ಮಂಗಳೂರು : ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಜನಸ್ಪಂದನ ಸಭೆ – ಪ್ರಮುಖ ಸಮಸ್ಯೆಗಳ ಬಗ್ಗೆ ಸಭೆಯ ಮುಂದಿಟ್ಟ ಜನತೆ
ಮಂಗಳೂರಿನ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಜನಸ್ಪಂದನೆ ಸಭೆ ನಡೆಯಿತು. ಮಂಗಳೂರಿನ ಪ್ರಮುಖ ಸಮಸ್ಯೆಗಳ ಬಗ್ಗೆ ಜನರು ಮತ್ತು ಸಂಘಟನೆಗಳ ಪ್ರಮುಖರು ಸಭೆಯ ಮುಂದಿಟ್ಟರು.ಉಪಸಾರಿಗೆ ಆಯುಕ್ತ ದಕ್ಷಿಣ ಕನ್ನಡ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೋನ್ ಬಿ, ಮಿಸ್ಥಿತ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಯಾವುದೇ ವಿಚಾರದ ದೂರು ಇದ್ದರೆ ಸಾರ್ವಜನಿಕರು ಆರ್‍ಟಿಒ ಕಚೇರಿ ಸಂಪರ್ಕಿಸಿ ದೂರು ನೀಡಬಹುದು ಎಂದವರು ಹೇಳಿದರು.
ಕಾರ್ಮಿಕ ಮುಖಂಡ ಬಿ.ಕೆ ಇಮ್ತಿಯಾಜ್ ಅವರು ಮಾತನಾಡಿ, ನಗರಗಳಲ್ಲಿ ನರ್ಮ್ ಬಸ್ 68ಕ್ಕೆ ಅನುಮತಿ ಇದೆ. ಆದರೆ ಎಲ್ಲಾ ನರ್ಮ್ ಬಸ್‍ಗಳನ್ನು ಓಡಿಸುತ್ತಿಲ್ಲ. ಇದರಿಂದಾಗಿ ಶಕ್ತಿ ಯೋಜನೆಯು ಮಹಿಳೆಯರಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಅನುಮೋದನೆ ಪಡೆದ ಎಲ್ಲ ನರ್ಮ್ ಬಸ್ ಓಡಾಟಕ್ಕೆ ಅವಕಾಶ ನೀಡಬೇಕು ಎಂದರು.
ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್ ಮಾತನಾಡಿ, ಪರವಾನಿಗೆ ಇದ್ದರೂ ಓಡದ ನಿಗದಿತ ರೂಟ್‍ಗಳನ್ನು ತಪ್ಪಿಸುವ ಬಸ್‍ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸ್ಮಾರ್ಟ್ ಕಾರ್ಡ್ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ.ಬಸ್‍ಗಳ ಪೂಟ್‍ಬೋರ್ಡ್ ಎತ್ತರ ಸರಿ ಮಾಡಬೇಕು ಎಂದು ಆಗ್ರಹಿಸಿದರು.ಪರವಾನಿಗೆ ಪಡೆದ ರೂಟ್‍ನಲ್ಲಿಯೇ ಬಸ್‍ಗಳು ಸಂಚಾರ ನಡೆಸುತ್ತಿಲ್ಲ. ಸ್ಮಾರ್ಟ್ ಕಾರ್ಡ್‍ಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಖಾಸಗಿ ವಾಹನದಲ್ಲಿ ಶಾಲಾ ಮಕ್ಕಳ ಸಾಗಾಟ ಆರ್‍ಟಿಒ ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲ ಮೊದಲಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.