Home 2023 June (Page 2)

ಯುವ ಜನತೆಯ ಸಮಾಜ ಸೇವೆಯ ಚಿಂತನೆ ಶ್ಲಾಘನೀಯ: ವಂದನೀಯ ಪಾವ್ಲ್ ಸಿಕ್ವೇರ

ಭಾರತೀಯ ಕಥೊಲಿಕ ಯುವ ಸಂಚಲನ ಬಳಕುಂಜೆ ಘಟಕವು ತನ್ನ 50 ಸಂವತ್ಸರಗಳನ್ನು ಪೂರೈಸಿದ ಸವಿ ನೆನಪಿಗಾಗಿ, ಸಮಾಜಕ್ಕೆ ಕೊಡುಗೆಯಾಗಿ ಬಳಕುಂಜೆ ಗುತ್ತು ಧೂಮಾವತಿ ದ್ವಾರದ ಮುಂಭಾಗದಲ್ಲಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣದ ಉದ್ಘಾಟನಾ ಸಮಾರಂಭವು ಜೂನ್ 29ರಂದು ಬೆಳಿಗ್ಗೆ 9:15 ಕ್ಕೆ ಜರುಗಿತು. ಈ ಪ್ರಯಾಣಿಕರ ತಂಗುದಾಣದ ಆಶೀರ್ವಚನವನ್ನು ಬಳಕುಂಜೆಯ ಸಂತ ಪೌಲರ ದೇವಾಲಯದ

ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ ಮೂಡುಬಿದಿರೆಯ ಸೋನಾಲ್

ಮೂಡುಬಿದಿರೆ: ಇಲ್ಲಿನ ಉದ್ಯಮಿ ಶಂಕರ್ ಎ. ಕೋಟ್ಯಾನ್ – ಜೀವಿತಾ ಶಂಕರ್ ದಂಪತಿಯ ಪುತ್ರಿಯಾಗಿರುವ ಸೋನಲ್ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಮೆಚ್ಚುಗೆಯನ್ನು ಪಡೆದಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಕೂದಲು ಇರುವುದಿಲ್ಲ ಎಂಬುದನ್ನು ತಿಳಿದುಕೊಂಡಿದ್ದ ಸೋನಲ್ ತನ್ನ ನೀಳವಾದ ಕೂದಲನ್ನು ಕತ್ತರಿಸಿ ಕೇಶದಾನ ಮಾಡಬೇಕೆಂದು ಕಳೆದ ಒಂದು ವರ್ಷದಿಂದ

ಬಿಜೆಪಿಯಲ್ಲಿ ಮನೆಯೊಂದು 10 ಬಾಗಿಲು ಎಂಬಂತಾಗಿದೆ : ಮಂಗಳೂರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಟೀಕೆ

ಬಿಜೆಪಿಯಲ್ಲಿ ಮನೆಯೊಂದು ಬಾಗಿಲು ಹತ್ತು ಎಂಬಂತಾಗಿದೆ. ಯಾರು ಏನು ಮಾತನಾಡುತ್ತಾರೆಂದು ಗೊತ್ತಾಗುತ್ತಿಲ್ಲ. ರಾಜ್ಯ ಬಿಜೆಪಿಯ ಪರಿಸ್ಥಿತಿಯನ್ನು ನಿಯಂತ್ರಿಸಲು 56 ಇಂಚಿನ ಎದೆಯವರಿಗೂ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಟೀಕಿಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,

ಉಳ್ಳಾಲ ಬೀಚ್ ಸಮುದ್ರಪಾಲಾಗುತ್ತಿದ್ದ ಯುವಕನ ರಕ್ಷಣೆ

ಉಳ್ಳಾಲ: ಸಮುದ್ರ ವಿಹಾರಕ್ಕೆ ತೆರಳಿದ್ದ ಬೆಂಗಳೂರು ಮೂಲದ ಯುವಕ ಸಮುದ್ರದ ಭಾರೀ ಗಾತ್ರದ ಅಲೆಗಳ ನಡುವೆ ಸಿಲುಕಿದ್ದು, ಪ್ರಾಣಾಪಾಯದಲ್ಲಿದ್ದ ಆತನನ್ನು ಮೊಗವೀರಪಟ್ನದ ಶಿವಾಜಿ ಜೀವರಕ್ಷಕ ದಳದ ಸದಸ್ಯರು ರಕ್ಷಿಸಿರುವ ಘಟನೆ ಇಂದು ಉಳ್ಳಾಲ ಬೀಚ್ ನಲ್ಲಿ ನಡೆದಿದೆ. ಬೆಂಗಳೂರು ಯಶವಂತಪುರ ನಿವಾಸಿ ನಿಝಾಮ್ (35) ಎಂಬಾತನನ್ನು ರಕ್ಷಿಸಲಾಗಿದೆ. ಈತನನ್ನು ಮೊಗವೀರಪಟ್ನ

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ತಪ್ತ ಮುದ್ರಾಧಾರಣೆ

ಉಡುಪಿ: ಪ್ರಥಮ ಏಕಾದಶಿ ಪ್ರಯುಕ್ತ ಪೆರ್ಡೂರು ಬ್ರಾಹ್ಮಣ ಸೇವಾ ಸಮಿತಿಯ ವತಿಯಿಂದ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮವನ್ನು ಇಂದು ನಡೆಸಲಾಯಿತು. ಶ್ರೀ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ಸುದರ್ಶನ ಹೋಮ ನಡೆಸಿ, ಪೂರ್ಣಾಹುತಿಯ ನಂತರ ಶೀರೂರು ಮಠದ ಸ್ವಾಮಿಗಳಾದ ಶ್ರೀ ಶ್ರೀ ವೇದದವರ್ಧನ ತೀರ್ಥರು

ಮುಂಬೈ: ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಕಲೆ ಯಕ್ಷಗಾನ: ಐಕಳ ಹರೀಶ್ ಶೆಟ್ಟಿ

ಬಂಟರ ಸಂಘ ಮುಂಬಯ ಇದರ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಮೀರಾರೋಡ್ ಪೂರ್ವದ ಠಾಕೂರ್ ಮಾಲ್ ಮತ್ತು ಪ್ರಸಾದ್ ಇಂಟರ್ ನ್ಯಾಶನಲ್ ಹೊಟೇಲ್ ಸಮೀಪದ, ಮಹಾಜನ್ ವಾಡಿಯಲ್ಲಿನ ಭಾರತ ರತ್ನ ಗಾನ ಸಾಮ್ರಾಜ್ಯ ದಿ. ಲತಾ ಮಂಗೇಶ್ಯ ನಾಟ್ಯ ಸಭಾಗೃಹದಲ್ಲಿ ಯಕ್ಷಗಾನ ವೇಷಧಾರಿ ಮಹಾಬಲೇಶ್ವರ ಭಟ್ ಕ್ಯಾದಗಿ, ವಿನೂತನ ಶೈಲಿ. ಪುಷ್ಪಕ ಯಾನ’ ಏಕವ್ಯಕ್ತಿ

ಮಂಗಳೂರು : ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಜನಸ್ಪಂದನ ಸಭೆ – ಪ್ರಮುಖ ಸಮಸ್ಯೆಗಳ ಬಗ್ಗೆ ಸಭೆಯ ಮುಂದಿಟ್ಟ ಜನತೆ

ಮಂಗಳೂರಿನ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಜನಸ್ಪಂದನೆ ಸಭೆ ನಡೆಯಿತು. ಮಂಗಳೂರಿನ ಪ್ರಮುಖ ಸಮಸ್ಯೆಗಳ ಬಗ್ಗೆ ಜನರು ಮತ್ತು ಸಂಘಟನೆಗಳ ಪ್ರಮುಖರು ಸಭೆಯ ಮುಂದಿಟ್ಟರು.ಉಪಸಾರಿಗೆ ಆಯುಕ್ತ ದಕ್ಷಿಣ ಕನ್ನಡ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೋನ್ ಬಿ, ಮಿಸ್ಥಿತ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು,

ರೋಗರುಜಿನಗಳಿಂದ ರಕ್ಷಣೆಗಾಗಿ ‘ತಪ್ತ ಮುದ್ರಾಧಾರಣೆ’ : ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮುದ್ರಾಧಾರಣೆಗೆ ಮುಂದಾದ ಭಕ್ತರು

ಉಡುಪಿ: ಮಳೆಗಾಲ ಬಂತು ಅಂದರೆ ನಾನಾ ರೋಗರುಜಿನಗಳ ಆಗಮನವಾಯಿತೆಂದೇ ಅರ್ಥ. ಈ ಸಮಯದಲ್ಲಿ ಒಂದಲ್ಲ ಒಂದು ರೀತಿಯ ರೋಗಕ್ಕೆ ತುತ್ತಾಗುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಬರಬಹುದಾದ ರೋಗರುಜಿನಗಳಿಂದ ರಕ್ಷಣೆಯ ಸಲುವಾಗಿ ತಪ್ತ ಮುದ್ರಾಧಾರಣೆ ಮಾಡುವ ಎಂಬ ನಂಬಿಕೆಯಿದೆ. ಮುದ್ರಾಧಾರಣೆಯನ್ನು ಚಾತುರ್ಮಾಸ್ಯದ ಮೊದಲ ದಿನ ಸರ್ವೈಕಾದಶಿಯಂದೇ ನಡೆಸಲಾಗುತ್ತದೆ. ಈ ಸಲುವಾಗಿ

ಯೆಯ್ಯಾಡಿ : ಕಟ್ಟಡದ ಮೇಲೆ ಬಿದ್ದ ಬೃಹತ್ತಾಕಾರದ ಮರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಕೆಲವೆಡೆ ಹಾನಿ ಸಂಭವಿಸಿದೆ. ಮಂಗಳೂರಿನ ಯೆಯ್ಯಾಡಿ ಜಂಕ್ಷನ್‍ನಲ್ಲಿ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬವೊಂದು ವಾಣಿಜ್ಯ ಕಟ್ಟಡ ಬಿದ್ದಿದ್ದು, ಸಂಭಾವ್ಯ ಹಾನಿ ತಪ್ಪಿದೆ. ಯೆಯ್ಯಾಡಿಯಿಂದ ಶಕ್ತಿನಗರಕ್ಕೆ ಸಂಪರ್ಕಿಸುವ ರಸ್ತೆ ಇದ್ದಾಗಿದ್ದು, ಇಲ್ಲಿ ದಿನ ನಿತ್ಯ ವಾಹನ ಸಂಚಾರ ಕೂಡ ಇದ್ದು,

ಉಡುಪಿಯಲ್ಲಿ ಸಂಭ್ರಮದ ಈದ್-ಅಲ್-ಅಧಾ ಆಚರಣೆ

ಉಡುಪಿ : ಕರಾವಳಿಯ ಮುಸ್ಲಿಮರು ಇಂದು ಅತ್ಯಂತ ಸಡಗರ, ಸಂಭ್ರಮದಿಂದ ಈದ್-ಅಲ್-ಅಧಾ ಆಚರಿಸುತ್ತಿದ್ದು, ಹಲವೆಡೆ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ. ಉಡುಪಿ ನಗರದ ಜುಮಾ ಮಸೀದಿಯಲ್ಲಿ ಸಾಮೂಹಿಕ ನಮಾಝ್, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತಂದರು. ಇನ್ನೂ ಕೆಲವೆಡೆ ಮಳೆಯ