ಬಂಟ್ವಾಳ:ಇರಾ ಕುರಿಯಾಡಿ ತೋಟ ಸದಾಶಿವ ಶೆಟ್ಟಿ ನಿಧನ

ಬಂಟ್ವಾಳ: ಇರಾ ಗ್ರಾಮದ ಕುರಿಯಾಡಿ ತೋಟ ನಿವಾಸಿ ಸದಾಶಿವ ಶೆಟ್ಟಿ (80) ಗುರುವಾರ ಸಂಜೆ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಕೆಲದಿನಗಳ ಹಿಂದೆ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದವರು ಸಂಜೆ 6ರ ಹೊತ್ತಿಗೆ ಹ್ರದಯಘಾತದಿಂದ ಕೊನೆಯುಸಿರೆಳೆದರು.
ಊರಿನಲ್ಲಿ ಕೃಷಿ ಕುಟುಂಬದ ಹಿನ್ನೆಲೆ ಹೊಂದಿದ್ದು ಬಳಿಕ ಸ್ವಂತ ಉದ್ಯಮವನ್ನು ಅರಸಿ ಮುಂಬೈಗೆ ತೆರಳಿ ಸುದೀರ್ಘವಾಗಿ ಅಲ್ಲೇ ಕುಟುಂಬದೊಂದಿಗೆ ನೆಲೆಸಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವದೊಂದಿಗೆ ಸಾಮಾಜಿಕವಾಗಿಯೂ ಊರಿನಲ್ಲಿ ಸಹಕಾರ ಮನೋಭಾವ ಹೊಂದಿದ್ದ ಇವರು ಪತ್ನಿ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನ ಅಗಲಿದ್ದಾರೆ.
