Home ಕರಾವಳಿ Archive by category ಕಾಸರಗೋಡು

ಮಂಜೇಶ್ವರ: ತಲಪಾಡಿ-ತೂಮಿನಾಡು ತನಕ ವಾಹನ ಸಂಚಾರಕ್ಕೆ ಅನುವು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ದಿ ನಡೆಯುತ್ತಿರುವ ತಲಪಾಡಿಯಲ್ಲಿ ನಿರ್ಮಿಸಲಾದ ಪ್ರಧಾನ ರಸ್ತೆಯ ಒಂದು ಭಾಗವನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ತಲಪಾಡಿಯಿಂದ ತೂಮಿನಾಡು ತನಕ ಇರುವ 1 ಕಿ.ಲೋ. ಮೀಟರ್ ರಸ್ತೆಯನ್ನು ಬಿಟ್ಟು ಕೊಡಲಾಗಿದೆ. 21 ಮೀಟರ್ ಅಗಲದಲ್ಲಿ ನಿರ್ಮಿಸಲಾಗುತ್ತಿರುವ ಆರು ಪಥದ ರಸ್ತೆಯ 8 ಮೀಟರ್ ಬರುವ ಮಾರ್ಗವನ್ನು ಸಂಚಾರ

ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾದಲ್ಲಿ ತುಳು ಲಿಪಿ ನಾಮಫಲಕ ಅನಾವರಣ

ಶ್ರೀ ಗೋಪಾಲಕೃಷ್ಣ ಆರ್ಟ್ಸ್ & ಸ್ಫೋರ್ಟ್ಸ್ ಕ್ಲಬ್ಬಿನ ಸಹಕಾರದಿಂದ ನಿರ್ಮಿಸಲಾದ ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ತುಳು ಲಿಪಿ ನಾಮಫಲಕ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ವಾಸುದೇವ ಕುಂಟಾರು ಇವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜೈ ತುಳುನಾಡು(ರಿ.) ಕಾಸರಗೋಡು ಘಟಕದ ಅಧ್ಯಕ್ಷರಾದ ಶ್ರೀ ಹರಿಕಾಂತ್ ಸಾಲಿಯಾನ್ ಹಾಗೂ ಕಾರ್ಯದರ್ಶಿ ಕಾರ್ತಿಕ್ ಪೆರ್ಲ, ಸಂಚಾಲಕರಾದ ದೇವಿಪ್ರಸಾದ್ ನೆಕ್ರಾಜೆ

ಸ್ಪೋರ್ಟ್ಸ್ ಲೈನ್ ರೂವಾರಿ ಕ್ರೀಡಾಪಟು ಶಬೀರ್ ಅಲಿ ಎಂ.ಎಂ

ಅಂತ್ಯವಿಲ್ಲದ ಕ್ರೀಡಾ ವಸ್ತುಗಳ ಸಂಗ್ರಹದ ಸಾಕ್ಷ್ಯವನ್ನಿಲ್ಲಿ ನಾವು ಕಾಣಬಹುದು. ಕ್ರೀಡಾ ಅವಶ್ಯಕತೆಗಳು. ಬ್ಯಾಡ್ಮಿಂಟನ್ ರಾಕೆಟ್‍ಗಳ ಸ್ಟ್ರಿಂಗ್‍ನಿಂದ, ಕ್ರಿಕೆಟ್ ಬ್ಯಾಟ್‍ಗಳ ಬೈಂಡಿಂಗ್, ಸ್ಪೋರ್ಟ್ಸ್ ಪ್ಲೋರಿಂಗ್ , ಸಿಂಥೆಟಿಕ್ ಕೋರ್ಟ್ ಸ್ಥಾಪನೆ, ಮತ್ತು ಕಸ್ಟಮೈಸ್ ಮಾಡಿದ ಕ್ರೀಡಾ ಉಡುಪುಗಳಿಗೆ ಫಿಟ್‍ನೆಸ್ ಉಪಕರಣಗಳು ಸೇರಿದಂತೆ ಎಲ್ಲವನ್ನೂ ಇಲ್ಲಿ ಕಾಣಬಹುದು. ಕ್ರೀಡಾಸಕ್ತರಿಗೆ ಇದು ಹೇಳಿ ಮಾಡಿಸಿದ ಜಾಗ. ಅಂದ ಹಾಗೆ, ಈ

ಮೋಯ ಸಮುದಾಯದ ಜಾಗತಿಕ ಮಟ್ಟದ ಸಂಘಟನೆ, ‘ನಮೋ ಮೋಯರ್ ಗ್ಲೋಬಲ್ ಫೌಂಡೇಶನ್’ ಲೊಕಾರ್ಪಣೆ 

ಮುಂಬಯಿ : ಜನಸಾಮಾನ್ಯರ ಸೇವೆಗಾಗಿ ಹೊಸ ಉದ್ದೇಶವನ್ನು ಇಟ್ಟುಕೊಂಡು  ಸಮುದಾಯದ ಜನರ ಪ್ರೋತ್ಸಾಹ ಮತ್ತು ಅಮ್ಮ ಭಗವತಿಯವರ ಆಶೀರ್ವಾದಿಂದ, ನಾವು ಜಾಗತಿಕ ಮಟ್ಟದ ನೂತನ ಸಂಘಟನೆ (ಟ್ರಸ್ಟ್ ) ಯನ್ನು ಸ್ಥಾಪಿಸಿದ್ದು , ಇವತ್ತು ಇದನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದು ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನ ಅಧ್ಯಕ್ಷರಾದ ರವಿ ಉಚ್ಚಿಲ್ ನುಡಿದರು. ಮೇ 1 ರಂದು,  ರಾಜೇ ಸಂಭಾಜಿ ಸಭಾಗ್ರಹ ಮುಲುಂಡ್ (ಪೂರ್ವ) ದಲ್ಲಿ ನಡೆದ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್

ಮಂಜೇಶ್ವರ: ಬೇಕರಿಗೆ ನುಗ್ಗಿ ನಗದನ್ನು ದೋಚಿದ ಕಳ್ಳರು

ಮಂಜೇಶ್ವರ: ತೂಮಿನಾಡು ಎಂ ಎಫ್ ಪ್ಲಾಜಾದಲ್ಲಿ ಕಾರ್ಯಾಚರಿಸುತ್ತಿರುವ ಹನಿ ಬೇಕರಿಗೆ ನುಗ್ಗಿದ ಕಳ್ಳರು ಡ್ರಾವರಿನೊಳಗೆ ಇಟ್ಟಿದ್ದ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಬೇಕರಿಯೊಳಗೆ ಕಳವು ಗೈಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಎರಡು ಬೈಕುಗಳಲ್ಲಾಗಿ ಆಗಮಿಸಿದ ಕಳ್ಳರ ಪೈಕಿ ಒಬ್ಬ ಬೇಕರಿಯ ಬಲ ಭಾಗದ ಗಾಜಿನ ಮೇಲ್ಬಾಗದಿಂದ ಹತ್ತಿ ಛಾವಣಿಯ ಮೂಲಕ ಇಳಿದು ನೇರವಾಗಿ ಡ್ರಾವರಿನ ಬಳಿ ಬಂದು ಡ್ರಾವರಿನೊಳಗೆ ಇಟ್ಟಿದ್ದ 1200 ರೂ. ವನ್ನು

ಗಡಿಭಾಗದಲ್ಲಿ ಗಮನ ಸೆಳೆಯುತ್ತಿರುವ ಕ್ಷೇತ್ರ ದೈವ ಪಾತ್ರಿಗಳ ಜಮಾಹತ್ ಭೇಟಿ

ಮಂಜೇಶ್ವರ: ನೆರೆ ರಾಜ್ಯವಾದ ಕರ್ನಾಟಕ ಸೇರಿದಂತೆ ಉತ್ತರ ಭಾರತದ ಹಲವೆಡೆ ಮಸೀದಿ ಮಂದಿರಗಳ ಹೆಸರಲ್ಲಿ ಜಾತಿ ಜಾತಿಗಳ ಮಧ್ಯೆ ಕೋಮು ವೈಷಮ್ಯ ಹೊಗೆಯಾಡುತ್ತಿರುವಾಗಲೂ ಗಡಿ ಪ್ರದೇಶವಾದ ಮಂಜೇಶ್ವರಕ್ಕೆ ಸಮೀಪದ ಉದ್ಯಾವರದಲ್ಲಿ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವ ಪಾತ್ರಿಗಳು, ಕ್ಷೇತ್ರ ಪದಾಧಿಕಾರಿಗಳು ಹಾಗೂ ಗುರಿಕ್ಕಾರರು ಉದ್ಯಾವರ ಸಾವಿರ ಜಮಾಹತಿಗೆ ಭೇಟಿ ನೀಡಿ ಉತ್ಸವಕ್ಕೆ ಆಹ್ವಾನವನ್ನು ನೀಡಲಾಯಿತು. ಕಳೆದ ಕೆಲ ದಿನಗಳ ಹಿಂದೆ ಮೊದಲು ಇದೇ ಕ್ಷೇತ್ರದಲ್ಲಿ ಅರಸು

ಆದಿ ಸ್ಥಾನದ ಕೊರಗಜ್ಜ” ವೀಡಿಯೋ ಹಾಡು ಬಿಡುಗಡೆ : ವಸಂತ ಬಾರಡ್ಕ ಅವರು ಹಾಡಿರುವ ಹಾಡು

ಕಾಸರಗೋಡು: ಗಡಿನಾಡ ಕೋಗಿಲೆ ವಸಂತ ಬಾರಡ್ಕ ಅವರು ಹಾಡಿರುವ “ಆದಿ ಸ್ಥಾನದ ಕೊರಗಜ್ಜ” ವೀಡಿಯೋ ಹಾಡಿನ ಬಿಡುಗಡೆ ಕಾಸರಗೋಡು ಬೇಳ ಕುದ್ರೆಪ್ಪಾಡಿ ಪೆರಡಾನಮೂಲೆ ಶ್ರೀ ಚೌಕಾರು ಮಂತ್ರವಾದಿ ಗುಳಿಗ, ಶ್ರೀ ಆದಿ ಕೊರಗು ತನಿಯ, ಕಲ್ಲುರ್ಟಿ ದೈವಸ್ಥಾನದಲ್ಲಿ ಜರುಗಿತು. ವಸಂತ ಬಾರಡ್ಕ ಅವರು ರಚಿಸಿ, ಸಂಗೀತ ನಿರ್ದೇಶಿಸಿ, ಹಾಡಿರುವ ಈ ಗಾನ ಗಾನತರಂಗ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ. ದೈವಸ್ಥನದ ವಾರ್ಷಿಕೋತ್ಸವ ಮತ್ತು ದೈವಕೋಲ ಅಂಗವಾಗಿ ನಡೆದ

 ಬಂಟರ ಸಮಾಜದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಬೇಕು ಮೀಂಜ ಬಂಟರ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ದಲ್ಲಿ ಐಕಳ ಹರೀಶ್ ಶೆಟ್ಟಿ

   ಕಾಸರಗೋಡು : ಕಾಸರಗೋಡು ಜಿಲ್ಲೆಯ ಮಿಂಜ ಬಂಟರ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮಾತನಾಡುತ್ತಾ ಬಂಟ ಸಮುದಾಯಕ್ಕೆ ಕಲಶಪ್ರಾಯವಾಗಿ ದೇವರ ರೂಪದಲ್ಲಿ ಊರಿನ ಮಣ್ಣಿನ ಮಗನಾಗಿ ಕೊಡುಗೈ ದಾನಿಗಳು ಆದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಇವರಂಥ ವ್ಯಕ್ತಿಗಳು ಸಮಾಜದಲ್ಲಿ ಹುಟ್ಟಿ ಬಂದಾಗ ನಮ್ಮ ಊರು ಸಮೃದ್ಧಿಯ ನಾಡು ಆಗುವುದು  ಬಂಟ ಸಮುದಾಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ

ತಂದೆಯನ್ನು ಕೊಲೆ ಮಾಡಿದ ಮಗ

ಮಂಜೇಶ್ವರ: ಕಾಸರಗೋಡಿಗೆ ಸಮೀಪದ ಅಡೂರು ಪಾಂಡಿಯಲ್ಲಿ ತಂದೆಯನ್ನು ಮಗ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ.ಮೃತರನ್ನು ಪಾಂಡಿ ವೆಳ್ಳರಿಕಾಯಂ ಕಾಲೋನಿಯ ಬಾಲಕೃಷ್ಣ ನಾಯ್ಕ್ (56) ಎಂದು ಗುರುತಿಸಲಾಗಿದೆ. ಪುತ್ರ ನರೇಂದ್ರ ಪ್ರಸಾದ್ ಕೊಲೆಗೈದಿದ್ದಾನೆ. ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು ಬಳಿಕ ಅದು ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ಆರೋಪಿ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕೃಷ್ಣ ನಾಯ್ಕ್ ನ

ಕೇರಳದ ಯುವಕನ ಕೈ-ದಾನದಿಂದಾಗಿ ಹೊಸ ಜೀವನ ಪಡೆದ ಕರ್ನಾಟಕದ ವ್ಯಕ್ತಿ

ಹತ್ತು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಪಘಾತದಲ್ಲಿ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡಿದ್ದ ಕರ್ನಾಟಕದ ನಿವಾಸಿ 34 ವರ್ಷದ ಬಸವಣ್ಣ ಗೌಡರು ವರ್ಷಗಳ ಹತಾಶೆಯ ನಂತರ, ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಹೊಸ ಜೀವನೋತ್ಸಾಹ ಸಿಕ್ಕಿದೆ. 25 ವರ್ಷದ ಕೊಟ್ಟಾಯಂ ನಿವಾಸಿ ನೆವಿಸ್ ಸಜನ್ ಮ್ಯಾಥ್ಯೂ ಅವರ ಕೈಗಳನ್ನು ಬಸವಣ್ಣ ಗೌಡರಿಗೆ ಕಸಿ ಮಾಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 25 ರಂದು ಮಿದಳು ನಿಷ್ಕ್ರಿಯಗೊಂಡು
How Can We Help You?