ಮುಲ್ಕಿ ನಗರದ ಸಮೀಪ ರಾಷ್ಟ್ರೀಯ ಹೆದ್ದಾರಿ ಬಳಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾದಾನಿಗಳಾದ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಇದರ ಪ್ರಥಮ ಹಂತದ ಕಾಮಗಾರಿಯ ಆರಂಭ

ಮುಲ್ಕಿ ಅ7.ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಮಹತ್ವಾಕಾಂಕ್ಷೆಯ ಯೋಜನೆಯ ಅಂಗವಾಗಿ ಮೂಲ್ಕಿಯ ನಗರಕ್ಕೆ ಸಮೀಪವಾಗಿ ರಾಷ್ಟ್ರೀಯ ಹೆದ್ದಾರಿ ಸಮೀಪ 65 ಸೆಂಟ್ಸ್ ನಿವೇಶನದಲ್ಲಿ ಅತ್ಯಾಧುನಿಕ ಸುಂದರವಾದ ವಿವಿಧ ಸ್ವರೂಪಗಳ ಭವನಗಳ ನಿರ್ಮಾಣದ ಅಂಗವಾಗಿ ಇಂದು ಮುಲ್ಕಿ ದುರ್ಗಾಪರಮೇಶ್ವರಿ ದೇವಳದ ಅರ್ಚಕರಾದ ಗೋಪಾಲಕೃಷ್ಣ ಉಪಾಧ್ಯಾಯ ಇವರ ಮೂಲಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ನಡೆಸಿ ನಿತಿನ್ ಎಂಟರ್ಪ್ರೈಸಸ್ ಕಾವೂರು ಇದರ ಮಾಲಕರಾದ ನಿತಿನ್ ಶೆಟ್ಟಿಯವರಿಗೆ ಪ್ರಥಮ ಹಂತದ ಕಾಮಗಾರಿಯನ್ನು ವಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರು ಮಾತನಾಡುತ್ತಾ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಕಳೆದ ನಾಲ್ಕು ವರ್ಷಗಳಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಸಾಮಾಜಿಕವಾಗಿ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ರೂಪಿಸಿಕೊಂಡು ಬರುತ್ತಿದೆ ಆದರೆ ಒಕ್ಕೂಟಕ್ಕೆ ಸರಿಯಾದ ಕಛೇರಿ ಮತ್ತು ಆದಾಯದ ಮೂಲಗಳು ಇಲ್ಲದೆ ಸ್ವಲ್ಪ ಕಷ್ಟದಲ್ಲಿರುವ ಸಮಯದಲ್ಲಿ ಒಕ್ಕೂಟದ ಮಹಾದಾನಿಗಳಾದ ಶ್ರೀ ಕೂಳೂರು ಕನ್ಯಾನ ಸದಾಶಿವ ಶೆಟ್ಟಿಯವರಲ್ಲಿ ಮನವಿಯನ್ನು ಮಾಡಿಕೊಂಡಾಗ ಅವರು ದಾನ ರೂಪದಲ್ಲಿ ಈ ಜಮೀನನ್ನು ಒಕ್ಕೂಟಕ್ಕೆ ಖರೀದಿ ಮಾಡಲು ತುಂಬು ಹೃದಯದಿಂದ ಸಹಕಾರವನ್ನು ನೀಡಿ ಅದೇ ರೀತಿ ಮುಂದೆ ನಡೆಯಲಿರುವ ಎಲ್ಲಾ ರೀತಿಯ ಕಾಮಗಾರಿಗಳಿಗೆ ತನ್ನ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ನಮಗೆಲ್ಲ ಆನೆ ಬಲಬಂದಂತೆ ಆಗಿರುತ್ತದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಒಕ್ಕೂಟದ ಈ ಸಂಕೀರ್ಣಕ್ಕೆ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣವೆಂದು ನಾಮಕರಣ ಮಾಡುವುದಾಗಿ ಘೋಷಿಸಲಾಯಿತು.

ಹಾಗೆಯೇ ಈಗಿನ ಅಂದಾಜು ಪ್ರಕಾರ ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಪ್ರಕಾರಗಳನ್ನು ವಿವಿಧ ದಾನಿಗಳ ನೆರವಿನಿಂದ ರಚಿಸುವರೆ ನಾವುಗಳು ಪೂರ್ಣ ಶ್ರದ್ಧೆಯಿಂದ ಕೆಲಸ ಮಾಡಲು ಭದ್ದರಿದ್ದೇವೆ ಎಂದು ನುಡಿದರು.ನಮ್ಮ ಜೊತೆಗೆ ಮುಂಬೈ ಮತ್ತು ಹೊರ ರಾಷ್ಟ್ರಗಳಲ್ಲಿ ಹಾಗೂ ಊರಿನಲ್ಲಿ ನಮ್ಮ ಹಿತೈಷಿಗಳು ಹಾಗೂ ಹೃದಯವಂತ ದಾನಿಗಳು ಇರುವುದರಿಂದ ಈ ಕೆಲಸವನ್ನು ನಾವು ಅತ್ಯಂತ ಶೀಘ್ರವಾಗಿ ಮುಗಿಸುವಲ್ಲಿ ಪ್ರಯತ್ನಿಸುತ್ತೇವೆ ಎಲ್ಲಾ ದಾನಿಗಳ ಸಹಕಾರವು ನಮಗೆ ಸಿಗುತ್ತದೆ ಎಂಬ ನಂಬಿಕೆಯೊಂದಿಗೆ ಒಕ್ಕೂಟಕ್ಕೆ ಆದಾಯದ ಜೊತೆ ಮುಂದಿನ ದಿನಗಳಲ್ಲಿ ಉತ್ತಮವಾದ ಸಮಾಜ ಕಲ್ಯಾಣ ಕಾರ್ಯಕ್ರಮಕ್ಕೆ ಹೆಜ್ಜೆ ಇಡಲು ಸಾಧ್ಯವಾಗುತ್ತದೆ ಎನ್ನುವ ಆಚಲ ವಿಶ್ವಾಸದೊಂದಿಗೆ ನಾವೆಲ್ಲ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ಹೇಳಲು ಸಂತೋಷವಾಗುತ್ತದೆ ಎಂದರು. ಒಕ್ಕೂಟಕ್ಕೆ ದಾನಿಗಳೆ ದೇವರು ನಮ್ಮ ದಾನಿಗಳು ಇಲ್ಲದೆ ಯಾವುದೇ ಕೆಲಸ ನಡೆಯಲು ಸಾದ್ಯ ಇಲ್ಲ, ಎಲ್ಲವೂ ದಾನಿ ದೇವರು ಆಶೀರ್ವಾದ ನೀಡಿದರೆ ಮಾತ್ರ ಒಕ್ಕೂಟದ ಚಕ್ರ ತಿರುಗುತ್ತದೆ, ಆದರಿಂದ ನಮಗೆ ವಿಶ್ವಾಸ ಇದೆ ಖಂಡಿತವಾಗಿಯೂ ಒಳ್ಳೆ ಕೆಲಸಕ್ಕೆ ಎಲ್ಲರ ಸಹಕಾರ ಇದೆ ಎಂಬ ಅಚಲ ನಂಬಿಕೆ ನಮ್ಮದು ಇಲ್ಲಿ ಯಾರೊಬ್ಬರೂ ತಮ್ಮ ಸ್ವಂತಕ್ಕಾಗಿ ಅಪೇಕ್ಷೆ ಪಟ್ಟಿಲ್ಲ ಎಲ್ಲರೂ ಸಮಾನ ಮನಸ್ಕ ಸಮಾಜ ಸೇವಕರು, ಕಷ್ಟದ ಜನರಿಗಾಗಿ ಮಾಡುವ ಕೆಲಸಕ್ಕೆ ಎಲ್ಲರ ಪ್ರೋತ್ಸಾಹ ಇದೆಯೆಂದು ತಿಳಿದಿದ್ದೇನೆ,ನಿವೇಶನದಲ್ಲಿ ವಿವಿಧ ರೀತಿಯ ಸಭಾಭವನ ಕಚೇರಿ,ಬೋರ್ಡ್ ಕೊಠಡಿ, ಗೆಸ್ಟ್ ಹೌಸ್ ಗಳು ಇನ್ನು ಹಲವಾರು ರೀತಿಯ ಅನುಕೂಲಕರ ಕಟ್ಟಡಗಳು ರಚನೆಯಾಗುವ ಸಂದರ್ಭದಲ್ಲಿ ವಿವಿಧ ಪ್ರಕಾರಗಳಿಗೆ ವಿವಿಧ ದಾನಿಗಳ ನೆರವನ್ನು ಪಡೆದು ಕಾಮಗಾರಿಗಳನ್ನು ನಡೆಸಲಿದ್ದೇವೆ ಎಂಬ ಮಾಹಿತಿಯನ್ನು ನೀಡಿದರು.
ಇಂದು 07.10.2022ರಂದು ಬೆಳಿಗ್ಗೆ 9.30ಕ್ಕೆ ಮುಲ್ಕಿಯ ಹೆದ್ದಾರಿ ಬಳಿ ಇರುವ ನಿವೇಶನದಲ್ಲಿ ಪೂಜಾ ವಿಧಿ ವಿಧಾನಗಳ ಜೊತೆ ವಿವಿಧ ಬಂಟರ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳ ಸಮ್ಮುಖದಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರಿಶ್ ಶೆಟ್ಟಿಯವರು ಕಾಮಗಾರಿಯ ಆರಂಭೋತ್ಸವವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿಗಳಾದ ಜಯಕರ ಶೆಟ್ಟಿ ಇಂದ್ರಾಳಿ,ಪಡುಬಿದ್ರಿ ಬಂಟ ಸಂಘದ ಅಧ್ಯಕ್ಷಡಾ. ದೇವಿ ಪ್ರಸಾದ್ ಶೆಟ್ಟಿ, ಒಕ್ಕೂಟದ ಪೋಷಕರಾದ ನವೀನ್ ಚಂದ್ರ ಶೆಟ್ಟಿ, ಮುಲ್ಕಿ ನಗರಸಭೆ ಅಧ್ಯಕ್ಷ ಸುಭಾಷ್ ಶೆಟ್ಟಿ ,ರಾಜೇಶ್ ಶೆಟ್ಟಿ,ಒಕ್ಕೂಟದ ಮಾಜಿ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ,ಮುಲ್ಕಿ ಬಂಟರ ಸಂಘದ ಸಂತೋಷ್ ಕುಮಾರ್ ಹೆಗಡೆ, ಪುರುಷೋತ್ತಮ ಶೆಟ್ಟಿ,ಜೀವನ್ ಶೆಟ್ಟಿ, ಅಮೂಲ್ಯ ಶೆಟ್ಟಿ, ಸಾಯಿನಾಥ್ ಶೆಟ್ಟಿ, ಗಂಗಾಧರ ಶೆಟ್ಟಿ, ಅಶೋಕ ಶೆಟ್ಟಿ, ಶರತ್ ಶೆಟ್ಟಿ, ಮುರಳೀಧರ ಭಂಡಾರಿ,

ಶ್ರೀಶ ಆರ್ ಶೆಟ್ಟಿ,ನಿಶಾಂತ್ ಶೆಟ್ಟಿ, ಚಂದ್ರಕಲಾ ಶೆಟ್ಟಿ,ಕರುಣಾಕರ ಶೆಟ್ಟಿ, ರಂಗನಾಥ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ,ಉಲ್ಲಾಸ್ ಆರ್ ಶೆಟ್ಟಿ ಲೋಕಯ್ಯ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಪ್ರವೀಣ್ ಶೆಟ್ಟಿ, ರಂಗನಾಥ ಶೆಟ್ಟಿ,ಪುಷ್ಪರಾಜ ಶೆಟ್ಟಿ ಕುಡಂಬೂರು ಸಾಲೆತ್ತೂರು ಬಂಟರ ಸಂಘದ ಅಧ್ಯಕ್ಷ ದೇವಪ್ಪ ಶೇಖ, ಅಮರೇಶ ಶೆಟ್ಟಿ ತಿರುವಾಜೆ, ಮಮತಾ ಶೆಟ್ಟಿ,ಉದಯಕುಮಾರ್ ರೈ ಪ್ರತಿಮಾ ರೈ, ರವಿ ಶೆಟ್ಟಿ ಜತ್ತಬೆಟ್ಟು, ಸುರೇಶ್ ಶೆಟ್ಟಿ ಸೂರಿಂಜೆ, ಗೋಪಾಲಕೃಷ್ಣ ಶೆಟ್ಟಿ,ತೋನ್ಸೆ ಬಂಟರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ, ಜಪ್ಪು ಬಂಟರ ಸಂಘದ ಅಧ್ಯಕ್ಷ ಸತ್ಯಪ್ರಸಾದ ಶೆಟ್ಟಿ,ಬಜಪೆ ಬಂಟರ ಸಂಘದ ಅಧ್ಯಕ್ಷ ಸುಕೇಶ್ ಮಾನೈ, ನವೀನ್ ಶೆಟ್ಟಿ,ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಮತ್ತು ಇನ್ನಿತರ ಗಣ್ಯರುಉಪಸ್ಥಿತರಿದ್ದರು.

Related Posts

Leave a Reply

Your email address will not be published.