ಮಂಗಳೂರು : ವಾಮಂಜೂರಿನ ಎಸ್‌ಜೆಇಸಿಯಲ್ಲಿ ಅಂತಿಮ ವರ್ಷದ ಯುಜಿ ವಿದ್ಯಾರ್ಥಿಗಳಿಗೆ ವಿದಾಯ ಕಾರ್ಯಕ್ರಮ

ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಯುಜಿ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿದಾಯ ಕಾರ್ಯಕ್ರಮವು ಕಲಾಂ ಸಭಾಂಗಣದಲ್ಲಿ ನಡೆಯಿತು.



ಎಸ್‌ಜೆಇಸಿಯ ಪ್ರಾಂಶುಪಾಲರಾದ ಡಾ. ರಿಯೋ ಡಿಸೋಜಾ ಅವರು ಸ್ವಾಗತಿಸಿದರು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಸನತ್ ಸರಳಾಯ ಅವರು ಅಭಿನಂದನಾ ಭಾಷಣ ಮಾಡಿದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸರ್ವಿಕಾ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಸೋಹನ್ ಅಸ್ಟಿನ್ ಮಸ್ಕರೇನಸ್ ಅವರು ಕಾಲೇಜಿನಲ್ಲಿ ತಮ್ಮ ಸಮಯವನ್ನು ನೆನಪಸಿಸಿಕೊಂಡರು.



ಎಸ್‌ಜೆಇಸಿಯ ನಿರ್ದೇಶಕರಾದ ವಂ.ಫಾದರ್ ವಿಲ್ಪ್ರೆಡ್ ಪ್ರಕಾಶ್ ಡಿಸೋಜಾ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಡಾ. ಪುರುಷೋತ್ತಮ ಚಿಪ್ಪರ್ ಅವರು ಉಪಸ್ಥಿತರಿದ್ದರು. ಡಾ. ಅಶ್ವತಿ ಮತ್ತು ಸುಪ್ರೀತಾ ಡಿ.ಆರ್. ನಿರೂಪಿಸಿದರು.
