ನ.27 ವಿಐಪೀಸ್ ಲಾಸ್ಟ್ ಬೆಂಚ್ ಸಿನಿಮಾದ ಆಂಥಮ್ ಸಾಂಗ್ ಡಿ ಬೀಟ್ಸ್ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆ

ಎ.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಆಶೀಕಾ ಸುವರ್ಣ ನಿರ್ಮಾಣದಲ್ಲಿ ಪ್ರಧಾನ್ ಎಂಪಿ ನಿರ್ದೇಶನದಲ್ಲಿ ತಯಾರಾದ ವಿಐಪೀಸ್ ಲಾಸ್ಟ್ ಬೆಂಚ್ ತುಳು-ಕನ್ನಡ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದ್ದು, ಸಿನಿಮಾದ ಆಂಥಮ್ ಸಾಂಗ್ ನವೆಂಬರ್ 27ರ ಭಾನುವಾರದಂದು ಬೆಳಿಗ್ಗೆ 11.11 ನಿಮಿಷಕ್ಕೆ ಬಿಡುಗಡೆಗೊಳ್ಳಲಿದೆ. ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಸಿನಿಮಾದ ಆಂಥಮ್ ಸಾಂಗ್ ಬಿಡುಗಡೆಗೊಳ್ಳಲಿದೆ. ನಟ ಬೋಜರಾಜ ವಾಮಂಜೂರು ಈ ಸಾಂಗ್‍ನ್ನು ಹಾಡಿದ್ದು, ಅದ್ಭುತವಾಗಿ ಸಾಂಗ್ ಮೂಡಿಬಂದಿದೆ. ಮ್ಯೂಸಿಕ್‍ನಲ್ಲಿ ವಿನ್ಯಾಸ್ ಮಧ್ಯ, ಸಾಹಿತ್ಯದಲ್ಲಿ ಕೀರ್ತನ್ ಭಂಡಾರಿ ಸಹಕರಿಸಿದ್ದಾರೆ.

ಇನ್ನು ಈ ಸಿನಿಮಾಕ್ಕೆ ಒಂದೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಚಿತ್ರೀಕರಣ ನಡೆದಿದೆ. ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಪೃಥ್ವಿ ಅಂಬಾರ್, ರೂಪೇಶ್ ಶೆಟ್ಟಿ, ವಿನೀತ್ ಕುಮಾರ್, ಅಥರ್ವ ಪ್ರಕಾಶ್ ಪಾಂಡೇಶ್ವರ್, ಸಚಿನ್ ಮಾಡ, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ, ರವಿ ರಾಮಕುಂಜ, ಪ್ರವೀಣ್ ಮರ್ಕಮೆ, ಆರಾಧ್ಯ ಶೆಟ್ಟಿ, ನಿರಿಕ್ಷಾ ಶೆಟ್ಟಿ ಪುತ್ತೂರು, ರೂಪ ವರ್ಕಾಡಿ, ಅನಿತಾ, ಐಸಿರಿ ಜೈನ್, ಪ್ರಾರ್ಥನಾ ಸುವರ್ಣ, ಮೊದಲಾದ ಬಹು ತಾರಾಗಣ ಈ ಸಿನಿಮಾದಲ್ಲಿದೆ. ತುಳು ಸಿನಿಮಾರಂಗದ ಖ್ಯಾತ ನಾಮ ಕಲಾವಿದರಾದ ಪೃಥ್ವಿ ಅಂಬಾರ್, ರೂಪೇಶ್ ಶೆಟ್ಟಿ, ವಿನಿತ್ ಕುಮಾರ್ ಮೊದಲಾದವರು ಈ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದು ಈ ಸಿನಿಮಾದ ವಿಶೇಷತೆಯಾಗಿದೆ.

Related Posts

Leave a Reply

Your email address will not be published.