ಕಡಲ್ಕೊರೆತ, ಸೌಪರ್ಣಿಕಾ ನದಿ ನೆರೆಹಾವಳಿ : ಸಂಕಷ್ಟ ನಿವಾರಣೆಗೆ ವರಾಹ ದೇವರಲ್ಲಿ ಪ್ರಾರ್ಥನೆ
ಬೈಂದೂರು: ಬೈಂದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ವಿಪರೀತ ರಕ್ಕಸ ಅಲೆಗಳ ಕಡಲ್ಕೊರೆತ ಸೌಪರ್ಣಿಕಾ ನದಿಯ ನೆರೆಹಾವಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತವಾಗಿ ಸಾಕಷ್ಟು ಮುಗ್ಧ ಜೀವಗಳು ಮತ್ತು ಜಾನುವಾರುಗಳು ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿವೆ. ಅಪಘಾತಗಳು ಹೆಚ್ಚುತ್ತಿರುವುದರಿಂದ ಜನರು ಭೀತರಾಗಿದ್ದು ಸಂಕಷ್ಟದ ನಿವಾರಣೆಗೆ ಜುಲೈ 28ರಂದು ನಡೆಯುವ ಬೃಹತ್ ಜಾತ್ರಾ ಮಹೋತ್ಸವದಲ್ಲಿ ಮಾರಸ್ವಾಮಿ ವರಾಹ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದರ ಮೂಲಕ ಇನ್ನು ಮುಂದೆ ನಮ್ಮ ಕ್ಷೇತ್ರದಲ್ಲಿ ಈ ರೀತಿ ಅಪಘಾತ ಹಾಗೂ ಅವಘಡ ಆಗಬಾರದೆಂದು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ.