ಮುಂಬೈ: ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಕಲೆ ಯಕ್ಷಗಾನ: ಐಕಳ ಹರೀಶ್ ಶೆಟ್ಟಿ

ಬಂಟರ ಸಂಘ ಮುಂಬಯ ಇದರ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಮೀರಾರೋಡ್ ಪೂರ್ವದ ಠಾಕೂರ್ ಮಾಲ್ ಮತ್ತು ಪ್ರಸಾದ್ ಇಂಟರ್ ನ್ಯಾಶನಲ್ ಹೊಟೇಲ್ ಸಮೀಪದ, ಮಹಾಜನ್ ವಾಡಿಯಲ್ಲಿನ ಭಾರತ ರತ್ನ ಗಾನ ಸಾಮ್ರಾಜ್ಯ ದಿ. ಲತಾ ಮಂಗೇಶ್ಯ ನಾಟ್ಯ ಸಭಾಗೃಹದಲ್ಲಿ ಯಕ್ಷಗಾನ ವೇಷಧಾರಿ ಮಹಾಬಲೇಶ್ವರ ಭಟ್ ಕ್ಯಾದಗಿ, ವಿನೂತನ ಶೈಲಿ. ಪುಷ್ಪಕ ಯಾನ’ ಏಕವ್ಯಕ್ತಿ ನವರಸಾಭಿವ್ಯಕ್ತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ನೀಡಿದ ಮಹಾಬಲೇಶ್ವರ ಭಟ್ ಕ್ಯಾದಗಿ ಅವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರ ಐಕಳ ಹರೀಶ್ ಶೆಟ್ಟಿಯವರು ಸನ್ಮಾನಿಸಿದರು, ಬಳಿಕ ಮಾತನಾಡಿ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನು ಒಳಗೊಂಡ ಯಕ್ಷಗಾನ ಶಾಸ್ತ್ರೀಯ ಕಲೆ, ಪೌರಾಣಿಕ ಹಾಗೂ ಐತಿಹಾಸಿಕ ಕಥೆಗಳನ್ನು ಪ್ರಸ್ತುತಪಡಿಸುವ ಈ ಕಲೆ ಭಾರತೀಯ ಸಂಸ್ಕೃತಿಯ ರೂಪಕಗಳನ್ನು ಸಾಕ್ಷಾತ್ಕರಿಸುವಲ್ಲಿ ಯಶಸ್ಸು ಕಂಡಿದೆ ಎಂದರು.

ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಪಶ್ಚಿಮ ವಲಯ ಸಮನ್ವಯಕ್ ಶಶಿಧರ ಕೆ. ಶೆಟ್ಟಿ , ಸಂಘ್ ಕ್ರೀಡಾ ವಿಭಾಗದ ಕಾರ್ಯ ಧ್ಯಕ್ಷ ಗಿರೀಶ್ ಶೆಟ್ಟಿ ತೆಲ್ಲರ್, ವಸೈ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಪಾಂಡು ಎಲ್ ಶೆಟ್ಟಿ,ಮೀರಾ-ಬಾಯಿಂದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, , ಮಾಜಿ ಕಾರ್ಯಾಧ್ಯಕ್ಷ ಅರುಣೋದಯ ರೈ, ಸಲಹೆಗಾರ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್, ಕಾರ್ಯದರ್ಶಿರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಬಂಟರ ಸಂಘ ವಸೈ ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಪಾಂಡು ಶೆಟ್ಟಿ, ಉಪಸ್ಥಿರಿದ್ದರು ಕಾರ್ಯಕ್ರಮವನ್ನು, ಸಂಘಟಕ ಬಾಬಾ ಪ್ರಸಾದ ಅರಸ ನಿರೂಪಿಸಿದರು, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಯೋಗೀಶ್ ಗಣಿಗ ಅವರನ್ನು ಗೌರವಿಸಲಾಯಿತು..

Related Posts

Leave a Reply

Your email address will not be published.