ಹೊಸಬೆಟ್ಟುವಿನ ತಾವರೆಕೊಳದಲ್ಲಿ ಕಿರು ಸೇತುವೆ ನಿರ್ಮಾಣ : ವಿ4 ನ್ಯೂಸ್ ನ ವರದಿಗೆ ಎಚ್ಚೆತ್ತ ಅಧಿಕಾರಿಗಳು
ಹೊಸಬೆಟ್ಟುವಿನ ತಾವರೆಕೊಳದಲ್ಲಿದ್ದ ಕಿರು ಸೇತುವೆಯನ್ನು ದಿಢೀರ್ ಕೆಡವಿ ಹಾಕಿದ್ದು, ಇದರಿಂದ ಸ್ಥಳೀಯರಿಗೆ ತೊಂಬಾ ತೊಂದರೆಯಾಗಿತ್ತು. ಈ ಬಗ್ಗೆ ವಿ4 ನ್ಯೂಸ್ ಸಮಗ್ರ ವರದಿಯನ್ನು ಭಿತ್ತರಿಸಿತ್ತು. ಮಾತ್ರವಲ್ಲದೆ ಶಾಸಕ ಡಾ. ವೈ ಭರತ್ ಶೆಟ್ಟಿಯವರ ಗಮನಕ್ಕೆ ತರಲಾಗಿತ್ತು. ಇದೀಗ ಶಾಸಕರಾದ ಡಾ.ಭರತ್ ಶೆಟ್ಟಿಯವರ ಸಹಕಾರದೊಂದಿಗೆ ತಾವರೆಕೊಳದಲ್ಲಿ 74 ಲಕ್ಷ ರೂ. ವೆಚ್ಚದಲ್ಲಿ ನೂತನ ಕಿರು ಸೇತುವೆ ನಿರ್ಮಾಣವಾಗಲಿದೆ. ಸ್ಥಳಕ್ಕೆ ಸ್ಥಳೀಯ ಮಹಾ ನಗರ ಪಾಲಿಕೆ ಸದಸ್ಯರಾದ ನಯನ ಕೋಟ್ಯಾನ್ ಮತ್ತು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಭೇಟಿ ನೀಡಿದರು. ರಾಜಕಾಲುವೆಗೆ ಅಡ್ಡಲಾಗಿ ಈ ಭಾಗದಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಮಳೆಗಾಲದಲ್ಲಿ ಸುಮಾರು ಮನೆಗಳಿಗೆ ಕೃತಕ ನೆರೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿದ್ದು, ಸ್ಥಳೀಯರ ಮನವಿ ಮೇರೆಗೆ ತಾತ್ಕಾಲಿಕವಾಗಿ ರಸ್ತೆಯನ್ನು ಅಗೆದು ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರು ಸುತ್ತುಬಳಸಿ ಹೋಗುವಂತಾಗಿತ್ತು. ವಲಯಾಯುಕ್ತ ನಾಗರಾಜ್, ಇಇ ಗುರುಪ್ರಸಾದ್, ಬಿಜೆಪಿ ಮುಖಂಡ ರಾಘವೇಂದ್ರ ಶೆಣೈ, ಸತೀಶ್ ದೇವಾಡಿಗ, ಜೆಇ ಲಾವಣ್ಯ ಮತ್ತಿತರರು ಉಪಸ್ಥಿತರಿದ್ದರು.