HomeFresh Newsಕಾರ್ಕಳದಲ್ಲಿ ಕಾಂಗ್ರೆಸ್‌ನಿಂದ ಜನಾಗ್ರಹ ಆಂದೋಲನ

ಕಾರ್ಕಳದಲ್ಲಿ ಕಾಂಗ್ರೆಸ್‌ನಿಂದ ಜನಾಗ್ರಹ ಆಂದೋಲನ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಕಾಂಗ್ರೆಸ್ ವತಿಯಿಂದ ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿದರು.  ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಕಚೇರಿಯಿಂದ ಜನಾಗ್ರಹ ಅಂದೋಲನದ ಪ್ರತಿಭಟನೆಯ ರ್‍ಯಾಲಿಯನ್ನು ಶಾಸಕರ ಕಚೇರಿಯ ಬಳಿ ಬರುತ್ತಿದ್ದಂತೆ ಪೊಲೀಸರು ತಡೆ ಹಿಡಿದ ಘಟನೆಯೂ ನಡೆಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ಮಾತನಾಡಿ, ಜನಾಗ್ರಹ ಅಂದೋಲನ ಎಂಬುದು ಹಿಂದೆಂದೂ ಕಾಣದಂಥ ಸಂಕಷ್ಟಗಳಿಗೆ ಸಿಲುಕಿರುವ ಒಕ್ಕೊರಲ ಕೊಗು ಆಗಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ನೀರೇ ಕೃಷ್ಣಶೆಟ್ಟಿ, ಹೆಬ್ರಿ ಬ್ಲಾಕ್ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಸೇವಾದಳ ಅಧ್ಯಕ್ಷ ಸುಶಾಂತ್ ನಗರ ಕಾಂಗ್ರೆಸ್ ಅಧ್ಯಕ್ಷ ಮಧು ರಾಜ ಶೆಟ್ಟಿ, ನವೀನ್ ದೇವಾಡಿಗ, ಅಣ್ಣಪ್ಪನಕ್ರೆ, ಪ್ರತಿಮಾ ರಾಣಿ, ರಹಮತ್ ಮುಂತಾದವರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments