೋಸ್ಟ್, ಈವರೆಗೆ 42 ಲಕ್ಷ ರೂ.ವಶ ಎಸ್ಪಿ ಅಕ್ಷಯ್ ಎಂ. ಎಚ್ ಮಾಹಿತಿ

ಉಡುಪಿ:ಚುನಾವಣಾ ಅಕ್ರಮಗಳು ನಡೆಯದಂತೆ ಹಾಗೂ ವಾಹನಗಳ ವಿಶೇಷ ತಪಾಸಣೆಗಾಗಿ ಜಿಲ್ಲೆಯ 17 ಕಡೆಗಳಲ್ಲಿ ಚೆಕ್‍ಪೆÇೀಸ್ಟ್‍ಗಳನ್ನು ತೆರೆಯಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಎಚ್ ತಿಳಿಸಿದ್ದಾರೆ.

ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯೊಳಗೆ ಸಂಚರಿಸುವ ಹಾಗೂ ಹೊರಜಿಲ್ಲೆಗಳ ಸಂಚಾರಗಳ ಮೇಲೆ ನಿಗಾ ಇರಿಸಲು ಈ ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ. ಆಗಾಗ ಪೆÇಲೀಸ್ ತಂಡಗಳು ಹಠಾತ್ ತಪಾಸಣೆಯನ್ನೂ ನಡೆಸಲಿದೆ ಎಂದರು.

ಬೈಂದೂರು ಕ್ಷೇತ್ರದ ಶಿರೂರು, ಕೊಲ್ಲೂರು, ಹೊಸಂಗಡಿಯಲ್ಲಿ, ಕುಂದಾಪುರ ಕ್ಷೇತ್ರದ ಹಾಲಾಡಿ, ಕಂಡೂರು, ತೆಕ್ಕಟ್ಟೆಯಲ್ಲಿ, ಉಡುಪಿ ಕ್ಷೇತ್ರದ ನೇಜಾರು, ಬಲಾಯಿಪಾದೆ ಉದ್ಯಾವರ, ಅಲೆವೂರಿನಲ್ಲಿ, ಕಾಪು ಕ್ಷೇತ್ರದ ಕಟಪಾಡಿ, ಹೆಜಮಾಡಿ, ಮೂಡುಬೆಳ್ಳೆ, ಅಂಜಾರುಗಳಲ್ಲಿ ಹಾಗೂ ಕಾರ್ಕಳ ಕ್ಷೇತ್ರದ ನಾತ್ಪಾಲು, ಸೋಮೇಶ್ವರ, ಸಾಣೂರು, ಮುರತ್ತಂಗಡಿ, ಈದು, ಹೊಸ್ಮಾರು ಹಾಗೂ ಬೆಳಣ್‍ಗಳಲ್ಲಿ ಚೆಕ್‍ಪೋಸ್ಟಗಳಿರುತ್ತವೆ. ಕಳೆದ 15 ದಿನಗಳಿಂದ ಚೆಕ್‍ಪೋಸ್ಟ್ ಗಳಲ್ಲಿ ಪ್ರಾರಂಭಿಸಿದ ವಾಹನಗಳ ಹಠಾತ್ ಪರಿಶೀಲನೆ ವೇಳೆ ಜಿಲ್ಲೆಯ ವಿವಿಧೆಡೆಗಳಲ್ಲಿ ದಾಖಲೆಗಳಿಲ್ಲದೇ ಸಾಗಾಟ ಮಾಡುತಿದ್ದ ಒಟ್ಟು 42 ಲಕ್ಷರೂ.ಗಳನ್ನು ವಶಪಡಿಸಿ ಕೊಳ್ಳಲಾಗಿದ್ದು, ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

Related Posts

Leave a Reply

Your email address will not be published.