ಬ್ಯಾರಿ ಭಾಷಾ ದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳಿಗೆ ಆಹ್ವಾನ

ಮಂಗಳೂರು, ಸೆ.17: ಅಕ್ಟೋಬರ್ 3ರಂದು ನಡೆಯುವ ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ಅಖಿಲ ಭಾರತ ಬ್ಯಾರಿ ಪರಿಷತ್ ವಿವಿಧ ಬ್ಯಾರಿ ಸ್ಪರ್ಧೆಗಳನ್ನು ಆಯೋಜಿಸಿದೆ.
1) ಪ್ರಬಂಧ ಸ್ಪರ್ಧೆ: “ಪ್ರವಾದಿ ಮುಹಮ್ಮದ್ (ಸ.ಅ.) ಅವರ ಜೀವನ ಮತ್ತು ಸಂದೇಶ” ಎಂಬ ವಿಷಯದಲ್ಲಿ ಕನ್ನಡ ಲಿಪಿ ಬಳಸಿ ಬ್ಯಾರಿ ಭಾಷೆಯಲ್ಲಿ ನಾಲ್ಕು ಪುಟಗಳಿಗೆ ಮೀರದ ಪ್ರಬಂಧವನ್ನು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು (ಮುಕ್ತ ಸ್ಪರ್ಧೆ) ಬರೆದು ಸೆಪ್ಟೆಂಬರ್ 30ರೊಳಗೆ ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಕ್ಯಾಪಿಟಲ್ ಅವೆನ್ಯೂ, ತಳ ಅಂತಸ್ತು, ಸ್ಟೇಟ್ಬ್ಯಾಂಕ್ ಎದುರು, ಡಿಸಿ ಕಚೇರಿ ಬಳಿ ಮಂಗಳೂರು-1 ಈ ವಿಳಾಸಕ್ಕೆ ಕಳುಹಿಸಬೇಕು.2). ಬ್ಯಾರಿ ಒಗಟು ಸ್ಪರ್ಧೆ: ಅಖಿಲ ಭಾರತ ಬ್ಯಾರಿ ಪರಿಷತ್ ಕಚೇರಿಯಲ್ಲಿ ಸೆಪ್ಟೆಂಬರ್ 29ರಂದು ಮಧ್ಯಾಹ್ನ 2:30ಕ್ಕೆ ನಡೆಯುವ ಬ್ಯಾರಿ ಒಗಟು (ಎದುರು ಮಸಲೆ) ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಭಾಗವಹಿಸಬಹುದು.
3). ಬ್ಯಾರಿ ಆಶುಭಾಷಣ ಸ್ಪರ್ಧೆ: ಅಖಿಲ ಭಾರತ ಬ್ಯಾರಿ ಪರಿಷತ್ ಕಚೇರಿಯಲ್ಲಿ ಅಕ್ಟೋಬರ್ 1ರಂದು ಬೆಳಗ್ಗೆ 10:30ಕ್ಕೆ ನಡೆಯುವ ಬ್ಯಾರಿ ಆಶುಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು ಭಾಗವಹಿಸಬಹುದು. ಈ ಎರಡೂ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಸೆಪ್ಟೆಂಬರ್ 28ರೊಳಗೆ ಜಿ.ಎಂ.ಶಾಹುಲ್ ಹಮೀದ್ ಮೆಟ್ರೋ (9964570906) ಅಥವಾ ಬಿ.ಎ. ಮುಹಮ್ಮದ್ ಹನೀಫ್ (9343563717) ಅಥವಾ ಯೂಸುಫ್ ವಕ್ತಾರ್ (9008503993) ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನಮೂದಿಸಬಹುದು. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ, ಸ್ಮರಣಿಕೆ, ಪ್ರಮಾಣಪತ್ರ ನೀಡಲಾಗುವುದು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.
ಅಕ್ಟೋಬರ್ 3 ರಂದು ಬೆಳಿಗ್ಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಸಭಿಕರಿಗೆ “ಬ್ಯಾರಿ ಕ್ವಿಝ್” ಸ್ಪರ್ಧೆ ಕೂಡಾ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.