ಮಂಜೇಶ್ವರದಲ್ಲಿ ಗುಜರಿ ಅಂಗಡಿಗೆ ನುಗ್ಗಿದ ಕಳ್ಳರು
ಮಂಜೇಶ್ವರ: ತೂಮಿನಾಡು ಪದವು ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಗುಜರಿ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು ಒಂದೂವರೆ ಲಕ್ಷ ರೂ ಬೆಲೆಬಾಳುವ ಗುಜರಿ ಸಾಮಾಗ್ರಿಗಳನ್ನು ಕೊಂಡೊಯ್ದಿದ್ದಾರೆ.
ಕಳೆದ ರಾತ್ರಿ ಕಳವು ನಡೆದಿದ್ದು, ಗುಜರಿ ಸಾಮಾಗ್ರಿಗಳನ್ನು ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ. ಅಂಗಡಿಯ ಮುಂಭಾಗದ ಗೇಟನ್ನು ಮುರಿದು ಒಳನುಗ್ಗಿದ ಕಳ್ಳರ ತಂಡ ಓಮ್ನಿ ವ್ಯಾನಿನಲ್ಲಿ ಸಾಮಾಗ್ರಿಗಳನ್ನು ಸಾಗಿಸಿದೆ. ಮೂಲತಃ ಉಳ್ಳಾಲ ನಿವಾಸಿಯೂ ತೂಮಿನಾಡಿನಲ್ಲಿ ಗುಜರಿ ವ್ಯಾಪಾರಿಯಾಗಿರುವ ಅಬ್ದುಲ್ ರವೂಫ್ ಎಂಬವರ ಮಾಲಕತ್ವದಲ್ಲಿರುವ ಮುನಾಜ್ ಗುಜರಿ ಅಂಗಡಿಯಿಂದ ಕಳವು ನಡೆಸಲಾಗಿದೆ. ಸಿಸಿ ದೃಶ್ಯವನ್ನು ನೋಡುವಾಗ ಕಳ್ಳರ ಬಗ್ಗೆ ಸುಳಿವು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಂಜೇಶ್ವರ ಪೆÇಲೀಸರಿಗೆ ದೂರಿನಂತೆ ಪೊಲೀಸರು ಆಗಮಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ.. ಲಾಕ್ ಡೌನ್ ಮರೆಯಲ್ಲಿ ವ್ಯಾಪಕ ಕಳವು ಪ್ರಕರಣಗಳು ವರದಿಯಾಗುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ.