ನಶಿಸಿ ಹೋಗುತ್ತಿರುವ ಕಂಗೀಲು ಧಾರ್ಮಿಕ ಆಚರಣೆ ಹೆಜಮಾಡಿಯಲ್ಲಿ ಇಂದಿಗೂ ಜೀವಂತ

ತೆರೆಮರೆಯ ಕಡೆ ವಾಲುತ್ತಿರುವ ಧಾರ್ಮಿಕ ಆಚರಣೆಯಲ್ಲಿ ಕಂಗೀಲು ಕೂಡಾ ಒಂದು..ಬಹುತೇಕ ಕಡೆ ಇಲ್ಲವಾಗಿರುವ ಕಂಗೀಲು ಹೆಜಮಾಡಿಯಲ್ಲಿ ಇಂದೂ ಜೀವಂತ ಎಂಬುದು ಸಂತೋಷ.. ಹೆಜಮಾಡಿ ಶ್ರೀ ಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಮೂಲಕ ಹತ್ತು ಸಮಸ್ತರನ್ನು ಸೇರಿಸಿ ವರ್ಷಂಪ್ರತಿಯಂತೆ ಹೆಜಮಾಡಿ ಆಲಡೆ ಜಾತ್ರೆಯ ಮರುದಿನ ಮಾಯಿ ಹುಣ್ಣುಮೆ ದಿನದಂದ್ದು, ಶ್ರೀದೈವಸ್ಥಾನಕ್ಕೆ ಸಂಬಂಧಿಸಿದ ಮಂದಿ ಸೇರಿ ಹಿರಿಯರು ನಡೆದು ಕೊಂಡು ಬಂದ ಧಾರ್ಮಿಕ ವಿಧಿವಿಧಾನಗಳಂತೆ ಹತ್ತು ಸಮಸ್ತರನ್ನು ಸೇರಿಸಿ ಈ ಹಿಂದೆ ಮೂರು ದಿನಗಳ ನಡೆಸಿಕೊಂಡು ಬಂದಿದ್ದರೆ, ಕಾಲಕ್ಕೆ ಅನುಗುಣವಾಗಿ ಇದೀಗ ಒಂದು ದಿನಗಳಲ್ಲಿ ಈ ಕಂಗೀಲು ಸೇವೆಯನ್ನು ನಡೆಸುವ ಮೂಲಕ ಊರಿಗೆ ಬರುವ ಮಾರಕ ರೋಗಗಳನ್ನು ದೂರ ಅಟ್ಟುವ ನಂಬಿಕೆ ನಮ್ಮದೆನ್ನುತ್ತಾರೆ ದೈವಸ್ಥಾನದ ಪ್ರಮುಖರೋರ್ವರು.