ದಕ್ಷಿಣಕನ್ನಡ ಹಾಲು ಒಕ್ಕೂಟ : ಉತ್ತಮ ಗುಣಮಟ್ಟದ ಹಾಲಿಗೆ ವಿಶೇಷ ಪ್ರೋತ್ಸಾಹಧನ

ಮಂಗಳೂರು: ದಕ್ಷಿಣಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ, ವಿಶೇಷ ಪ್ರೋತ್ಸಾಹಧನ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಸ್ಪಷ್ಟೀಕರಣ ನೀಡಿದ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ಪಿ. ಸುಚರಿತ ಶೆಟ್ಟಿ ಅವರು, ಅಕ್ಟೋಬರ್ 11,2022ರಿಂದ ಅನ್ವಯವಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಉತ್ತಮ ಗುಣಮಟ್ಟದ ಹಾಲಿಗೆ ವಿಶೇಷ ಪ್ರೋತ್ಸಾಹಧನ ರೂ.2.05 ಪೈಸೆ ನೀಡಲಾಗುವುದು.

ಇದರಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‍ಗುಣಮಟ್ಟದ ಹಾಲಿಗೆ ಹಾಲಿ ನೀಡುತ್ತಿರುವ 29/- ರೂಪಾಯಿಗಳಿಗೆ 2 ರೂಪಾಯಿ 05 ಪೈಸೆ ವಿಶೇಷ ಪ್ರೊತ್ಸಾಹಧನ ಸೇರಿ ಒಟ್ಟು ಕನಿಷ್ಟ ದರ ಪ್ರತಿ ಲೀಟರ್ ಗೆ ರೂ.31.05 ಲಭ್ಯವಾಗುವುದು. ಈ ಪ್ರೋತ್ಸಾಹಧನವು ಮುಂದಿನ ಆದೇಶದವರೆಗೆ ಜಾರಿಯಲ್ಲಿರುವುದಾಗಿ ಒಕ್ಕೂಟದ ಅಧ್ಯಕ್ಷರಾದ ಕೆ.ಪಿ ಸುಚರಿತ ಶೆಟ್ಟಿಯವರು ಹಾಗೂ ವ್ಯವಸ್ಥಾಪಕ ನಿರ್ದೇಶಕರವರು ಸ್ಪಷ್ಟೀಕರಣ ನೀಡಿದ್ದಾರೆ

Related Posts

Leave a Reply

Your email address will not be published.