ಕೂಳೂರಿನ ಮೇಲ್ಸೇತುವೆ ತಳಭಾಗ ಸುಂದರೀಕರಣ :ಫೆ.9ಕ್ಕೆ ಲೋಕಾರ್ಪಣೆ ಕಾರ್ಯಕ್ರಮ

ಸುರತ್ಕಲ್: “ಕುಳೂರಿನ ಮೇಲ್ಸೇತುವೆ ತಳಭಾಗದಲ್ಲಿ ತ್ಯಾಜ್ಯ ರಾಶಿ ಬಿದ್ದು ಸಾರ್ವಜನಿಕರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ನಾವು ನಾಗರಿಕ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ತಂದು 1,100,00 ರೂ. ಖರ್ಚು ಮಾಡಿ ಫ್ಲೈ ಓವರ್ ಕೆಳಗಡೆ ಸುಂದರಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಫೆಬ್ರವರಿ 9ರಂದು ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದುನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ಹೇಳಿದರು.

ಅವರು ಸುರತ್ಕಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಹಸಿರನ್ನು ಉಳಿಸುವ ನಿಟ್ಟಿನಲ್ಲಿ ನಾಲ್ಕೈದು ವರ್ಷ ಚೆನ್ನಾಗಿ ನೋಡಿಕೊಂಡೆವು. ಆದರೆ ಕೋವಿಡ್ ಸಂದರ್ಭದಲ್ಲಿ ನಿರ್ವಹಣೆ ಕಷ್ಟವಾಯಿತು. ಕೋವಿಡ್ ವೇಳೆ ನಿರಾಶ್ರಿತರಿಗೆ ಸಾಮಾಜಿಕ ಸಂಘಟನೆಗಳು ಆಹಾರದ ಪೆÇಟ್ಟಣವನ್ನು ವಿತರಿಸಿದು,್ದ ಇಲ್ಲಿ ರಾಶಿ ಬಿದ್ದಿತ್ತು. ಅದನ್ನು ಸ್ಥಳೀಯ ಮನಪಾ ಸದಸ್ಯರಿಗೆ ಹೇಳಿ ಸ್ಥಳಾಂತರ ಮಾಡಿದ್ದೇವೆ. ಮತ್ತೆ ಇದಕ್ಕಾಗಿ ಸ್ಥಳೀಯರ ಸಹಕಾರ ಕೋರಿದ್ದು 4 ಲಕ್ಷ ರೂ. ಸಂಗ್ರಹಿಸಲಾಗಿದೆ. 8 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದ್ದು ಬರುವ ಫೆ.9ರಂದು ಸಂಜೆ 4:30ಕ್ಕೆ ಲೋಕಾರ್ಪಣೆಗೊಳಿಸಲಾಗುತ್ತದೆ” ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಮಿತಿ ಅಧ್ಯಕ್ಷ ಗುರುಚಂದ್ರ ಹೆಗ್ಡೆ, ಗೌರವಾಧ್ಯಕ್ಷ ಎಂ. ಎಸ್. ಪುತ್ರನ್, ಕಾರ್ಯದರ್ಶಿ ಗಣೇಶ್ ಶೆಟ್ಟಿ, ಉಪಾಧ್ಯಕ್ಷರಾದ ಮನೋಜ್ ಚಂದ್ರ ಶೆಟ್ಟಿ, ಶ್ರೀನಿವಾಸ್ ಕೂಳೂರು, ಕೋಶಾಧಿಕಾರಿ ಕ್ಲೇವರ್ ಡಿಸೋಜ, ಚಂದ್ರ ಶೆಟ್ಟಿ, ಮನೋಹರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.