Home ಕರಾವಳಿ Archive by category ಬಂಟ್ವಾಳ (Page 14)

ಆರ್ ಎಸ್ ಎಸ್ ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಇನ್ನಿಲ್ಲ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ, ಸಾಮಾಜಿಕ, ಧಾರ್ಮಿಕ,ಸಹಕಾರಿ ನೇತಾರ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ( 61)ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು. ಸದಾ ನಗುಮುಖ, ಗಂಭೀರ ವ್ಯಕ್ತಿತ್ವ,ನೇರ ನಡೆ ನುಡಿಯವರಾಗಿದ್ದ ಕೆಲ ಸಮಯಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು,ಆಸ್ಪತ್ರೆಗೆ

ಬಿ.ಸಿ.ರೋಡ್ : ನನ್ನ ಜೀವನ ನನ್ನ ಸ್ವಚ್ಛನಗರ ಯೋಜನೆಗೆ ಚಾಲನೆ

ಬಂಟ್ವಾಳ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ಸ್ಥಳೀಯ ಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು ಆರಂಭಿಸಿದ್ದು, ನನ್ನ ಜೀವನ ನನ್ನ ಸ್ವಚ್ಛನಗರ ಯೋಜನೆ ಕಾರ್ಯಕ್ರಮಕ್ಕೆ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಶನಿವಾರ ಚಾಲನೆ ನೀಡಲಾಯಿತು. ಮಂಗಳೂರು ನಗರ ಕೋಶದ ಯೋಜನಾ ನಿರ್ದೇಶಕ ಅಬಿದ್ ಗದ್ಯಾಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನವೀಕರಿಸಿ ಮರುಬಳಸಬಹುದಾದ ವಸ್ತುಗಳ

ಬಿ. ಜನಾರ್ದನ ಪೂಜಾರಿಯನ್ನು ಭೇಟಿಯಾದ ಯು.ಟಿ. ಖಾದರ್

ಬಂಟ್ವಾಳ: ಮಂಗಳೂರು ಶಾಸಕ ಯು.ಟಿ. ಖಾದರ್ ಅವರು ಬುಧವಾರ ಸಂಜೆ ಬಂಟ್ವಾಳದಲ್ಲಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಜನಾರ್ದನ ಪೂಜಾರಿಯವರು ನಮ್ಮ ಪಕ್ಷದ ಹಿರಿಯ ನಾಯಕರು. ತನ್ನ ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಿ. ಜನಾರ್ದನ ಪೂಜಾರಿಯವರು ಮಾರ್ಗದರ್ಶನ ಮಾಡಿದ್ದರು. ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸಾಮಾಜಿಕ

ಬಂಟ್ವಾಳ : ಅಕ್ರಮವಾಗಿರಿಸಿದ್ದ ಸಿಮೆಂಟ್ ಬಳಸಿ ಎರಡು ಮನೆಗಳ ನಿರ್ಮಾಣ

ಬಂಟ್ವಾಳ: ಮಾರಾಟಕ್ಕಲದ ಸಿಮೆಂಟ್‍ಗಳನ್ನು ಬಿಜೆಪಿ ಮುಖಂಡನ ಮನೆಯಲ್ಲಿ ಅಕ್ರಮವಾಗಿ ದಾಸ್ತನಿರಿಸಿದ್ದಲ್ಲದೆ ಇದೇ ಸಿಮೆಂಟ್ ಬಳಸಿ ಎರಡು ಮನೆಗಳನ್ನು ನಿರ್ಮಿಸಿರುವ ಬಗ್ಗೆ ಸೂಕ್ತ ಕಾನೂನು ತನಿಖೆ ಆಗಬೇಕೆಂದು ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೊಯಿಲ ಆಗ್ರಹಿಸಿದ್ದಾರೆ. ಬಿ.ಸಿ. ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಅವರು ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಇತ್ತೀಚೆಗೆ ಬಿ. ಮೂಡ ಗ್ರಾಮದ

ಬಜರಂಗದಳ ಕಾರ್ಯಕರ್ತ ರೂಪೇಶ್ ಪೂಜಾರಿ ಸಾವು

ರೂಪೇಶ್ ಪೂಜಾರಿ 3 ದಿನಗಳ ಹಿಂದೆ ಹೊಟ್ಟೆನೋವಿನಿಂದ ಮಂಗಳೂರಿನ ವೆನ್ಲೋಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದಿತ್ಯವಾರ ಅವರು ತೀರಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ಆಸ್ಪತ್ರೆಯ ವೈದರು ಚಿಕಿಸ್ತೆ ನೀಡಿಲ್ಲ ನಿರ್ಲಕ್ಷ್ಯ ತೋರಿದರು ಎಂದು ಭಜರಂಗದಳದ ಕಾರ್ಯಕರ್ತರು ಆರೋಪಮಾಡಿದರು. ಅಲ್ಲದೆ ಬಜರಂಗದಳ ಮತ್ತು ವೆನ್ಲೋಕ್ ವೈದರ ನಡುವೆ ಮಾತಿನಚಕಮಕಿ ನಡೆಯಿತ್ತು. ವೈದ ಒರುವರು ಉಡಾಫೆಯ ಮಾತುಗಳನ್ನು ಆಡಿದಾಗ ಕಾರ್ಯಕರ್ತರು ವೈದನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಅಭಿವೃದ್ಧಿ ಕಾರ್ಯಕ್ಕೆ ಜನರು ಒಲವು ತೋರಿ ಗೆಲುವು ತಂದುಕೊಟ್ಟಿದ್ದಾರೆ : ರಾಜೇಶ್ ನಾಯ್ಕ್

ಬಂಟ್ವಾಳ: ನನ್ನ ಪಕ್ಷದ ಕಾರ್ಯಕರ್ತರು ಅತ್ಯಂತ ಶ್ರದ್ಧೆ ಹಾಗೂ ನಿಷ್ಠೆಯಿಂದ ದುಡಿದಿರುವುದೇ ನನ್ನ ಗೆಲುವಿಗೆ ಪೂರಕವಾದ ಅಂಶವಾಗಿದೆ. ಕಳೆದ ಐದು ವರ್ಷದ ಅಧಕಾರವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯ ಹಾಗೂ ಈ ಭಾಗದಲ್ಲಿ ಶಾಂತಿ ಸೌಹಾರ್ದತೆ ನೆಲೆ ನಿಂತಿರುವುದರಿಂದ ಜನರು ಒಲವು ತೋರಿಸಿ ಗೆಲುವು ತಂದು ಕೊಟ್ಟಿದ್ದಾರೆ ಎಂದು ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಹೇಳಿದರು. ಅವರು ಬಿ.ಸಿ.ರೋಡಿನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ

ಬಂಟ್ವಾಳ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ : 100% ಫಲಿತಾಂಶ

ಬಂಟ್ವಾಳದ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದೆ.ಪರೀಕ್ಷೆ ಬರೆದ 96 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಯು 100% ಫಲಿತಾಂಶ ಪಡೆದುಕೊಂಡಿದೆಶಾಲಾ ವಿದ್ಯಾರ್ಥಿನಿ ಕೆ.ಶೃತಿ 625 ರಲ್ಲಿ 610 ಅಂಕ ಗಳಿಸಿ ಶಾಲೆಗೆ ಮೊದಲಿಗಳಾಗಿದ್ದಾಳೆ. 24 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ

ಬಂಟ್ವಾಳ : ರಮಾನಾಥ ರೈ ಅವರ ಶ್ರಮ ವ್ಯರ್ಥವಾಗಬಾರದೆಂದಿದ್ದರೆ ಮತನೀಡಿ ಗೆಲ್ಲಿಸಿ: ಬಿ. ಜನಾರ್ದನ ಪೂಜಾರಿ

ಬಂಟ್ವಾಳ: ರಮಾನಾಥ ರೈ ಒಳ್ಳೆಯ ಮನುಷ್ಯ.. ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.. ಅವರು ಚುನಾವಣೆಯಲ್ಲಿ ಸೋತರೆ ನಾನು ಸತ್ತಂತೆ.. ನಾನು ಸಾಯಬಾರದೆಂದಿದ್ದರೆ ಅವರನ್ನು ಗೆಲ್ಲಿಸಿ..ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರ ಪರವಾಗಿ, ಭಾವನಾತ್ಮಕವಾಗಿ ಮೆಚ್ಚುಗೆಯ ಮಾತಗಳನ್ನಾಡಿದ್ದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ. ಭಾನುವಾರ ಬಿ.ಸಿ.ರೋಡಿನ ಬಸ್ತಿಪಡ್ಪುವಿನಲ್ಲಿರುವ ತನ್ನ ನಿವಾಸ ಚೆನ್ನಮ್ಮ

ಮೇ 7ರಂದು ಬಿ.ಸಿ ರೋಡ್‍ನ ಸೋನಾ ಟಿವಿಎಸ್‍ನಲ್ಲಿ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಬಿಡುಗಡೆ

ಬಿ.ಸಿ. ರೋಡ್‍ನಲ್ಲಿ ಕಾರ್ಯಾಚರಿಸುತ್ತಿರುವ ಸೋನಾ ಟಿವಿಎಸ್ ಶೋರೂಂನಲ್ಲಿ ಅತ್ಯಾಧುನಿಕ ಶೈಲಿಯ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮೇ 7ರಂದು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ. ಪ್ರತಿಷ್ಠಿತ ಟಿವಿಎಸ್ ಕಂಪೆನಿಯ ದ್ವಿಚಕ್ರ ವಾಹನಗಳು ವಿವಿಧ ವಿನ್ಯಾಸ ಮತ್ತು ಆತ್ಯಾಕರ್ಷಕ ಶೈಲಿ ಹಾಗೂ ದ್ವಿಚಕ್ರ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಬಿ.ಸಿ ರೋಡ್‍ನಲ್ಲಿರುವ ಸೋನಾ ಟಿವಿಎಸ್ ಶೋರೂಂನಲ್ಲಿ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮೇ 7ರಂದು

ಕಣ್ಣಿಗೆ ಕಾಣುವ ದೇವತಾ ಮನುಷ್ಯ ಬಿ.ರಮಾನಾಥ ರೈಯವರನ್ನು ಬೆಂಬಲಿಸಬೇಕು : ನ್ಯಾಯವಾದಿ ಚಂದ್ರಶೇಖರ ಪೂಜಾರಿ

ಬಂಟ್ವಾಳ: ಜಾತ್ಯಾತೀತ ಶಕ್ತಿಗಳು ಒಂದಾಗಿ ಕೋಮುವಾದಿ ಪಕ್ಷಗಳನ್ನು ಸೋಲಿಸಿಬೇಕು, ಕಣ್ಣಿಗೆ ಕಾಣುವ ದೇವತಾ ಮನುಷ್ಯ-ಅಭಿವೃದ್ಧಿಯ ಹರಿಕಾರ ಬಿ.ರಮಾನಾಥ ರೈಯವರನ್ನು ಬೆಂಬಲಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಚಂದ್ರಶೇಖರ್ ಪೂಜಾರಿ ಕರೆ ನೀಡಿದ್ದಾರೆ. ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಮುವಾದಿ ಪಕ್ಷಗಳಾದ ಬಿಜೆಪಿ ಮತ್ತು ಎಸ್.ಡಿ.ಪಿ.ಗೆ ಮತ ಹಾಕಿದರೆ