ರೈಲಿಗೆ ಸಿಲುಕಿ 96 ಕುರಿಗಳು ಧಾರುಣ ಸಾವು

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ-ಕೂಡಗಿ ರಸ್ತೆಯ ಮೇಲ್ವೇತುವೆಯ ಕೆಳಗಡೆ ಹಾಯ್ದುಹೋಗುವ ಗದಗ-ವಿಜಯಪೂರ ರೈಲ್ವೆ ಮಾರ್ಗದಲ್ಲಿ ರೈಲು ಡಿಕ್ಕಿ ಹೊಡೆದು ಸುಮಾರು 96 ಕುರಿಗಳು ಸಾವನ್ನಪ್ಪಿರುವ ಘಟಣೆ ಸಂಬವಿಸಿದೆ. ಮಳೆ ಬರುತ್ತಿರುವ ಸಂದರ್ಬದಲ್ಲಿ ಸೇತುವೆ ಕೆಳಗಡೆ ಚಾಟಿಗೆ ನಿಂತ ಕುರಿಗಾರರು ಒಂದು ರೈಲ್ವೆ ಹೋದ ನಂತರ ಕುರಿಗಳನ್ನು ಹಳಿ ದಾಟಿಸುವ ಸಂದರ್ಬದಲ್ಲಿ ಮತ್ತೊಂದು (ಗದಗ-ಮುಂಬೈ) ರೈಲು ಹಾಯ್ದು ಈ ದುರ್ಘಟಣೆ ನಡೆದಿದೆ.

ಈ ಕುರಿತು ಮಾಜಿ ಸಚಿವರಾದ ಎಸ್ ಕೆ ಬೆಳ್ಳುಳ್ಳಿ ಘಟನಾಸ್ಥಳಕ್ಕೆ ಆಗಮಿಸಿ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತನಾಡಿ ಸರ್ಕಾರದಿಂದ ಸಿಗುವ ಎಲ್ಲಾ ಪರಿಹಾರವನ್ನು ಕೊಡಿಸುವ ಪ್ರಾಮಾಣಿಕತೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

Related Posts

Leave a Reply

Your email address will not be published.