ಬಂಟ್ವಾಳ: ರೈಲ್ವೆ ಹಳಿ ಮೇಲೆ ಉರುಳಿಬಿದ್ದ ಸಿಮೆಂಟ್ ಮಿಕ್ಸರ್ ಯಂತ್ರವಿದ್ದ ವಾಹನ, ಚಾಲಕನಿಗೆ ಗಾಯ
ಬಂಟ್ವಾಳ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಚಲಿಸುವ ಸಿಮೆಂಟ್ ಮಿಕ್ಸರ್ ಯಂತ್ರ ಒಳಗೊಂಡ ವಾಹನವೊಂದು ರೈಲ್ವೆ ಹಳಿ ಮೇಲೆ ಉರುಳಿಬಿದ್ದಿದೆ.
ಘಟನೆಯಲ್ಲಿ ಅದನ್ನು ಚಲಾಯಿಸುತ್ತಿದ್ದ ಚಾಲಕ ಗಾಯಗೊಂಡಿದ್ದಾರೆ. ಎರಡನೇ ಪ್ಲಾಟ್ ಫಾರ್ಮ್ ನಲ್ಲೂ ರೈಲ್ವೆ ಸಂಚಾರವಿದ್ದು, ಘಟನೆ ಸಂಭವಿಸುವ ಹೊತ್ತಿನಲ್ಲಿ ರೈಲು ಇರದಿದ್ದ ಕಾರಣ ದೊಡ್ಡ ಅನಾಹುತ ತಪ್ಪಿಹೋಗಿದೆ. ಬಳಿಕ ಅದರ ತೆರವು ಕಾರ್ಯಾಚರಣೆಗೆ ಪ್ರಯಾಸಪಡಬೇಕಾಯಿತು. ರಾತ್ರಿವರೆಗೂ ಕಾರ್ಯಾಚರಣೆ ನಡೆದಿದ್ದು, ಬಿ.ಸಿ.ರೋಡಿನ ಗಜಲಕ್ಷ್ಮೀ ಕ್ರೇನ್ ನ ಮಾಲೀಕ ರಾಘವೇಂದ್ರ ಪ್ರಭು ಮತ್ತು ಸಿಬ್ಬಂದಿ ಸಹಕರಿಸಿದರು.