Home Archive by category ರಾಜ್ಯ

🛑ಉರುಳಿದ 80 ವರುಷಗಳ ಬಿಬಿಎಂಪಿ ಶಾಲೆ

ಬೆಂಗಳೂರು ಶಿವಾಜಿನಗರದ ಕುಕ್ಸ್ ರಸ್ತೆಯ ಬಿ ಅಡ್ಡ ರಸ್ತೆಯ ಬಿಬಿಎಂಪಿ ನರ್ಸರಿ ಶಾಲೆ ಮಧ್ಯ ರಾತ್ರಿ ಬಿದ್ದು ಹೋಗಿದೆ. ಮಕ್ಕಳಾಗಲಿ, ಜನರಿಗಾಗಲಿ ಅಪಾಯವಾಗಿಲ್ಲ ಎಂಬುದು ಸಮಾಧಾನಕರ. 80 ವರ್ಷಗಳಷ್ಟು ಹಳೆಯ ಈ ಶಾಲೆಯಲ್ಲಿ ವ 80ರಷ್ಟು ಮಕ್ಕಳು ಇದ್ದರು. ಶಾಲೆಯ ಎಲ್ಲ, ಪರಿಕರ, ಮಕ್ಕಳ ಆಟದ ಸಾಮಾನುಗಳು ಮಾತ್ರವಲ್ಲ ಅಕ್ಕಪಕ್ಕಗಳಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು

ಸಿಎಂ ಅಪರ ಮುಖ್ಯ ಕಾರ್ಯದರ್ಶಿಯಾಗಿ ಎಲ್.ಕೆ ಅತೀಖ್ ನೇಮಕ

ರಾಜ್ಯ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಎಲ್ ಕೆ ಅತೀಖ್ ಅವರನ್ನು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಯಾಗಿ ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಈವರೆಗೆ ಆ ಹುದ್ದೆಯಲ್ಲಿದ್ದ ಡಾ. ರಜನೀಶ್ ಗೋಯಲ್ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಎಲ್ ಕೆ ಅತೀಖ್ ಅವರು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿಯೂ ಮುಂದಿನ ಆದೇಶದವರೆಗೆ ಹೆಚ್ಚುವರಿ ಹೊಣೆ ನಿರ್ವಹಿಸಲಿದ್ದಾರೆ.

ಕಾಂತಾರ ಚಾಪ್ಟರ್-1 ಫಸ್ಟ್ ಲುಕ್, ಟೀಸರ್ ಬಿಡುಗಡೆ

ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್ ಕಾಂತಾರ ಚಾಪ್ಟರ್ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದೆ. ಯುಟ್ಯೂಬ್‍ನಲ್ಲಿ ಟೀಸರ್ ಬಿಡುಗಡೆಯಾಗಿದ್ದು ಕಾಂತಾರ ಪ್ರೀಕ್ವೆಲ್ ಕತೆ ಕದಂಬರ ಕಾಲಕ್ಕೆ ಕರೆದುಕೊಂಡು ಹೋಗಲಿದೆ ಎಂದು

ಬೆಂಗಳೂರು ಕಂಬಳದಲ್ಲಿ ಕಾಂತಾರ ಕೋಣಕ್ಕೆ ಚಿನ್ನದ ಪದಕ

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳು ಚಿನ್ನದ ಪದಕಕ್ಕೆ ಭಾಜನವಾಗಿದೆ. ಬೆಂಗಳೂರು ಕಂಬಳದಲ್ಲಿ ಬೈಂದೂರಿನ ಕೋಣ ಪ್ರಥಮ ಚಿನ್ನ ಗೆದ್ದ ಕೋಣ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದೆ. ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಈ ಕುರಿತು ಕೋಣಗಳ ಮಾಲೀಕರು

ಎಲ್ಲಿಯ ಗಾಜನೂರು, ಎಲ್ಲಿಯ ಪೇರೂರು ಸಂಬಂಧ

ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟೂರು ಗಾಜನೂರಿಗೂ, ಜಾರ್‌ಕುಮಾರ್ ಅವರ ಪೇರೂರು ಗ್ರಾಮಕ್ಕೂ ಏನು ಸಂಬಂಧ? ಈ ಪ್ರಶ್ನೆ ಹಲವರ ಹುಬ್ಬೇರಿಸಬಹುದು. ಪೇರೂರು ಪೆರಿಯ ಊರು. ಪೆರಿಯ ಪಿರಿಯ ಪ್ರಾಯದ ಹಳೆಯ ಊರು. ಹಾಗಾಗಿ ತೆಂಕಣ ಭಾರತದ ಇನ್ನೂರಕ್ಕೂ ಹೆಚ್ಚು ಪೇರೂರು (ಕನ್ನಾಡಿನ ಕೆಲವೆಡೆ ಹೇರೂರು ಆಗಿದೆ) ಗ್ರಾಮಗಳು ನದಿಯ ದಡಗಳಲ್ಲಿಯೇ ಇವೆ.ಗಾಜನೂರುಗಳು ಕೂಡ ಹಲವು ಇದ್ದು ಅವು ಕೂಡ ನದಿ ತೊರೆಯ ನೆರೆಯ ಊರುಗಳಾಗಿವೆ. ಗಾಜಿನ ಬಳೆ ತಯಾರಿಸುತ್ತಿದ್ದ ಊರುಗಳು

ಬೆಂಗಳೂರು ಕಂಬಳ ಆಯೋಜಕರಿಗೆ ಬಿಬಿಎಂಪಿ ದಂಡ

ಇದೇ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ತುಳುನಾಡಿನ ಕಂಬಳ ಆಯೋಜಿಸಿದ್ದ ಸಂಘಟಕರಿಗೆ ಬಿಬಿಎಂಪಿ- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ರೂ. 50,000 ದಂಡ ವಿಧಿಸಿದ್ದಾರೆ. ಅರಮನೆಯ ಕಾಂಪೌಂಡಿನ ಹೊರಗೆ ಹೇಗೆಂದರೆ ಹಾಗೆ ಬ್ಯಾನರ್ ಮತ್ತು ಫ್ಲೆಕ್ಸ್ ಹಾಕಲಾಗಿತ್ತು. ನಿಯಮ ಮೀರಿ ಇವೆಲ್ಲ ಇದ್ದುದರಿಂದ ಅವಕ್ಕೆ ಬಿಬಿಎಂಪಿ ದಂಡ ವಿಧಿಸಿದೆ. ಅಲ್ಲದೆ ಅವುಗಳನ್ನೆಲ್ಲ ತೆರವು ಮಾಡಿದೆ. ಉಳಿದಂತೆ 200 ಜೋಡಿಯಷ್ಟು ಕೋಣಗಳು ಭಾಗವಹಿಸಿದ ಬೆಂಗಳೂರು ಕಂಬಳ

ಬೆಂಗಳೂರು: ತುಳುವಿಗೆ ಹೆಚ್ಚುವರಿ ರಾಜ್ಯಭಾಷೆಯಾಗಿ ಮಾನ್ಯತೆ ನೀಡಲು ಪ್ರಯತ್ನ: ಸಿಎಂ ಸಿದ್ದರಾಮಯ್ಯ

ರಾಜ್ಯದ ಪ್ರಮುಖ ಭಾಷೆಯಾದ ತುಳುವಿಗೆ ಹೆಚ್ಚುವರಿ ರಾಜ್ಯಭಾಷೆಯಾಗಿ ಮಾನ್ಯತೆ ನೀಡಲು ಪ್ರಯತ್ನಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅರಮನೆ ಮೈದಾನದಲ್ಲಿ ಆರಂಭಗೊಂಡಿರುವ ‘ಬೆಂಗಳೂರು ಕಂಬಳನಮ್ಮ ಕಂಬಳ’ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪುರಾತನ ಕಾಲದಿಂದ ಬಂದಿರುವ ಕಂಬಳವು ಕರಾವಳಿಯ ಜಾನಪದ ಕಲೆ. ಅದು ಬೆಂಗಳೂರಿನಲ್ಲಿ ಯಾಕೆ ಎಂದು ಪ್ರಶ್ನಿಸಿದರು. ಕರಾವಳಿಯ ಲಕ್ಷಾಂತರ ಮಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಾಗಾಗಿ ಈ

ಕುಣಿಗಲ್: ಬೋರ್ ವೆಲ್ ಲಾರಿ-ಕಾರು ನಡುವೆ ಅಪಘಾತ: ದ.ಕ. ಜಿಲ್ಲೆಯ ಇಬ್ಬರು ಮೃತ್ಯು

ಬೋರ್ ವೆಲ್ ಲಾರಿ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜ್ಯ ಹೆದ್ದಾರಿ ೩೩ ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಚಿಗಣಿ ಪಾಳ್ಯ ಗ್ರಾಮದ ಇಂದು ಮುಂಜಾನೆ ಸಂಭವಿಸಿದೆ. ಮೃತರನ್ನು ಬಜ್ಪೆ ಮೂಲದ ಕಿಶೋರ್ ಶೆಟ್ಟಿ(35) ಮತ್ತು ಫಿಲೀಪ್ ಮೇರಿ ಲೋಬೋ (34) ಎಂದು ಗುರುತಿಸಲಾಗಿದೆ.ನಿತೀಶ್ ಭಡಾರಿ(35), ಪ್ರೀತಿ ಲೋಬೋ(29) ಮತ್ತು ಹರೀಶ್(62)

ಶಕ್ತಿ ಯೋಜನೆಯಡಿ 100 ಕೋಟಿ 47 ಲಕ್ಷ ಸ್ತ್ರೀ ದಾಟು

ಮಹಿಳೆಯರನ್ನು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಕೊಂಡೊಯ್ಯುವ ಶಕ್ತಿ ಯೋಜನೆಯು ಕರ್ನಾಟಕದಲ್ಲಿ ಜೂನ್ 11ರಂದು ಆರಂಭವಾಗಿದೆ. ಅಲ್ಲಿಂದ ನವೆಂಬರ್ 23ರವರೆಗೆ ಶಕ್ತಿ ಯೋಜನೆಯಡಿ 100 ಕೋಟಿ 47 ಲಕ್ಷ ಮಹಿಳೆಯರ ಓಡಾಟ ಆಗಿದೆ. ಈ ಸಂಬಂಧ ಬೆಂಗಳೂರು ವಿಧಾನ ಸೌಧದ ಬಾಂಕ್ವೆಟ್ ಹಾಲಿನಲ್ಲಿ ಶುಕ್ರವಾರ ಶತಕೋಟಿ ಸಂಭ್ರಮ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವು ಕರ್ನಾಟಕ ಸರಕಾರದ ಗ್ಯಾರಂಟಿಗಳಿಗೆ ಮತ್ತಷ್ಟು ಒತ್ತು ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ

ಡಿಕೆಶಿ ಮೇಲಿದ್ದ ಸಿಬಿಐ ತನಿಖೆ ಪ್ರಕರಣ ವಾಪಸ್: ನಳಿನ್ ಪ್ರತಿಕ್ರಿಯೆ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಾಮಾಣಿಕರು, ಪಾರದರ್ಶಕವಾಗಿ ಇದ್ದಿದ್ದೇ ಆದರೆ ಅವರ ವಿರುದ್ಧದ ಪ್ರಕರಣ ಹಿಂಪಡೆಯುವ ಅಗತ್ಯ ಇರಲಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ಅವರ ಮೇಲಿದ್ದ ಸಿಬಿಐ ತನಿಖೆ ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದರು. ‘ಅವರಿಗೆ ಭಯ ಯಾಕೆ? ಅವರ ಪ್ರಾಮಾಣಿಕತೆ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ. ಸಿಬಿಐ ತನಿಖೆಯ