HomeFresh Newsಮಂಗಳೂರು: ವಿದ್ಯುತ್ ತಂತಿ ತುಳಿದು ಇಬ್ಬರು ರಿಕ್ಷಾ ಚಾಲಕರು ಮೃತ್ಯು

ಮಂಗಳೂರು: ವಿದ್ಯುತ್ ತಂತಿ ತುಳಿದು ಇಬ್ಬರು ರಿಕ್ಷಾ ಚಾಲಕರು ಮೃತ್ಯು

ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರಿಕ್ಷಾ ಚಾಲಕರು ದುರಂತ ಸಾವನ್ನಪ್ಪಿದ ಘಟನೆ ನಗರದ ಪಾಂಡೇಶ್ವರದ ರೊಸಾರಿಯೋ ಸ್ಕೂಲ್ ಬಳಿ ನಡೆದಿದೆ.

ಪುತ್ತೂರು ರಾಮಕುಂಜ ನಿವಾಸಿ ದೇವರಾಜ್ ಗೌಡ(46), ಹಾಸನ ಜಿಲ್ಲೆಯ ಆಲೂರು ಮೂಲದ ರಾಜು (50) ಮೃತರು. ಇವರು ರೊಸಾರಿಯೋ ಸ್ಕೂಲ್ ಬಳಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ನಿನ್ನೆ ರಾತ್ರಿ ಇವರ ಮನೆ ಬಳಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿತ್ತು. ಎಂದಿನಂತೆ ನಸುಕಿನಲ್ಲಿ ನಾಲ್ಕು ಗಂಟೆ ವೇಳೆಗೆ ಚಾಲಕ ರಾಜು ತನ್ನ ಆಟೋ ತೊಳೆಯಲೆಂದು ಹೊರಗೆ ಬಂದಿದ್ದು ಶಾಕ್ ಆಗಿದ್ದಾರೆ. ಹೊರಗೆ ಬಿದ್ದುಕೊಂಡಿದ್ದ ವಿದ್ಯುತ್ ತಂತಿಯನ್ನು ನೋಡದೆ ತುಳಿದು ಶಾಕ್ ಆಗಿತ್ತು. ಇದನ್ನು ತಿಳಿದ ಮನೆಯ ಒಳಗಿದ್ದ ಇನ್ನೊಬ್ಬ ಗೆಳೆಯ ದೇವರಾಜು ಓಡಿ ಬಂದಿದ್ದು ಅಲ್ಲಿದ್ದ ಗೋಣಿ ಚೀಲದಲ್ಲಿ ರಾಜು ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಮಳೆ ಬರುತ್ತಿದ್ದುದರಿಂದ ಅವರಿಗೂ ತೀವ್ರ ಶಾಕ್ ಆಗಿದ್ದು ನೆಲಕ್ಕೆ ಉರುಳಿದ್ದಾರೆ.

ವಿದ್ಯುತ್ ಕಂಬ ರಾತ್ರಿ 9 ಗಂಟೆಗೆ ಮಳೆಗೆ ಉರುಳಿ ಬಿದ್ದಿದ್ದು ಅದರಲ್ಲಿನ ತಂತಿಯಲ್ಲಿ ವಿದ್ಯುತ್ ಪ್ರವಹಿಸುವುದು ನಿಂತಿರಲಿಲ್ಲ. ಹೀಗಾಗಿ ಬೆಳಗ್ಗಿನ ವೇಳೆಗೆ ದುರಂತ ಸಂಭವಿಸಿದೆ. ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದಾಗ, ರಾತ್ರಿ ವೇಳೆಯೇ ವಿದ್ಯುತ್ ಕಂಬ ಬಿದ್ದಿರುವುದು ಪತ್ತೆಯಾಗಿದೆ. ಹೀಗಾಗಿ ಮೆಸ್ಕಾಂ ಸಿಬಂದಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಪಾಂಡೇಶ್ವರ ಪೊಲೀಸರು 304ಎ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ.

add - tandoor .
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments