ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣೆ

ವಿಶ್ವ ಗರ್ಭಕಂಠದ ಕ್ಯಾನ್ಸರ್ ಜಾಗೃತಿ ತಿಂಗಳ ಅಂಗವಾಗಿ ಕೆ.ಎಂ.ಸಿ. ಆಸ್ಪತ್ರೆಯು ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಕಾರ್ಯಕ್ರಮವನ್ನು ಜನವರಿ 27 ರಿಂದ 31ರವರೆಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದಲ್ಲಿ ಆಯೋಜಿಸಿದೆ.
ಈ ಶಿಬಿರವನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಆಂಕಾಲಜಿ ಕೇಂದ್ರವು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಬೆಂಗಳೂರು ಇವರ ಸಹಯೋಗದೊಂದಿಗೆ ಜಂಟಿಯಾಗಿ ಆಯೋಜಿಸಿದೆ. ಈ ಶಿಬಿರದ ಮೂಲಕ ಮಹಿಳೆಯರಿಗೆ ಗರ್ಭಕಂಠದಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಪ್ಯಾಪ್ ಸ್ಮೀಯರ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಿ ಆರಂಭಿಕ ಹಂತದಲ್ಲಿಗರ್ಭಕಂಠದ ಕ್ಯಾನ್ಸರನ್ನು ಪತ್ತೆಹಚ್ಚಲು ಮತ್ತುತಡೆಗಟ್ಟಲು ಈ ಕಾರ್ಯಕ್ರಮವು ಸಹಕಾರಿಯಾಗಲಿದೆ.ಪ್ಯಾಪ್ ಸ್ಮೀಯರ್ ಪರೀಕ್ಷೆಯುಗರ್ಭಕಂಠದಕ್ಯಾನ್ಸರ್‌ನಿಂದಜೀವ ಉಳಿಸುವ ಸ್ಕ್ರೀನಿಂಗ್‌ಸಾಧನವಾಗಿದ್ದು ಈ ಪರೀಕ್ಷೆಯುಗರ್ಭಕಂಠದಲ್ಲಿನಅಸಹಜ ಕೋಶಗಳನ್ನು ಕ್ಯಾನ್ಸರ್ ಆಗುವ ಮೊದಲು ಪತ್ತೆ ಮಾಡುತ್ತದೆ.
ಶಿಬಿರದಲ್ಲಿ ಉಚಿತ ನೋಂದಾವಣೆ, ಅನುಭವಿ ವೈದ್ಯರೊಂದಿಗೆಉಚಿತ ಸಮಾಲೋಚನೆ ಹಾಗೂ ಉಚಿತ ಪ್ಯಾಪ್ ಸ್ಮೀಯರ್ ಪರೀಕ್ಷೆಯನ್ನು ನಡೆಸಲಾಗುವುದು. ಶಿಬಿರವನ್ನು ಬೆಳಿಗ್ಗೆ 9.30 ರಿಂದ ಸಂಜೆ 4ರವರೆಗೆ ಹಮ್ಮಿಕೊಳ್ಳಲಾಗಿದ್ದು, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರವು 21ವರ್ಷಕ್ಕಿಂತ ಮೇಲ್ಪಟ್ಟಎಲ್ಲಾ ಮಹಿಳೆಯರು ಈ ಉಚಿತ ಶಿಬಿರದಲ್ಲಿ ಭಾಗವಹಿಸಿ ಆರಂಭಿಕ ಹಂತದಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ಕಂಡುಹಿಡಿಯಲು ಮತ್ತುತಡೆಗಟ್ಟಲುಕರೆ ನೀಡುತ್ತಿದೆ.
ನಿಮ್ಮಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ.ಹೆಚ್ಚಿನ ಮಾಹಿತಿಗಾಗಿ ಅಥವಾ ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸಲು, ದಯವಿಟ್ಟು ಸಂಪರ್ಕಿಸಿ: 7022078002
