ಪ್ರತಿಭಾ ಕಾರಂಜಿ: ಮಂಗಳೂರು ನಗರದ ಮೇಧ್ಯಾ ಕೊಟ್ಟಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಂಗಳೂರಿನ ಕುಮಾರಿ ಮೇಧ್ಯಾ ಕೊಟ್ಟಾರಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ. ಇವರು ಮಂಗಳೂರು ಸಂತ ಅಲೋಷಿಯಸ್‌ ಆಂಗ್ಲ ಮಾಧ್ಯಮ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ.

ಕಿನ್ನಿಗೋಳಿಯ ಮೇರಿವೇಲ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅವರು ಕಥೆ ಹೇಳುವ ವಿಭಾಗದಲ್ಲಿ ಗಮನ ಸೆಳೆದಿದ್ದು, ಅವರ ಸಾಧನೆಯನ್ನು ಪರಿಗಣಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗಿದೆ.

ಕುಮಾರ್ ಮೇಧ್ಯಾ ಕೊಟ್ಟಾರಿ ಅವರು ಮಂಗಳೂರಿನ ವಕೀಲರಾದ ಚಂದ್ರಹಾಸ ಕೊಟ್ಟಾರಿ ಮತ್ತು ಪ್ರೇಮಲತಾ ದಂಪತಿಯ ಪುತ್ರಿಯಾಗಿದ್ದಾರೆ.

ಕುಮಾರ್ ಮೇಧ್ಯಾ ಕೊಟ್ಟಾರಿ ಅವರು ಈಗಾಗಲೇ ಜಿಲ್ಲೆಯಲ್ಲಿ ನಡೆದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಬಾಲ ಕಲಾವಿದೆಯ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Related Posts

Leave a Reply

Your email address will not be published.