ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ ಮೂಡುಬಿದಿರೆಯ ಸೋನಾಲ್

ಮೂಡುಬಿದಿರೆ: ಇಲ್ಲಿನ ಉದ್ಯಮಿ ಶಂಕರ್ ಎ. ಕೋಟ್ಯಾನ್ – ಜೀವಿತಾ ಶಂಕರ್ ದಂಪತಿಯ ಪುತ್ರಿಯಾಗಿರುವ ಸೋನಲ್ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಮೆಚ್ಚುಗೆಯನ್ನು ಪಡೆದಿದ್ದಾರೆ.
ಕ್ಯಾನ್ಸರ್ ಪೀಡಿತರಿಗೆ ಕೂದಲು ಇರುವುದಿಲ್ಲ ಎಂಬುದನ್ನು ತಿಳಿದುಕೊಂಡಿದ್ದ ಸೋನಲ್ ತನ್ನ ನೀಳವಾದ ಕೂದಲನ್ನು ಕತ್ತರಿಸಿ ಕೇಶದಾನ ಮಾಡಬೇಕೆಂದು ಕಳೆದ ಒಂದು ವರ್ಷದಿಂದ ಕನಸು ಕಂಡಿದ್ದಳು. ಇದೀಗ ಬೆಂಗಳೂರಿನಲ್ಲಿ ಕ್ಯಾನ್ಸರ್ ಪೀಡಿತರ ನೆರವಿಗಿರುವ ಸಂಸ್ಥೆಯೊಂದಕ್ಕೆ ಬುಧವಾರ ತೆರಳಿ ಕ್ಯಾನ್ಸರ್ ಪೀಡಿತರೋರ್ವರಿಗೆ ಕೇಶದಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಸೋನಲ್ ಕ್ಯಾನ್ಸರ್ ಪೀಡಿತರ ಬಗ್ಗೆ ಸಣ್ಣ ಪ್ರಾಯದಲ್ಲೇ ತಿಳಿದುಕೊಂಡು ಅವರಿಗೆ ಯಾವು ದಾದರೂ ಒಂದು ರೂಪದಲ್ಲಿ ನೆರವಾಗಬೇಕೆಂದುಕೊಂಡಿ ದ್ದಳು. ಇದೀಗ ತನ್ನ ನೀಳವಾದ ಕೇಶವನ್ನು ದಾನ ಮಾಡುವ ಮೂಲಕ ನೆರವಾಗಿದ್ದಾಳೆ
