v4 ಡಿಜಿಟಲ್ ಇನ್ಫೋಟೆಕ್‌ನ ಸೆಕ್ಯೂರಿಟಿ ನಿಧನ

ಮಂಗಳೂರಿನ ಯೆಯ್ಯಾಡಿಯ V4 ಡಿಜಿಟಲ್ ಇನ್ಫೋಟೆಕ್‌ನ ಸೆಕ್ಯೂರಿಟಿ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜು(74) ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಕಳೆದ ಹಲವಾರು ವರ್ಷಗಳಿಂದ V4 ಮೀಡಿಯಾದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದರು. ಮೃತರಿಗೆ ಪತ್ನಿ ಹಾಗೂ ಮೂವರು ಮಕ್ಕಳು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. ಮೂಲತಃ ಮಡಿಕೇರಿಯಾಗಿರುವ ಇವರು, ಮಂಗಳೂರಲ್ಲಿ ಬಂದು ನೆಲೆಸಿದ್ದರು. ಇಂದು ಮಡಿಕೇರಿಯ ಶುಂಠಿಕೊಪ್ಪದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಿದ್ದಾರೆ. V4 ಡಿಜಿಟಲ್ ಇನ್ಫೋಟೆಕ್‌ನ ಕಚೇರಿ ಮುಂಭಾಗದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ V4 ಡಿಜಿಟಲ್ ಇನ್ಫೋಟೆಕ್‌ನ ನಿರ್ದೇಶಕರು, V4 ನ್ಯೂಸ್ ಆಡಳಿತ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.