ಶಾರದಾ ಮಹೋತ್ಸವದ 100 ನೇ ವರ್ಷ : ಸಹಸ್ರ ಚಂಡಿಕಾ ಮಹಾಯಾಗ

ಲೋಕ ಕಂಟಕ ನಿವೃತ್ತಿಗಾಗಿ ಲೋಕದಲ್ಲಿ ಉಂಟಾದ ಕ್ಷೋಭೆ ಯ ನಿವಾರಣೆಗಾಗಿ ಸ್ಥಿರ ಲಕ್ಷ್ಮಿ ಪ್ರಾಪ್ತಿಗಾಗಿ ಒಂದು ಸಾವಿರ ಚಂಡಿಕಾ ಪಾರಾಯಣ ಹಾಗೂ ಹೋಮಗಳನ್ನು ಮಾಡಿದರೆ ನಮ್ಮ ವಿಶೇಷ ಕಾಮನೆಗಳು ಪರಿಪೂರ್ಣವಾಗುತ್ತದೆ ಎಂಬ ವಿಶ್ವಾಸದಿಂದ ಈ ಯಾಗವನ್ನು ಮಾಡಲಾಗುತ್ತಿದ್ದು . ಬ್ರಹ್ಮಾಂಡದ ಮೂಲಬಿಂದು ಕರುಣಾ ಸಿಂದು ಬ್ರಹ್ಮಾಂಡದ ಸಕಲ ಜೀವ ಕಂದಗಳ ತಾಯಿ ಮಾತ್ರವಲ್ಲ ಬ್ರಹ್ಮಾಂಡವೆಲ್ಲವನ್ನು ತನ್ನ ಗರ್ಭದಲ್ಲಿಟ್ಟುಕೊಂಡವಳು ಶ್ರೀ ಶಾರದಾ ಮಾತೆ ಆದುದರಿಂದ ಈ ಜೀವಗಳಿಗೆ ಬೇಕಾದುದೆಲ್ಲವು ಅವಳಲ್ಲಿದೆ ಅವಳ ಶ್ರೀ ಚರಣಗಳಲ್ಲಿ ಶರಣಾದವರಿಗೆ ಅವಳ ಒಲುಮೆಯನ್ನು ಗಳಿಸಿದವರಿಗೆ ಲಕ್ಷವಲ್ಲದ ಸಂಗತಿಯೇ ಇಲ್ಲ.

venkataramana temple


ಜಗಜ್ಜನನಿಯ ಒಲುಮೆಯನ್ನು ಸಂಪಾದಿಸಲು ಮಾರ್ಕಾಂಡೇಯ ಪುರಾಣಾರ್ಗತವಾದ ಒಟ್ಟು ಏಳು ನೂರು ಮಂತ್ರಗಳನ್ನು ಋಷಿಗಳು ನಮಗೆ ಅನುಗ್ರಹಿಸಿದ್ದಾರೆ. ಈ ಉಪಾಸನೆಯನ್ನು ನಾವು ಶ್ರದ್ಧಾ ಭಕ್ತಿಯಿಂದ ನೆರವೇರಿಸಬೇಕು. ಈ ಪುಣ್ಯಪ್ರದವಾದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಬಾಂಧವರೆಲ್ಲರೂ ತ್ರಿಕರಣ ಪೂರ್ವಕವಾಗಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಶ್ರೀ ಶಾರದಾ ಮಾತೆಯ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಮ್ರ ವಿನಂತಿ. ಐದು ದಿನಗಳ ಪರ್ಯಂತ ಈ ಮಹಾ ಯಾಗವು ನಡೆಯಲಿದ್ದು ದಿನನಿತ್ಯ ವೈದಿಕ ವಿಧಿ ವಿಧಾನಗಳ ಬಳಿಕ ಲಘು ಪೂರ್ಣಾಹುತಿ ನಡೆಯಲಿರುವುದು .

ತಾ. 28-09-2022 ಬುಧವಾರ ಪ್ರಾತಃಕಾಲ 5.00 ಗಂಟೆಗೆ ಗುರು ಗಣಪತಿ ಪೂಜನ, ಆವಾಹಿತ ದೇವತಾ ಪೂಜನ, ಕುಂಡ ಸಂಸ್ಕಾರ, ಸೂರ್ಯಾಗ್ನಿ ಗ್ರಹಣ (ಅರಣಿಮಂಥನ) ಪೂರ್ವಕ ಅಗ್ನಿ ಪ್ರತಿಷ್ಠೆ, ಸಹಸ್ರ ಚಂಡಿಕಾ ಹವನ ಪ್ರಾರಂಭ, ಬೆಳಿಗ್ಗೆ 10.30 ಗಂಟೆಗೆ ಲಘು ಪೂರ್ಣಾಹುತಿ, ಮಧ್ಯಾಹ್ನ ಪೂಜೆ, ಗೋಪೂಜೆ. ರಾತ್ರಿ 8.30 ಗಂಟೆಗೆ ಅಷ್ಠಾವಧಾನ ಸೇವೆ ಹಾಗೂ ರಾತ್ರಿ ಪೂಜೆ ನೆರವೇರಿದವು .

ತಾ. 02-10-2022 ಆದಿತ್ಯವಾರ ಪ್ರಾತಃಕಾಲ 4.00 ಗಂಟೆಗೆ ಗುರು ಗಣಪತಿ ಪೂಜನ, ಆವಾಹಿತ ದೇವತಾ ಪೂಜನ.ಬೆಳಿಗ್ಗೆ 10.30 ಗಂಟೆಗೆ ಶ್ರೀ ಕಾಶೀಮಠಾಧಿಪತಿ ಶ್ರೀಮದ್ ಸಂಯಮೀ0ದ್ರ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಮಹಾಪೂರ್ಣಾಹುತಿಮಹಾಪೂಜೆ, ಗುರುಗಳಿಂದ ಆಶೀರ್ವಚನ, ಗೋಪೂಜೆ, ಕುಮಾರಿ ಪೂಜೆ, ದಂಪತಿಪೂಜೆ, ಬ್ರಾಹ್ಮಣ ಸುವಾಸಿನಿ ಪೂಜೆ, ವೈದಿಕ ಸಂಬಾವನೆ, ಆಶೀರ್ವಾದಗ್ರಹಣ, ಮಂತ್ರಾಕ್ಷತೆ. ಮಧ್ಯಾಹ್ನ 1.30 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ .ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿಯ ಅಧ್ಯಕ್ಷ ಡಾ . ಉಮಾನಂದ ಮಲ್ಯ , ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ , ಪಂಡಿತ್ ನರಸಿಂಹ ಆಚಾರ್ಯ, ಪಂಡಿತ್ ಕಾಶಿ ನಾಥ್ ಆಚಾರ್ಯ , ವೇದಮೂರ್ತಿ ಭಾಸ್ಕರ್ ಭಟ್ , ವೇದಮೂರ್ತಿ ವೈಕುಂಠ ಭಟ್, ಸಮಿತಿಯ ಅಧ್ಯಕ್ಷ ಡಾ. ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಕೋಶಾಧಿಕಾರಿ ವಿಠಲ ಆಚಾರ್ಯ, ರಘುರಾಮ ಕಾಮತ್, ಗಣೇಶ್ ಬಾಳಿಗಾ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.