ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ತಪ್ತ ಮುದ್ರಾಧಾರಣೆ

ಉಡುಪಿ: ಪ್ರಥಮ ಏಕಾದಶಿ ಪ್ರಯುಕ್ತ ಪೆರ್ಡೂರು ಬ್ರಾಹ್ಮಣ ಸೇವಾ ಸಮಿತಿಯ ವತಿಯಿಂದ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ತಪ್ತ ಮುದ್ರಾಧಾರಣೆ ಕಾರ್ಯಕ್ರಮವನ್ನು ಇಂದು ನಡೆಸಲಾಯಿತು. ಶ್ರೀ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ಸುದರ್ಶನ ಹೋಮ ನಡೆಸಿ, ಪೂರ್ಣಾಹುತಿಯ ನಂತರ ಶೀರೂರು ಮಠದ ಸ್ವಾಮಿಗಳಾದ ಶ್ರೀ ಶ್ರೀ ವೇದದವರ್ಧನ ತೀರ್ಥರು ತಾಮ್ರದಿಂದ ತಯಾರಿಸಿದ ಸುದರ್ಶನ ಹಾಗೂ ಪಾಂಚಜನ್ಯ ಮುದ್ರೆಯನ್ನು, ಅದೇ ಅಗ್ನಿಯಲ್ಲಿ ಕಾಯಿಸಿ ಎಲ್ಲಾ ಶಿಷ್ಯ ವರ್ಗದವರಿಗೆ ಮುದ್ರಾಧಾರಣೆ ಮಾಡಿದರು. ತಪ್ತ ಮುದ್ರಾಧಾರಣೆ ಧಾರ್ಮಿಕ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಮಳೆಗಾಲದ ಶೀತ ಬಾಧೆಯಿಂದ ದೇಹಕ್ಕೆ ಬರುವ ರೋಗಗಳನ್ನು ಇದರಿಂದ ನಿಯಂತ್ರಿಸಬಹುದಾಗಿದೆ. ಈ ಕಾರ್ಯಕ್ರಮವು ಸಮಿತಿಯ ಅಧ್ಯಕ್ಷ ಪುರುಷೋತ್ತಮ ಐತಾಳ್, ಕಾರ್ಯದರ್ಶಿ ಲಕ್ಷ್ಮೀಶ ಭಟ್ ಹಾಗೂ ಸರ್ವ ಸದಸ್ಯರ ನೇತೃತ್ವದಲ್ಲಿ ನೆರವೇರಿತು. ಈ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಪಾಲ್ಗೊಂಡರು.

Related Posts

Leave a Reply

Your email address will not be published.